ಸಫ್ದರ್ಜಂಗ್ ಆಸ್ಪತ್ರೆಯಿಂದ ವಾಂಗ್ಚೂಕ್ ಸ್ಥಳಾಂತರಕ್ಕೆ ದೆಹಲಿ HC ನಕಾರ
ನವದೆಹಲಿ: ಸಾಮಾಜಿಕ ಹೋರಾಟ ಗಾರ ಸೊನಮ್ ವಾಂಗ್ಚೂಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಭಾನುವಾರ ತಿರಸ್ಕರಿಸಿದೆ.ಸೊನಮ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೊ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರಣಾ ಅವರು, ‘ಈ ಹಂತದಲ್ಲಿ ಮಧ್ಯಂತರ ಆದೇಶ

ನವದೆಹಲಿ: ಸಾಮಾಜಿಕ ಹೋರಾಟ ಗಾರ ಸೊನಮ್ ವಾಂಗ್ಚೂಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಭಾನುವಾರ ತಿರಸ್ಕರಿಸಿದೆ.ಸೊನಮ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೊ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರಣಾ ಅವರು, ‘ಈ ಹಂತದಲ್ಲಿ ಮಧ್ಯಂತರ ಆದೇಶದ ಅಗತ್ಯವಿಲ್ಲ’ ಎಂದು ತಿಳಿಸಿದರು.‘ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ಉಪವಾಸ ಸತ್ಯಾಗ್ರಹನಿರತ ಸೊನಮ್ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಅವರ ಉಪವಾಸ ಸತ್ಯಾಗ್ರಹದ ವಿರುದ್ಧ ಬಲಪ್ರಯೋಗ ಮಾಡಲಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಮಧ್ಯಪ್ರವೇಶಕ್ಕೆ ನಿರಾಕರಿಸಿದರು. ಬಳಿಕ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿದರು.ಗೀತಾಂಜಲಿ ಅವರ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ‘ಸೊನಮ್ ಅವರು ಬಂಧನದಲ್ಲಿಲ್ಲ ಮತ್ತು ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ. ಹೀಗಾಗಿ ಅವರು ಆಯ್ಕೆ ಮಾಡಿದ ಆಸ್ಪತ್ರೆಗೆ ಸ್ಥಳಾಂತರವಾಗಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.ನ್ಯಾಯಾಲಯವು ‘ಸರ್ಕಾರವು ಸೊನಮ್ ಅವರನ್ನು ಜಂತರ್ಮಂತರ್ ನಿಂದ ಸಫ್ದರ್ಜಂಗ್ ಆಸ್ಪತ್ರೆಗೆಕರೆದೊಯ್ದಿರುವುದನ್ನು ‘ನಿರಂಕುಶ ಧೋರಣೆ’ ಎಂದು ಹೇಳಲಾಗದು’ ಎಂದು ಅಭಿಪ್ರಾಯಪಟ್ಟಿತು.ಸೊನಮ್ ಅವರ ಪತ್ನಿ, ಸಹೋದರ ಮತ್ತು ಬಾಮೈದ ಅವರಿಗೆ ಯಾವುದೇ ಸಮಯದಲ್ಲಿ ಸೊನಮ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ ಎಂಬುದನ್ನು ಕೋರ್ಟ್ ಗಮನಿಸಿತು. ಗೀತಾಂಜಲಿ ಅವರ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಸಫ್ದರ್ಜಂಗ್ ಆಸ್ಪತ್ರೆ ಮತ್ತು ನಗರ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ, ಮೂರು ದಿನಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚನೆ ನೀಡಿತು.ಸೊನಮ್ ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ಶನಿವಾರ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನೀಟ್ ಪರೀಕ್ಷೆಯ ಲ್ಲಿನ ಅವ್ಯವಹಾರಗಳನ್ನು ಖಂಡಿಸಿ ಜೂನ್ 28ರಿಂದ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.‘ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ’ದೆಹಲಿ ಪೊಲೀಸರು ಸೊನಮ್ ಅವರನ್ನು ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ಕರೆದೊಯ್ದಿರುವುದನ್ನು ನಾಗರಿಕ ಹಕ್ಕುಗಳ ಸಂಘಟನೆ ‘ಜನಹಸ್ತಕ್ಷೇಪ’ ಭಾನುವಾರ ಟೀಕಿಸಿವೆ.ಈ ಮೂಲಕ ಶಾಂತಿಯುತವಾಗಿ ಪ್ರತಿಭಟಿಸುವ ಪ್ರಜಾಸತ್ತಾತ್ಮಕ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದೆ.‘ಕೋಚಿಂಗ್ ಕೇಂದ್ರಗಳ ಭ್ರಷ್ಟಾಚಾರ ಮತ್ತು ಶೋಷಣೆಯಿಂದ ದೇಶದ ಯುವ ಜನರು ಮತ್ತು ವಿದ್ಯಾರ್ಥಿಗಳು ತೀವ್ರವಾಗಿ ನೊಂದಿದ್ದಾರೆ. ಈ ವಿಚಾರಗಳತ್ತ ಗಮನಹರಿಸಬೇಕಾದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೈಕ್ಷಣಿಕ ಸಂಸ್ಥೆಗಳ ಖಾಸಗೀಕರಣಕ್ಕೆ ಆದ್ಯತೆ ನೀಡುತ್ತಿವೆ’ಎಂದು ಆರೋಪಿಸಿದೆ.ಭಾರಿ ಪೊಲೀಸ್ ಭದ್ರತೆಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸೋಮವಾರ ಸಂಸತ್ ಭವನ ಚಲೊ ನಡೆಸುವುದಾಗಿ ಹೇಳಿದ್ದರೂ ಅಧಿಕೃತವಾಗಿ ಅನುಮತಿಯನ್ನು ಪಡೆದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂಸತ್ನ ಮುಂಗಾರು ಅಧಿವೇಶನವು ಸೋಮವಾರ ಪ್ರಾರಂಭವಾಗುತ್ತಿರುವುದರಿಂದ ಸಂಸತ್ ಭವನದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವ ವಾಹನವನ್ನೂ ತಪಾಸಣೆ ನಡೆಸದೆ ಮುಂದೆ ಸಾಗಲು ಬಿಡದಂತೆ ಹಲವೆಡೆ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.-ಕೀರ್ತಿ ಆಜಾದ್, ಟಿಎಂಸಿ ಸಂಸದಕೇಂದ್ರ ಸರ್ಕಾರವು ಪ್ರಜಾಸತ್ತಾತ್ಮಕ ಭಿನ್ನಮತವನ್ನು ದಮನ ಮಾಡುತ್ತಿದೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳನ್ನು ನಿರ್ಲಕ್ಷಿಸುತ್ತಿದೆ.ಫಿಫಾ ವಿಶ್ವಕಪ್ ಫೈನಲ್ ವೇದಿಕೆಯಲ್ಲಿ ಟ್ರಂಪ್, ಜಿಯಾನಿಗೇ ರೆಡ್ ಕಾರ್ಡ್!ವಿಮೆ ಹಣಕ್ಕಾಗಿ ಪ್ರಿಯಕರನ ಜತೆ ಸೇರಿ ಪತಿಯನ್ನು ಹಾವಿನಿಂದ ಕಚ್ಚಿಸಿ ಕೊಂದ ಪತ್ನಿಗೌಡರು ಅಧಿಕಾರ ಸ್ವೀಕರಿಸುವಾಗ ತಾಯಿ, ಪತ್ನಿ ಇಲ್ಲದ ನೋವು: ಉಕ್ಕಿದ ಭಾವ ಪ್ರವಾಹಫಿಫಾ ವಿಶ್ವಕಪ್: ಸ್ಪೇನ್–ಅರ್ಜೆಂಟೀನಾ ಮುಖಾಮುಖಿ ಸಾಧನೆ ಹೇಗಿದೆ? ಇಲ್ಲಿದೆ ವಿವರ