ಚಂದ್ರಕಾಂತ ಪೋಕಳೆ ಅವರ ಕವಿತೆ ‘ಪ್ರಾರ್ಥನೆ’
ದೇವರೇ, ಈ ದೇಶದಲ್ಲೂ ಸುರಿಸು ಮಳೆ.ಎಲ್ಲಿ ನಿನಗೆ ಬರುವುದೋ ರಗುತದ ವಾಸನೆ ಎಲ್ಲಿ ಹಿಂಸೆಯ ತೋಟದಲ್ಲಿ ಬೆಳೆಯುವುದೋ ಕಬ್ಬು ಅಥವಾ ಸೆಣಬು ದೇವರೇ, ನೀನು ಎಲ್ಲಿಯವರೆಗೆ ಇರುವಿಯೋಅಲ್ಲಿಯವರೆಗೂ ನಿಷಿದ್ಧ ವಿರಕ್ತಿ.ದೇವರೇ, ಈ ದೇಶದಲ್ಲೂ ಸುರಿಸು ಮಳೆ ಎಲ್ಲಿ ಮನುಷ್ಯರು ಗೊಬ್ಬರ ಹಾಕಿ ಬೆಳೆಸುವರೋ ಸಮಾಜಎಲ್ಲಿ ಬಲಿ ಹೋಗುವವರು ನಂಬುತ್ತಾರೋ ನಿನ್ನ ಮತ್ತು ಬಲಿ ತೆಗೆದುಕೊಳ್ಳುವವ

ದೇವರೇ, ಈ ದೇಶದಲ್ಲೂ ಸುರಿಸು ಮಳೆ.ಎಲ್ಲಿ ನಿನಗೆ ಬರುವುದೋ ರಗುತದ ವಾಸನೆ ಎಲ್ಲಿ ಹಿಂಸೆಯ ತೋಟದಲ್ಲಿ ಬೆಳೆಯುವುದೋ ಕಬ್ಬು ಅಥವಾ ಸೆಣಬು ದೇವರೇ, ನೀನು ಎಲ್ಲಿಯವರೆಗೆ ಇರುವಿಯೋಅಲ್ಲಿಯವರೆಗೂ ನಿಷಿದ್ಧ ವಿರಕ್ತಿ.ದೇವರೇ, ಈ ದೇಶದಲ್ಲೂ ಸುರಿಸು ಮಳೆ ಎಲ್ಲಿ ಮನುಷ್ಯರು ಗೊಬ್ಬರ ಹಾಕಿ ಬೆಳೆಸುವರೋ ಸಮಾಜಎಲ್ಲಿ ಬಲಿ ಹೋಗುವವರು ನಂಬುತ್ತಾರೋ ನಿನ್ನ ಮತ್ತು ಬಲಿ ತೆಗೆದುಕೊಳ್ಳುವವರು ಆಗಿರುತ್ತಾರೋ ನಿನ್ನದೇ ಅವತಾರ.ದೇವರೇ, ಈ ದೇಶದಲ್ಲೂ ಸುರಿಸು ಮಳೆ ಎಲ್ಲಿ ತೆರೆಯುತ್ತದೆ ಬರಗಾಲದ ದೈವ ಎಲ್ಲಿ ಶುರುವಿರುವುದೋ ಮಾನವೀಯತೆಯ ನಿರಂತರ ಯಂತ್ರ ಎಲ್ಲಿ ಸದಾ ನಡೆಯುವುದೋ ಪರೋಪಕಾರದ ಓವ್ಹರ್ ಟೈಮ್ದೇವರೇ, ಈ ದೇಶದಲ್ಲೂ ಸುರಿಸು ಮಳೆ ಎಲ್ಲಿ ಸಾಕಷ್ಟು ತಿನ್ನುವವರೂ ಹಾಡುತ್ತಾರೆ ಹಾಡು ಮತ್ತು ಉಪವಾಸ ಸಾಯುವವರೂ ನೀಡುತ್ತಾರೆ ಅವರಿಗೆ ಬೆಂಬಲ ಎಲ್ಲಿ ದುಷ್ಕಾಳ ಮತ್ತು ಸುಕಾಲ ಬಾಳುತ್ತವೆಯೋ ಕೂಡಿದೇವರೇ, ಈ ದೇಶದಲ್ಲೂ ಸುರಿಸು ಮಳೆ.ಮೂಲ ಮರಾಠಿ: ದಿಲೀಪ ಪುರುಷೋತ್ತಮ ಚಿತ್ರೆಕನ್ನಡಕ್ಕೆ: ಚಂದ್ರಕಾಂತ ಪೋಕಳೆ
Read the complete story at Prajavani