ಸೊನಮ್ ವಾಂಗ್ಚೂಕ್ ಪಯಣ: ರಾಜಕೀಯ ಪರಿವರ್ತನೆ ತರುವ ಹಾದಿಯಲ್ಲಿ ‘ಎಂಜಿನಿಯರ್’
ಶ್ರೀನಗರ: ಕೆಲವು ವರ್ಷಗಳ ಹಿಂದೆ ಸೊನಮ್ ವಾಂಗ್ಚೂಕ್ ಎಂಬ ವ್ಯಕ್ತಿ ಲಡಾಖ್ನಲ್ಲಿ ಕೃತಕ ನೀರ್ಗಲ್ಲು ಸೃಷ್ಟಿಸಿದ ಒಬ್ಬ ಎಂಜಿನಿಯರ್ ಹಾಗೂ ಹಿಂದಿಯ ‘ತ್ರಿ ಈಡಿಯಟ್ಸ್’ ಸಿನಿಮಾಕ್ಕೆ ಪ್ರೇರಣೆಯಾದ ವ್ಯಕ್ತಿತ್ವ ಎಂದಷ್ಟೇ ಜನರಿಗೆ ಪರಿಚಿತರಾಗಿದ್ದರು.ಆದರೆ ಇಂದು ಉಪವಾಸ ಸತ್ಯಾಗ್ರಹ, ಚಳವಳಿ ಹಾಗೂ ಕಾನೂನು ಹೋರಾಟಗಳ ಮೂಲಕ ಇಡೀ ದೇಶದ ಗಮನ ಸೆಳೆದ ರಾಜಕೀಯೇತರ ಹೋರಾಟದ ಶಕ್ತಿಯ

ಶ್ರೀನಗರ: ಕೆಲವು ವರ್ಷಗಳ ಹಿಂದೆ ಸೊನಮ್ ವಾಂಗ್ಚೂಕ್ ಎಂಬ ವ್ಯಕ್ತಿ ಲಡಾಖ್ನಲ್ಲಿ ಕೃತಕ ನೀರ್ಗಲ್ಲು ಸೃಷ್ಟಿಸಿದ ಒಬ್ಬ ಎಂಜಿನಿಯರ್ ಹಾಗೂ ಹಿಂದಿಯ ‘ತ್ರಿ ಈಡಿಯಟ್ಸ್’ ಸಿನಿಮಾಕ್ಕೆ ಪ್ರೇರಣೆಯಾದ ವ್ಯಕ್ತಿತ್ವ ಎಂದಷ್ಟೇ ಜನರಿಗೆ ಪರಿಚಿತರಾಗಿದ್ದರು.ಆದರೆ ಇಂದು ಉಪವಾಸ ಸತ್ಯಾಗ್ರಹ, ಚಳವಳಿ ಹಾಗೂ ಕಾನೂನು ಹೋರಾಟಗಳ ಮೂಲಕ ಇಡೀ ದೇಶದ ಗಮನ ಸೆಳೆದ ರಾಜಕೀಯೇತರ ಹೋರಾಟದ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರಲ್ಲಿನ ಈ ಪರಿವರ್ತನೆ ಹಂತಹಂತವಾಗಿ ಆಗಿದ್ದು.ಲಡಾಖ್ನ ಅಲ್ಚೀ ಗ್ರಾಮದಲ್ಲಿ 1966ರಲ್ಲಿ ಜನಿಸಿದ ವಾಂಗ್ಚೂಕ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ. 1988ರಲ್ಲಿ ‘ಲಡಾಖ್ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳವಳಿ’ ಸಂಸ್ಥೆಯನ್ನು ಹುಟ್ಟುಹಾಕಿದವರಲ್ಲಿ ಅವರೂ ಒಬ್ಬರು. ಈ ಮೂಲಕ ಸಾಂಪ್ರದಾಯಿಕ ಶೈಕ್ಷಣಿಕ ಪದ್ಧತಿಯ ಹೊರತಾದ, ಪ್ರಾಯೋಗಿಕ ಹಾಗೂ ಸಮುದಾಯ ಆಧರಿತ ಕಲಿಕೆಯನ್ನು ಮುನ್ನೆಲೆಗೆ ತಂದರು.ಜಾಗತಿಕ ಆಕರ್ಷಣೆಚಳಿಗಾಲದಲ್ಲಿ ನೀರನ್ನು ಹಿಡಿದಿಟ್ಟುಕೊಂಡು ಬೇಸಿಗೆ ಆರಂಭದಲ್ಲಿ ನೀರಿನ ಸೌಲಭ್ಯ ಒದಗಿಸುವ ಕೃತಕ ನೀರ್ಗಲ್ಲು ಜಾಗತಿಕವಾಗಿ ಗಮನ ಸೆಳೆಯಿತು.2018ರಲ್ಲಿ ರೇಮನ್ ಮ್ಯಾಗ್ಸೆಸೆ ಮತ್ತು ಪದ್ಮಶ್ರೀ ಗೌರವ ಅವರನ್ನು ಅರಸಿ ಬಂದವು.2019ರಲ್ಲಿ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ಬಳಿಕ ವಾಂಗ್ಚೂಕ್ ಅವರು ನಾಗರಿಕ ಚಳವಳಿಯ ಮುಂಚೂಣಿಯಲ್ಲಿ ಕಾಣ ತೊಡಗಿದರು. ಲಡಾಖ್ಗೆ ಸಾಂವಿಧಾನಿಕ ರಕ್ಷಣೆ, ಪರಿಸರ ಸಂರಕ್ಷಣೆ ಹಾಗೂ ಪೂರ್ಣಪ್ರಮಾಣದ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಹೋರಾಟಗಳನ್ನು ಆರಂಭಿಸಿದರು. ಅವರ ಉಪವಾಸ ಹಾಗೂ ದೆಹಲಿ ಚಲೊ ಚಳವಳಿಗಳು ಪ್ರಾದೇಶಿಕ ವಿಚಾರವೊಂದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಿದವು.