ಯಳಂದೂರಿನಲ್ಲಿ ವಿಶ್ವ ಹಾವುಗಳ ದಿನದಂದು ವಿದ್ಯಾರ್ಥಿಗಳಿಗೆ ಹಾವಿನ ಮಾಹಿತಿ
ಯಳಂದೂರು: ಮನುಕುಲದ ವಿಕಾಸದ ಚರಿತ್ರೆಯಲ್ಲಿ ಹಾವುಗಳಿಗೂ ವಿಶಿಷ್ಟ ಸ್ಥಾನ ಇದೆ ಎಂದು ಉರುಗ ತಜ್ಞ ಸಂತೇಮರಹಳ್ಳಿ ಸ್ನೇಕ್ ಮಹೇಶ್ ಹೇಳಿದರು.ಪಟ್ಟಣದ ಎಸ್ಡಿವಿಎಸ್ ಶಾಲೆಯಲ್ಲಿ ಗುರುವಾರ ವಿಶ್ವ ಹಾವುಗಳ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಪ್ರಪಂಚದಲ್ಲಿ 4 ಸಾವಿರ ಉರಗ ಸಂತತಿ ಗುರುತಿಸಲಾಗಿದೆ. ಇವುಗಳಲ್ಲಿ 600 ಪ್ರಭೇದದ ಹಾವುಗಳು ವ

ಯಳಂದೂರು: ಮನುಕುಲದ ವಿಕಾಸದ ಚರಿತ್ರೆಯಲ್ಲಿ ಹಾವುಗಳಿಗೂ ವಿಶಿಷ್ಟ ಸ್ಥಾನ ಇದೆ ಎಂದು ಉರುಗ ತಜ್ಞ ಸಂತೇಮರಹಳ್ಳಿ ಸ್ನೇಕ್ ಮಹೇಶ್ ಹೇಳಿದರು.ಪಟ್ಟಣದ ಎಸ್ಡಿವಿಎಸ್ ಶಾಲೆಯಲ್ಲಿ ಗುರುವಾರ ವಿಶ್ವ ಹಾವುಗಳ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಪ್ರಪಂಚದಲ್ಲಿ 4 ಸಾವಿರ ಉರಗ ಸಂತತಿ ಗುರುತಿಸಲಾಗಿದೆ. ಇವುಗಳಲ್ಲಿ 600 ಪ್ರಭೇದದ ಹಾವುಗಳು ವಿಷಕಾರಿಯಾಗಿವೆ. ಆದರೆ, ಭಾರತದಲ್ಲಿ 300 ಪ್ರಭೇದದ ಹಾವುಗಳಿದ್ದು, 15 ಮಾತ್ರ ವಿಷಕಾರಿಗಳಾಗಿವೆ. ಕರ್ನಾಟಕದಲ್ಲಿ 4 ಮಾತ್ರ ವಿಷ ಜಂತುಗಳಾಗಿವೆ’ ಎಂದರು.ನಾಗರಹಾವು, ಮಂಡಲ, ಕಾಳಿಂಗಸರ್ಪ ಮತ್ತು ಕಟ್ಟಾವುಗಳು ನಾಡಿನ ತುಂಬ ಕಂಡುಬರುತ್ತವೆ. ಉಳಿದಂತೆ ಪಶ್ಚಿಮ ಮತ್ತು ಪೂರ್ವಘಟ್ಟಗಳಲ್ಲಿ ಅಳಿವಿನಂಚಿನ ಹಾವುಗಳು ಇವೆ, ಮಾನವನ ವಿಕಾಸಕ್ಕಿಂತ ಪೂರ್ವದಲ್ಲಿ ಜನ್ಮ ತಳೆದ ಹಾವುಗಳನ್ನು ರಕ್ಷಿಸುವ ಮೂಲಕ ರೈತರಿಗೆ ಭಾದಕವಾದ ಕ್ರಿಮಿ, ಕೀಟಗಳ ಹೆಚ್ಚಳವನ್ನು ಜೈವಿಕ ವಿಧಾನದಲ್ಲಿ ನಿಯಂತ್ರಿಸಬಹುದು ಎಂದು ಹೇಳಿದರು.ಹಾವು ಯಾವುದೇ ಕಾರಣಕ್ಕೂ ತೊಂದರೆ ನೀಡದೆ ಇದ್ದರೆ ಕಚ್ಚುವುದಿಲ್ಲ. ಅವುಗಳನ್ನು ತುಳಿದಾಗ ಇಲ್ಲವೆ ಅಪಾಯ ಎದುರಾದಾಗ ಬುಸುಗುಟ್ಟುತ್ತವೆ. ಮನೆಗಳಿಗೆ ಪ್ರವೇಶಿಸಿದರೆ ಉರಗ ತಜ್ಞರಿಗೆ ತಿಳಿಸಿ ರಕ್ಷಿಸಬೇಕು. ಮನೆ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಹಾವುಗಳ ಉಪಟಳ ತಪ್ಪಿಸಬಹುದು ಎಂದು ವಿವರಿಸಿದರು.ಮುಖ್ಯ ಶಿಕ್ಷಕಿ ದೀಪಾ, ನಂದಿನಿ, ಶಿವಮೂರ್ತಿ, ಮಂಜುನಾಥ್, ರೂಪ, ಅಮೃತ, ಬಂಗಾರು ಇದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260718-37-137808646