ಎಸ್ಐಆರ್ ಕಾರ್ಯದಲ್ಲಿ ತೊಡಗಿದ್ದ ಅಂಗನವಾಡಿ ಶಿಕ್ಷಕಿ ರತ್ನಾ ಐ.ಬಳಿಗೇರ ಸಾವು
ಮುಂಡರಗಿ: ತಾಲ್ಲೂಕಿನ ಬಾಗೇವಾಡಿ ಗ್ರಾಮದಲ್ಲಿ ಮತದಾರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯದಲ್ಲಿ ತೊಡಗಿದ್ದ ಅಂಗನವಾಡಿ ಶಿಕ್ಷಕಿ ರತ್ನಾ ಐ.ಬಳಿಗೇರ (43) ಅವರು ಶನಿವಾರ ಸಂಜೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಬಾಗೇವಾಡಿ ಗ್ರಾಮದ 138ನೇ ಬೂತ್ನಲ್ಲಿ ಬಿಎಲ್ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಸಿದುಬಿದ್ದ ಅವರನ್ನು ಬಾಗೇವಾಡಿ ಗ್ರಾಮದ ಪ್ರಾಥ

ಮುಂಡರಗಿ: ತಾಲ್ಲೂಕಿನ ಬಾಗೇವಾಡಿ ಗ್ರಾಮದಲ್ಲಿ ಮತದಾರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯದಲ್ಲಿ ತೊಡಗಿದ್ದ ಅಂಗನವಾಡಿ ಶಿಕ್ಷಕಿ ರತ್ನಾ ಐ.ಬಳಿಗೇರ (43) ಅವರು ಶನಿವಾರ ಸಂಜೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಬಾಗೇವಾಡಿ ಗ್ರಾಮದ 138ನೇ ಬೂತ್ನಲ್ಲಿ ಬಿಎಲ್ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಸಿದುಬಿದ್ದ ಅವರನ್ನು ಬಾಗೇವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಘಟನೆ ನಡೆದ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರು ಬಾಗೇವಾಡಿ ಗ್ರಾಮದಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ತಾವೇ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿದರು.ಹೆಚ್ಚಿನ ಚಿಕಿತ್ಸೆಗೆ ಮುಂಡರಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
Read the complete story at Prajavani