ಸೊನಮ್ ವಾಂಗ್ಚೂಕ್ ಜೊತೆ ಕೇಂದ್ರ ಸರ್ಕಾರ ಮಾತನಾಡಲಿ: ಅಣ್ಣಾ ಹಜಾರೆ
ಮುಂಬೈ: ಕೇಂದ್ರ ಸರ್ಕಾರವು ಶಿಕ್ಷಣ ತಜ್ಞ ಸೊನಮ್ ವಾಂಗ್ಚೂಕ್ ಅವರೊಂದಿಗೆ ಮಾತುಕತೆ ನಡೆಸಬೇಕು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಶನಿವಾರ(ಜುಲೈ 18) ಆಗ್ರಹಿಸಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕಣದ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸೊನಮ್ ವಾಂಗ್ಚೂಕ್ ಅವರು ದೆಹಲಿಯ ಜಂತರ್ ಮಂತರ್ನ

ಮುಂಬೈ: ಕೇಂದ್ರ ಸರ್ಕಾರವು ಶಿಕ್ಷಣ ತಜ್ಞ ಸೊನಮ್ ವಾಂಗ್ಚೂಕ್ ಅವರೊಂದಿಗೆ ಮಾತುಕತೆ ನಡೆಸಬೇಕು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಶನಿವಾರ(ಜುಲೈ 18) ಆಗ್ರಹಿಸಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕಣದ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸೊನಮ್ ವಾಂಗ್ಚೂಕ್ ಅವರು ದೆಹಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಅವರನ್ನು ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು, ಪ್ರತಿಭಟನಾ ಸ್ಥಳದಿಂದ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.‘ಕೇಂದ್ರ ಸರ್ಕಾರವು ಸೊನಮ್ ವಾಂಗ್ಚೂಕ್ ಅವರ ಸಹನೆಯನ್ನು ಪರೀಕ್ಷಿಸಬಾರದು. ಅವರ ಬೇಡಿಕೆಗಳಿಗೆ ಒಪ್ಪಿಗೆ ಇದೆಯೇ ಅಥವಾ ಇಲ್ಲವೇ ಎಂದು ಬಹಿರಂಗವಾಗಿ ತಿಳಿಸಲಿ. ಆದರೆ, ಮಾತುಕತೆಯನ್ನು ಯಾಕೆ ನಡೆಸುತ್ತಿಲ್ಲ’ ಎಂದು ಅಣ್ಣಾ ಹಜಾರೆ ಪ್ರಶ್ನಿಸಿದ್ದಾರೆ. ಸೊನಮ್ ವಾಂಗ್ಚೂಕ್ ಅವರ ಹೋರಾಟಕ್ಕೆ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಹಾಗೂ ಅದರ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಬೆಂಬಲ ಘೋಷಿಸಿವೆ. ಈ ಪ್ರತಿಭಟನೆಯು 21ನೇ ದಿನಕ್ಕೆ ಕಾಲಿಟ್ಟಿದೆ. ಅಣ್ಣಾ ಹಜಾರೆ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ಲೋಕಪಾಲ ಕಾಯ್ದೆ ಜಾರಿ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ 2011ರಲ್ಲಿ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಉಪವಾಸ ನಿರತ ಸೊನಮ್ ವಾಂಗ್ಚೂಕ್ರನ್ನು ಆಸ್ಪತ್ರೆಗೆ ಕರೆದೊಯ್ದ ದೆಹಲಿ ಪೊಲೀಸರುಚಿಕಿತ್ಸೆ ನೀಡಿ ಏನಾದರೂ ಅನಾಹುತವಾದರೆ ಎಲ್ಲರನ್ನೂ ಹೊಣೆ ಮಾಡುವೆ: ಸೊನಮ್ ಪತ್ನಿಸೊನಮ್ ವಾಂಗ್ಚೂಕ್ರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿ: ಅರವಿಂದ ಕೇಜ್ರಿವಾಲ್ಆಸ್ಪತ್ರೆಯಲ್ಲೂ ಉಪವಾಸ: ಚಿಕಿತ್ಸೆ ಪಡೆಯಲು ಒಪ್ಪದ ವಾಂಗ್ಚೂಕ್