ಡೀಪ್ಸೀಕ್ CEO ಲಿಯಾಂಗ್ ಜಗತ್ತಿನ ಅತ್ಯಂತ ಶ್ರೀಮಂತ AI ಸ್ಟಾರ್ಟ್ಅಪ್ ಸ್ಥಾಪಕ
ಚೀನಾದ ಎಐ ಕಂಪನಿ ಡೀಪ್ಸೀಕ್ನ ಸ್ಥಾಪಕ ಮತ್ತು ಸಿಇಒ 41 ವರ್ಷದ ಲಿಯಾಂಗ್ ವೆಬ್ಫೆಂಗ್ ಜಗತ್ತಿನ ಅತ್ಯಂತ ಶ್ರೀಮಂತ ಎಐ ಸ್ಟಾರ್ಟ್ಅಪ್ ಸಂಸ್ಥಾಪಕ ಎನಿಸಿಕೊಂಡಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೆರ್ಸ್ ಸೂಚ್ಯಂಕದ ಪ್ರಕಾರ, ಕಂಪನಿಯ ಇತ್ತೀಚಿನ ನಿವ್ವಳ ಮೌಲ್ಯ ಸುಮಾರು ₹3.47 ಲಕ್ಷ ಕೋಟಿ (ಸುಮಾರು 1.61 ಟ್ರಿಲಿಯನ್ ಡಾಲರ್) ಆಗಿದೆ. ಈ ಮೂಲಕ ಓಪನ್ ಎಐ ಸಹ– ಸ
ಚೀನಾದ ಎಐ ಕಂಪನಿ ಡೀಪ್ಸೀಕ್ನ ಸ್ಥಾಪಕ ಮತ್ತು ಸಿಇಒ 41 ವರ್ಷದ ಲಿಯಾಂಗ್ ವೆಬ್ಫೆಂಗ್ ಜಗತ್ತಿನ ಅತ್ಯಂತ ಶ್ರೀಮಂತ ಎಐ ಸ್ಟಾರ್ಟ್ಅಪ್ ಸಂಸ್ಥಾಪಕ ಎನಿಸಿಕೊಂಡಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೆರ್ಸ್ ಸೂಚ್ಯಂಕದ ಪ್ರಕಾರ, ಕಂಪನಿಯ ಇತ್ತೀಚಿನ ನಿವ್ವಳ ಮೌಲ್ಯ ಸುಮಾರು ₹3.47 ಲಕ್ಷ ಕೋಟಿ (ಸುಮಾರು 1.61 ಟ್ರಿಲಿಯನ್ ಡಾಲರ್) ಆಗಿದೆ. ಈ ಮೂಲಕ ಓಪನ್ ಎಐ ಸಹ– ಸಂಸ್ಥಾಪಕ ಗ್ರೇಕ್ ಬ್ರಾಕ್ಮನ್ ಮತ್ತು ಆಂಥ್ರೊಪಿಕ್ ಸ್ಥಾಪಕ ಮತ್ತು ಸಿಇಒ ಡೇರಿಯೊ ಅಮೋಡಿ ಅವರನ್ನೂ ಮೀರಿಸಿದ್ದಾರೆ. ದೈನಿಕ್ ಭಾಸ್ಕರ್ ಸುದ್ದಿ ಸಂಸ್ಥೆ ವರದಿಯ ಪ್ರಕಾರ, ಲಿಯಾಂಗ್ ಬಾಲ್ಯದಿಂದಲೂ ಚಿಕ್ಕ ಚಿಕ್ಕ ವಿಚಾರಗಳಲ್ಲೂ ಕುತೂಹಲ ಹೊಂದಿದ್ದ ಬಾಲಕ. ಶಾಲೆಯಲ್ಲಿ ಸಿಗುವ ಯಾವುದೇ ಕಂಪ್ಯೂಟರ್ ಅಥವಾ ಎಲೆಕ್ಟ್ರಾನಿಕ್ ಸಾಧನವನ್ನು ಸಂಪೂರ್ಣವಾಗಿ ತೆಗೆದು ನೋಡಿ, ದುರಸ್ತಿ ಮಾಡುತ್ತಿದ್ದರು. ಇದರಿಂದ ಮನೆಯವರು ಮತ್ತು ಶಿಕ್ಷಕರಿಂದ ಆಗಾಗ ಬೈಗುಳವನ್ನೂ ಪಡೆಯುತ್ತಿದ್ದರು. ಆದರೂ ಪಟ್ಟುಬಿಡದೆ ಮುಂದುವರಿಸಿದರು. ಈ ಪರಿಶ್ರಮವು ನಂತರ AI ಚಿಪ್ಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿತು ಎನ್ನಲಾಗಿದೆ.8ನೇ ತರಗತಿಯಲ್ಲಿ ಕಾಲೇಜು ಗಣಿತ ಪರಿಹರಿಸಿದ್ದ ಲಿಯಾಂಗ್ಲಿಯಾಂಗ್ ಎಂಟನೇ ತರಗತಿಯಲ್ಲಿದ್ದಾಗ ಕಾಲೇಜಿನ ಪಾಠದಲ್ಲಿದ್ದ ಗಣಿತವನ್ನು ಪರಿಹರಿಸುತ್ತಿದ್ದರು. ಒಮ್ಮೆ, ಶಿಕ್ಷಕರೊಬ್ಬರು ನೀಡಿದ ಗಣಿತ ಸಮಸ್ಯೆಯನ್ನು ನಿಮಿಷಗಳಲ್ಲಿ ಲಿಯಾಂಗ್ ಪರಿಹರಿಸಿದ್ದರು. ಇದಾದ ನಂತರ ಶಾಲೆಯಲ್ಲಿ ‘ಗಣಿತ ಪ್ರತಿಭೆ’ ಎಂದೇ ಹೆಸರು ಪಡೆದಿದ್ದರು.1985 ರಲ್ಲಿ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಜನಿಸಿದ್ದ ಲಿಯಾಂಗ್, ಎಲೆಕ್ಟ್ರಾನಿಕ್ ಮತ್ತು ಇನ್ಫರ್ಮೇಷನ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆರಂಭದಲ್ಲಿ ತಮ್ಮ ಸಹಪಾಠಿಗಳೊಂದಿಗೆ ಸೇರಿ ‘ಹೈ-ಫ್ಲೈಯರ್’ ಹಣಕಾಸು ಹೂಡಿಕೆ ಸಂಸ್ಥೆ ಆರಂಭಿಸಿದ್ದರು. 2023 ರಲ್ಲಿ ಅದೇ ಸಂಸ್ಥೆಯ ತಂತ್ರಜ್ಞಾನವನ್ನು ಬಳಸಿ ‘ಡೀಪ್ಸೀಕ್’ ಎಂಬ AI ಕಂಪನಿಯನ್ನು ಪ್ರಾರಂಭಿಸಿದರು. 2025ರಲ್ಲಿ ಡೀಪ್ಸೀಕ್ ಅಬ್ಬರ2025 ರ ಆರಂಭದಲ್ಲಿ ಡೀಪ್ಸೀಕ್ ತನ್ನ AI ಮಾಡೆಲ್ ಅನ್ನು ಬಿಡುಗಡೆ ಮಾಡಿದಾಗ ಇಡೀ ವಿಶ್ವವೇ ತಿರುಗಿ ನೋಡಿತ್ತು. ಅಮೆರಿಕದ ಓಪನ್ಎಐನ ಚಾಟ್ಜಿಪಿಟಿ ಗೆ ಪೈಪೋಟಿ ನೀಡುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಡೀಪ್ಸೀಕ್ ಅತ್ಯಂತ ಕಡಿಮೆ ವೆಚ್ಚದಲ್ಲಿ ಜಗತ್ತಿಗೆ ಪರಿಚಯಿಸಿತ್ತು.ಓಪನ್ ಎಐ ಸಂಸ್ಥಾಪಕ ಸ್ಯಾಮ್ ಆಲ್ಟ್ಮನ್ ಅಥವಾ ಆಂಥ್ರೊಪಿಕ್ನ ಡೇರಿಯೊ ಅಮೋಡಿ ತಮ್ಮ ಕಂಪನಿಗಳಲ್ಲಿ ಕಡಿಮೆ ಪಾಲನ್ನು ಹೊಂದಿದ್ದಾರೆ. ಆದರೆ ಲಿಯಾಂಗ್ ವೆನ್ಫೆಂಗ್ ಅವರು ಡೀಪ್ಸೀಕ್ ಕಂಪನಿಯಲ್ಲಿ ಬರೋಬ್ಬರಿ ಶೇ 78 ರಷ್ಟು ಒಡೆತನವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಜೂನ್ 2026 ರಲ್ಲಿ ನಡೆದ ಡೀಪ್ಸೀಕ್ ಕಂಪನಿಯ ಒಟ್ಟು ಮೌಲ್ಯ 50 ಬಿಲಿಯನ್ ಡಾಲರ್ಗೆ ತಲುಪಿದೆ. ಇದರಿಂದಾಗಿ ಲಿಯಾಂಗ್ ಅವರ ಆಸ್ತಿ 16.7 ಬಿಲಿಯನ್ ಡಾಲರ್ನಿಂದ ನೇರವಾಗಿ 36 ಬಿಲಿಯನ್ ಡಾಲರ್ಗೆ ಜಿಗಿದಿದೆ.ಪ್ರಸ್ತುತ ಲಿಯಾಂಗ್ ಅವರು ಚೀನಾದ 8ನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.