ಧಾರವಾಡದ ಖಾಸಗಿ ಶಾಲೆಯ 40ಕ್ಕೂ ಹೆಚ್ಚು ಮಕ್ಕಳಿಗೆ ವಿಚಿತ್ರ ಜ್ವರ
– ಕೈ-ಕಾಲು ನೋವಿನಿಂದ ವಿದ್ಯಾರ್ಥಿಗಳ ನರಳಾಟ ಧಾರವಾಡ: ಅಳ್ನಾವರದ (Dharwad) ಖಾಸಗಿ ವಸತಿ ಶಾಲೆಯಲ್ಲಿ ಓದುತ್ತಿರುವ ಸುಮಾರು 40ಕ್ಕೂ ಹೆಚ್ಚು ಮಕ್ಕಳಲ್ಲಿ ವಿಚಿತ್ರ ಜ್ವರ ( Viral Fever) ಕಾಣಿಸಿಕೊಂಡಿದ್ದು, ಜ್ವರದ ಜೊತೆಗೆ ಕೈ-ಕಾಲು ನೋವು ಹಾಗೂ ನರಗಳು ಜಗ್ಗಿದಂತಾಗುತ್ತಿರುವ ಲಕ್ಷಣಗಳಿಂದ ಮಕ್ಕಳು ತೀವ್ರವಾಗಿ ಬಳಲುತ್ತಿದ್ದಾರೆ. ಅಳ್ನಾವರದ ಖಾಸಗಿ ವಸತಿ ಶಾಲೆ ಹಾ

– ಕೈ-ಕಾಲು ನೋವಿನಿಂದ ವಿದ್ಯಾರ್ಥಿಗಳ ನರಳಾಟ ಧಾರವಾಡ: ಅಳ್ನಾವರದ (Dharwad) ಖಾಸಗಿ ವಸತಿ ಶಾಲೆಯಲ್ಲಿ ಓದುತ್ತಿರುವ ಸುಮಾರು 40ಕ್ಕೂ ಹೆಚ್ಚು ಮಕ್ಕಳಲ್ಲಿ ವಿಚಿತ್ರ ಜ್ವರ ( Viral Fever) ಕಾಣಿಸಿಕೊಂಡಿದ್ದು, ಜ್ವರದ ಜೊತೆಗೆ ಕೈ-ಕಾಲು ನೋವು ಹಾಗೂ ನರಗಳು ಜಗ್ಗಿದಂತಾಗುತ್ತಿರುವ ಲಕ್ಷಣಗಳಿಂದ ಮಕ್ಕಳು ತೀವ್ರವಾಗಿ ಬಳಲುತ್ತಿದ್ದಾರೆ. ಅಳ್ನಾವರದ ಖಾಸಗಿ ವಸತಿ ಶಾಲೆ ಹಾಗೂ ಕಸ್ತೂರಬಾ ವಸತಿ ನಿಲಯದ ಮಕ್ಕಳಲ್ಲೇ ಈ ಲಕ್ಷಣಗಳು ಕಂಡುಬಂದಿವೆ. ಕಳೆದ ಎರಡು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು, ಕೈ-ಕಾಲು ನೋವಿನಿಂದ ಕೆಲ ಮಕ್ಕಳು ನರಳಾಡುತ್ತಿದ್ದಾರೆ.ಇದನ್ನೂ ಓದಿ ಅಣ್ಣಿಗೇರಿಯಲ್ಲಿ ಗೀಸರ್ಗೆ ಅಳವಡಿಸಿದ್ದ ಸಿಲಿಂಡರ್ ಸ್ಫೋಟ – ಮೂವರಿಗೆ ಗಾಯ ಅಸ್ವಸ್ಥಗೊಂಡ ಮಕ್ಕಳಲ್ಲಿ 8 ಮಂದಿಯನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಮಕ್ಕಳಿಗೆ ಅಳ್ನಾವರ, ಹಳಿಯಾಳ ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಮಕ್ಕಳಲ್ಲಿ ಕಂಡುಬಂದಿರುವ ಲಕ್ಷಣಗಳು ಇನ್ಫ್ಲುಯೆಂಜಾ A & B ಅಥವಾ ವೈರಲ್ ಮಯೋಸೈಟಿಸ್ (Viral Myositis) ಆಗಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಜ್ವರದ ವೇಳೆ ಕೈ-ಕಾಲು ಮುಟ್ಟಿದರೂ ತೀವ್ರ ನೋವು ಕಾಣಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದ್ದು, ಇದು ಯಾವ ಸೋಂಕು ಎಂಬುದನ್ನು ಪರೀಕ್ಷೆಗಳ ಮೂಲಕ ವೈದ್ಯರು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.ಇದನ್ನೂ ಓದಿ : ರೈತರು ಯಾವ್ದೇ ಕಾರಣಕ್ಕೂ ಕೃಷಿಗೆ ನೀರು ಬಳಕೆ ಮಾಡಬಾರದು: ಸಿಎಂ ಡಿಕೆಶಿ ಮತ್ತೆ ವಾರ್ನಿಂಗ್