ಎತ್ತು, ಟ್ರ್ಯಾಕ್ಟರ್ ಇಲ್ಲ – ಬಿತ್ತನೆ ಕೂರಿಗೆಯನ್ನು ತಾವೇ ಎಳೆದ ವೃದ್ಧ ದಂಪತಿ
ಬೀದರ್: ಹೊಲದಲ್ಲಿ ಎತ್ತು ಅಥವಾ ಟ್ರ್ಯಾಕ್ಟರ್ ಓಡಬೇಕಾದ ಜಾಗದಲ್ಲಿ, ವೃದ್ಧ ದಂಪತಿಯೇ ಬಿತ್ತನೆ (Farmers) ಕೂರಿಗೆಯನ್ನು ಎಳೆದು ಬೀಜ ಬಿತ್ತಿದ ಘಟನೆ ಬೀದರ್ (Bidar) ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದಲ್ಲಿ ನಡೆದಿದೆ. ಆರ್ಥಿಕ ಸಂಕಷ್ಟದ ನಡುವೆ ಬದುಕು ಸಾಗಿಸುತ್ತಿರುವ ತಿಪ್ಪಣ್ಣ-ಗಂಗಮ್ಮ ದಂಪತಿಗೆ ಎತ್ತು ಬಾಡಿಗೆಗೆ ತರುವುದಕ್ಕೂ, ಟ್ರ್ಯಾಕ್ಟರ

ಬೀದರ್: ಹೊಲದಲ್ಲಿ ಎತ್ತು ಅಥವಾ ಟ್ರ್ಯಾಕ್ಟರ್ ಓಡಬೇಕಾದ ಜಾಗದಲ್ಲಿ, ವೃದ್ಧ ದಂಪತಿಯೇ ಬಿತ್ತನೆ (Farmers) ಕೂರಿಗೆಯನ್ನು ಎಳೆದು ಬೀಜ ಬಿತ್ತಿದ ಘಟನೆ ಬೀದರ್ (Bidar) ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದಲ್ಲಿ ನಡೆದಿದೆ. ಆರ್ಥಿಕ ಸಂಕಷ್ಟದ ನಡುವೆ ಬದುಕು ಸಾಗಿಸುತ್ತಿರುವ ತಿಪ್ಪಣ್ಣ-ಗಂಗಮ್ಮ ದಂಪತಿಗೆ ಎತ್ತು ಬಾಡಿಗೆಗೆ ತರುವುದಕ್ಕೂ, ಟ್ರ್ಯಾಕ್ಟರ್ ಬಳಸುವುದಕ್ಕೂ ಹಣವಿಲ್ಲ. ಹೀಗಾಗಿ ಇಬ್ಬರೂ ತಾವೇ ಕೂರಿಗೆಗೆ ಹೆಗಲು ಕೊಟ್ಟು ಹೊಲದಲ್ಲಿ ಬಿತ್ತನೆ ಮಾಡಿದ್ದಾರೆ. ವೃದ್ಧಾಪ್ಯದಲ್ಲೂ ಬೆವರು ಸುರಿಸಿ ಕೃಷಿ ಮಾಡುತ್ತಿರುವ ಈ ದಂಪತಿಗೆ ನೆರವಿನ ಹಸ್ತ ಸಿಕ್ಕಿಲ್ಲ. ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿರುವ ದಂಪತಿ, ತಮಗೆ ಸ್ವಂತ ಮನೆ ಇಲ್ಲ, ಸಾಕಷ್ಟು ಜಮೀನು ಇಲ್ಲ, ಸರ್ಕಾರದಿಂದ ಯಾವುದೇ ಸೌಲಭ್ಯವೂ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮೊದಲು ಉದ್ದು ಬಿತ್ತನೆ ಮಾಡಿದ್ದರೂ ಮಳೆ ಕೊರತೆಯಿಂದ ಮೊಳಕೆ ಬರಲಿಲ್ಲ. ಇದರಿಂದ ಅದೇ ಜಮೀನಿನಲ್ಲಿ ಮತ್ತೆ ತೊಗರಿ ಬಿತ್ತನೆ ಮಾಡಲು ಮುಂದಾಗಿದ್ದಾರೆ.ಇದನ್ನೂ ಓದಿ: ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಯುವಕ ಹೃದಯಾಘಾತದಿಂದ ಸಾವು ನಮಗೆ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ನಮ್ಮ ಪರಿಸ್ಥಿತಿಯನ್ನು ನೋಡಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಸಹಾಯಕ್ಕೆ ಬರಬೇಕು ಎಂದು ವೃದ್ಧ ದಂಪತಿ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಟೀಂ ಇಂಡಿಯಾದ ಅಂಡರ್-19 ವಿಶ್ವಕಪ್ ವಿಜೇತ ಸ್ಟಾರ್ ಬಂಧನ