ಕೊಡಚಾದ್ರಿ: ಬೆಂಗಳೂರು ಮೂಲದ ಪ್ರವಾಸಿಗ ಹೃದಯಘಾತದಿಂದ ನಿಧನ
ಹೊಸನಗರ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡಚಾದ್ರಿ ಸಮೀಪ ಪ್ರವಾಸಿಗನೊಬ್ಬ ಹೃದಯಘಾತಕ್ಕೆ ಒಳಗಾಗಿ ಸಾವು ಕಂಡ ಘಟನೆ ಸಂಭವಿಸಿದೆ.ಬೆಂಗಳೂರು ಮೂಲದ ಶ್ರೀಕಾಂತ್ (28) ಎಂಬುವರು ಕೊಡಚಾದ್ರಿ ಗಿರಿ ವೀಕ್ಷಣೆಗಾಗಿ ಸ್ನೇಹಿತರೊಂದಿಗೆ ಶುಕ್ರವಾರ ಆಗಮಿಸಿದ್ದು ಸಂಪೇಕಟ್ಟೆ ಸಮೀಪದ ಕಟ್ಟಿನಹೊಳೆಯ ತಮ್ಮ ಸ್ನೇಹಿತರ ಮನೆಯಲ್ಲಿ ತಂಗಿದ್ದರು. ಶನಿವಾರ ಮುಂಜಾನೆ ಕ

ಹೊಸನಗರ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡಚಾದ್ರಿ ಸಮೀಪ ಪ್ರವಾಸಿಗನೊಬ್ಬ ಹೃದಯಘಾತಕ್ಕೆ ಒಳಗಾಗಿ ಸಾವು ಕಂಡ ಘಟನೆ ಸಂಭವಿಸಿದೆ.ಬೆಂಗಳೂರು ಮೂಲದ ಶ್ರೀಕಾಂತ್ (28) ಎಂಬುವರು ಕೊಡಚಾದ್ರಿ ಗಿರಿ ವೀಕ್ಷಣೆಗಾಗಿ ಸ್ನೇಹಿತರೊಂದಿಗೆ ಶುಕ್ರವಾರ ಆಗಮಿಸಿದ್ದು ಸಂಪೇಕಟ್ಟೆ ಸಮೀಪದ ಕಟ್ಟಿನಹೊಳೆಯ ತಮ್ಮ ಸ್ನೇಹಿತರ ಮನೆಯಲ್ಲಿ ತಂಗಿದ್ದರು. ಶನಿವಾರ ಮುಂಜಾನೆ ಕೊಡಚಾದ್ರಿ ಶಿಖರ ವೀಕ್ಷಣೆಗೆ ಹೊರಡುವ ಯೋಜನೆ ರೂಪಿಸಿದ್ದರು. ಆದರೆ ರಾತ್ರಿ ಅವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ತಂಗಿದ್ದ ಮನೆಯಲ್ಲಿಯೇ ರಾತ್ರಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರತರಲಾಗಿದೆ. ಶ್ರೀಕಾಂತ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.ಮೃತ ಶ್ರೀಕಾಂತ್ ಮೃತ ದೇಹವನ್ನು ಹೊಸನಗರ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೇ. ಕುಟುಂಬಸ್ಥರು ಬಂದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ. ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಗಿರಿ ಪ್ರವಾಸಕ್ಕೆ ಬಂದವರು ಹೃದಯಾಘಾತದಿಂದ ಸಾವು ಕಾಣುತ್ತಿರುವುದು ಇದು ಎರಡನೇ ಘಟನೆ ಆಗಿದೆ. ಈ ಹಿಂದೆ ನಿರ್ಮಾಪಕ ಭಾ.ಮ. ಹರೀಶ್ ಅವರ ಮಗ ಕೊಡಚಾದ್ರಿ ಗಿರಿ ಪ್ರವಾಸಕ್ಕೆ ಬಂದು ಹೃದಯಾಘಾತದಿಂದ ನಿಧನ ಹೊಂದಿದ್ದರು.ತಿಂಗಳಲ್ಲಿ ಎರಡು ಘಟನೆ