ಹುಬ್ಬಳ್ಳಿಯಲ್ಲಿ ಹಾಸ್ಟೆಲ್ ಪ್ರವೇಶದ ವಿಚಾರಕ್ಕೆ ಬಿಜೆಪಿ ಮುಖಂಡನ ಕೊಲೆ ಯತ್ನ
ಹುಬ್ಬಳ್ಳಿ: ಹಾಸ್ಟೆಲ್ ಪ್ರವೇಶ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೆಲವರು ಬಿಜೆಪಿ ಮುಖಂಡರೊಬ್ಬರ ಕೊಲೆಗೆ ಯತ್ನಿಸಿದ ಘಟನೆ ನಗರದ ಕೆಇಬಿ ರಸ್ತೆ ಬಳಿ ನಡೆದಿದೆ. ಶಾಂತಿ ಕಾಲೊನಿ ನಿವಾಸಿ ಪ್ರಮೋದ ಬಿಜವಾಡ ಅವರು ಶಹರ ಠಾಣೆಗೆ ದೂರು ನೀಡಿದ್ದಾರೆ. ಶಗುಪ್ತಾ ಕುಸುಗಲ್ ಅವರು ಸಹೋದರಿ ಅಲ್ಪಿತಾ ಜತೆಗೆ ಮಾತನಾಡುತ್ತಿದ್ದರು. ಆ ವೇಳೆ 6-7 ಮಂದಿ ಬಂದು

ಹುಬ್ಬಳ್ಳಿ: ಹಾಸ್ಟೆಲ್ ಪ್ರವೇಶ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೆಲವರು ಬಿಜೆಪಿ ಮುಖಂಡರೊಬ್ಬರ ಕೊಲೆಗೆ ಯತ್ನಿಸಿದ ಘಟನೆ ನಗರದ ಕೆಇಬಿ ರಸ್ತೆ ಬಳಿ ನಡೆದಿದೆ. ಶಾಂತಿ ಕಾಲೊನಿ ನಿವಾಸಿ ಪ್ರಮೋದ ಬಿಜವಾಡ ಅವರು ಶಹರ ಠಾಣೆಗೆ ದೂರು ನೀಡಿದ್ದಾರೆ. ಶಗುಪ್ತಾ ಕುಸುಗಲ್ ಅವರು ಸಹೋದರಿ ಅಲ್ಪಿತಾ ಜತೆಗೆ ಮಾತನಾಡುತ್ತಿದ್ದರು. ಆ ವೇಳೆ 6-7 ಮಂದಿ ಬಂದು ಹುಡುಗಿಯನ್ನು ಎಲ್ಲಿಗೆ ಕರೆದುಕೊಂಡು ಹೊರಟಿದ್ದೀಯಾ ಎಂದು ಪ್ರಶ್ನಿಸಿ, ಅವಾಚ್ಯವಾಗಿ ನಿಂದಿಸಿದ್ದಾರೆ. ನಂತರ ಹಲ್ಲೆ ನಡೆಸಿ ಕುತ್ತಿಗೆ ಒತ್ತಿ ಕೊಲೆಗೆ ಯತ್ನಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260719-24-1707997051
Read the complete story at Prajavani