ಮನೆಯಲ್ಲೇ ಕುಳಿತು ನೋಡಬಹುದಾದ ಕನ್ನಡದ ಕಿರುಚಿತ್ರಗಳಿವು...
ವಾರಾಂತ್ಯವನ್ನು ಹೆಚ್ಚಿನ ಜನರು ವಿಶ್ರಾಂತಿಗೇ ಮೀಸಲಿಡುತ್ತಾರೆ. ಕೆಲವರು ಚಾರಣ, ಪ್ರವಾಸ ಎಂದು ಸುತ್ತುತ್ತಿದ್ದರೆ, ಇನ್ನೂ ಕೆಲವರು ತಮ್ಮದೇ ಹವ್ಯಾಸಗಳಲ್ಲಿ ತೊಡಗಿಕೊಳ್ಳುತ್ತಾರೆ. ವೀಕೆಂಡ್ನಲ್ಲಿ ಒಂದೊಳ್ಳೆ ಸಿನಿಮಾ ನೋಡಬೇಕಪ್ಪಾ ಎನ್ನುವವರೂ ಹಲವರಿದ್ದಾರೆ. ಆದರೆ ಮೂರು ತಾಸು ಒಂದೇ ಕಡೆ ಕುಳಿತು ಸಿನಿಮಾ ನೋಡುವುದು ಕಷ್ಟ ಎನ್ನುವವರಿಗಾಗಿ ಅನೇಕ ಶಾರ್ಟ್ ಸಿನಿ

ವಾರಾಂತ್ಯವನ್ನು ಹೆಚ್ಚಿನ ಜನರು ವಿಶ್ರಾಂತಿಗೇ ಮೀಸಲಿಡುತ್ತಾರೆ. ಕೆಲವರು ಚಾರಣ, ಪ್ರವಾಸ ಎಂದು ಸುತ್ತುತ್ತಿದ್ದರೆ, ಇನ್ನೂ ಕೆಲವರು ತಮ್ಮದೇ ಹವ್ಯಾಸಗಳಲ್ಲಿ ತೊಡಗಿಕೊಳ್ಳುತ್ತಾರೆ. ವೀಕೆಂಡ್ನಲ್ಲಿ ಒಂದೊಳ್ಳೆ ಸಿನಿಮಾ ನೋಡಬೇಕಪ್ಪಾ ಎನ್ನುವವರೂ ಹಲವರಿದ್ದಾರೆ. ಆದರೆ ಮೂರು ತಾಸು ಒಂದೇ ಕಡೆ ಕುಳಿತು ಸಿನಿಮಾ ನೋಡುವುದು ಕಷ್ಟ ಎನ್ನುವವರಿಗಾಗಿ ಅನೇಕ ಶಾರ್ಟ್ ಸಿನಿಮಾಗಳೂ ಯೂಟ್ಯೂಬ್ನಲ್ಲಿ ಲಭ್ಯವಿವೆ. ಹೆಚ್ಚೆಂದರೆ ಅರ್ಧಗಂಟೆಯಲ್ಲಿ ಸಿನಿಮಾ ಮುಗಿಯುತ್ತದೆ. ಅನೇಕ ಹೊಸ ತಂಡಗಳು ಅರ್ಥಪೂರ್ಣ ಸಂದೇಶ ನೀಡುವ ಅನೇಕ ಶಾರ್ಟ್ ಸಿನಿಮಾಗಳನ್ನು ನಿರ್ಮಾಣ ಮಾಡಿವೆ. ನಟನಾ ಕ್ಷೇತ್ರಕ್ಕೆ ಬರಬೇಕೆನ್ನುವ ಅದೆಷ್ಟೋ ಕಲಾವಿದರಿಗೆ ಶಾರ್ಟ್ ಸಿನಿಮಾಗಳೇ ಕೈಹಿಡಿದಿವೆ. ಹಾಗಾದರೆ ಈ ವಾರಾಂತ್ಯದಲ್ಲಿ ಒಳ್ಳೆಯ ಅನುಭವ ಪಡೆಯಲು ಯಾವೆಲ್ಲಾ ಶಾರ್ಟ್ ಸಿನಿಮಾಗಳನ್ನು ನೋಡಬಹುದು ಎನ್ನುವ ಸಲಹೆ ಇಲ್ಲಿದೆ. ನಿಮ್ಮ ಗಮನಕ್ಕೆಶಿಶಿರ ಕುಮಾರ್ ಎಸ್, ಜಯಸೂರ್ಯ ನಾಯಕ್, ಧನಂಜಯ ನಟಿಸಿರುವ ಈ ಶಾರ್ಟ್ ಸಿನಿಮಾ ಸದ್ಯ ಯೂಟ್ಯೂಬ್ನಲ್ಲಿ ಸದ್ದು ಮಾಡುತ್ತಿದೆ. ಜ್ಯೋತಿರ್ಮೇಘ ಸ್ಟುಡಿಯೋಸ್, ಪೂರ್ಣದೀಪ ನಿರ್ಮಾಣದ ಈ ಸಿನಿಮಾ ದಿವಾನ್ ಎಂಬ ಹುಡುಗನನ್ನು ಗಮನ್ ಎಂಬ ರಹಸ್ಯಮಯ ವ್ಯಕ್ತಿ ಅಪಹರಿಸಿದ ನಂತರ ನಡೆಯುವ ಕಥೆಯನ್ನು ಹೊಂದಿದೆ. ಥ್ರಿಲರ್ ಸಿನಿಮಾ ಇದಾಗಿದ್ದು 27 ನಿಮಿಷಗಳದ್ದಾಗಿದೆ. ಮಾರ್ಕ್ಸ್ ಕಾರ್ಡ್ಪಿಆರ್ಕೆ ಸ್ಟುಡಿಯೋ ನಿರ್ಮಾಣದ ಈ ಸಿನಿಮಾ ಫೀಲ್ ಗುಡ್ ಕ್ಲಾಸ್ರೂಮ್ ಲವ್ ಸ್ಟೋರಿ ಕಥೆಯನ್ನು ಹೊಂದಿದೆ. ತರಗತಿಯಾಚೆಗಿನ ಪ್ರೀತಿಯ ಪಯಣವನ್ನು ತುಂಬಾ ಆಪ್ತವಾಗಿ ತೋರಿಸಲಾಗಿದ್ದು, ಕಾಲೇಜು ದಿನಗಳ ನೆನಪನ್ನು ಮರುಕಳಿಸಬಲ್ಲದು. ಲೈಫ್ ಈಸ್ ಬ್ಯೂಟಿಫುಲ್ ಎಮೋಷನಲ್ ಡ್ರಾಮಾ ಜಾನರ್ನ ಈ ಸಿನಿಮಾ, ಮಾನವೀಯ ಸಂಬಂಧಗಳು, ಪ್ರೀತಿ ಮತ್ತು ಜೀವನದ ಸಣ್ಣ ಸಣ್ಣ ಭಾವನೆಗಳನ್ನು ಕನೆಕ್ಟ್ ಮಾಡುವಂತಹ ಅದ್ಭುತವಾದ ಕಥೆಯನ್ನು ಹೊಂದಿದೆ. 26 ನಿಮಿಷದ ಈ ಸಿನಿಮಾದಲ್ಲಿ ಶ್ರೇಯಸ್ ಶೆಟ್ಟಿ , ಸಾನಿಕಾ ರಾಜ್, ಡಿ.ಆರ್.ಮುರಳೀಧರ್, ರೋಹಿಣಿ ಎನ್ನುವವರು ನಟಿಸಿದ್ದಾರೆ. ಬ್ಲೈಂಡ್ ಸ್ಪಾಟ್ದೃಷ್ಟಿ ಸ್ಟುಡಿಯೋಸ್ ನಿರ್ಮಾಣದ ಈ ಸಿನಿಮಾ 23 ನಿಮಿಷಗಳದ್ದಾಗಿದೆ. ಪ್ರದೀಪ್ ವಿ ನಿರ್ದೇಶನದ ಈ ಕಿರುಚಿತ್ರವು ಸಸ್ಪೆನ್ಸ್ ಪ್ರಿಯರಿಗೆ ಹೇಳಿಮಾಡಿಸಿದ್ದು. ಇಲಾಖೆಯಲ್ಲಿ ತಾರತಮ್ಯ ಎದುರಿಸುವ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಹಾಗೂ ಹಳ್ಳಿಯಿಂದ ನಗರಕ್ಕೆ ಬಂದು ಬದುಕಲು ಹೋರಾಡುವ ಮುಗ್ಧ ವ್ಯಕ್ತಿ — ಹೀಗೆ ಮೂರು ಪಾತ್ರಗಳ ಸುತ್ತ ಹೆಣೆದಿರುವ ಸಸ್ಪೆನ್ಸ್ ಕಥೆ ಇದಾಗಿದೆ.ನಾನು ಡೈರೆಕ್ಟರ್ಡ್ಯಾಡ್ಸ್ ಮನಿ ಸ್ಟುಡಿಯೋಸ್ ನಿರ್ಮಾಣದ ಈ ಸಿನಿಮಾ 13 ನಿಮಿಷಗಳದ್ದು. ಶಿವರಾಜ್ ಶೆಟ್ಟಿ ನಿರ್ದೇಶಿಸಿರುವ ಈ ಕಿರುಚಿತ್ರವು ಸಿನಿಮಾ ಮಾಡಬೇಕೆಂಬ ಕನಸು ಹೊತ್ತು ತಿರುಗುವ ಮತ್ತು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಲು ಹಂಬಲಿಸುವ ಯುವ ಪ್ರತಿಭೆಗಳ ಪಯಣವನ್ನು ತೋರಿಸುತ್ತದೆ. ಭಾವನಾತ್ಮಕ ಮತ್ತು ಸ್ಫೂರ್ತಿದಾಯಕ ಕಥೆಗಳನ್ನು ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆ.