ಪ್ಯಾಡೆಡ್ ಬ್ರಾಗೆ ಒತ್ತಾಯ, ಬೆಳ್ಳಗಾಗಿಸಲು ವಿಪರೀತ ಮೇಕಪ್:ಸತ್ಯ ಬಿಚ್ಚಿಟ್ಟ ಸಮೀರಾ
ಹೈದರಾಬಾದ್: ಬಣ್ಣದ ಜಗತ್ತಿನಲ್ಲಿ ನಟಿಯರ ಬಾಡಿ ಶೇಮಿಂಗ್ ಕುರಿತಾದ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಈಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಮರೆಯಾಗಿದ್ದ ಸಮೀರಾ ರೆಡ್ಡಿ ಸಹ ತಮಗಾದ ಅಂತದ್ದೊಂದು ಅನುಭವವನ್ನು ಹಂಚಿಕೊಂಡಿದ್ದಾರೆ.ಈ ವರ್ಷದ ಆರಂಭದಲ್ಲಿ ಸಂಜಯ್ ದತ್ ಅವರೊಂದಿಗೆ ಅಭೀಜಿತ್ ಮೋಹನ್ ವಾರಂಗ್ ಅವರ ರಾಜಕೀಯ ಕಥಾಧರಿತ 'ಆಖ್ರಿ ಸವಾಲ್' ಮೂಲಕ ಸಮ

ಹೈದರಾಬಾದ್: ಬಣ್ಣದ ಜಗತ್ತಿನಲ್ಲಿ ನಟಿಯರ ಬಾಡಿ ಶೇಮಿಂಗ್ ಕುರಿತಾದ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಈಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಮರೆಯಾಗಿದ್ದ ಸಮೀರಾ ರೆಡ್ಡಿ ಸಹ ತಮಗಾದ ಅಂತದ್ದೊಂದು ಅನುಭವವನ್ನು ಹಂಚಿಕೊಂಡಿದ್ದಾರೆ.ಈ ವರ್ಷದ ಆರಂಭದಲ್ಲಿ ಸಂಜಯ್ ದತ್ ಅವರೊಂದಿಗೆ ಅಭೀಜಿತ್ ಮೋಹನ್ ವಾರಂಗ್ ಅವರ ರಾಜಕೀಯ ಕಥಾಧರಿತ 'ಆಖ್ರಿ ಸವಾಲ್' ಮೂಲಕ ಸಮೀರಾ ರೆಡ್ಡಿ 14 ವರ್ಷಗಳ ನಂತರ ಹಿಂದಿ ಚಿತ್ರರಂಗಕ್ಕೆ ಮರಳಿದರು. ಈ ಸಂದರ್ಭ ಅವರು 24 ವರ್ಷಗಳ ಹಿಂದೆ ತಮ್ಮ ಚೊಚ್ಚಲ ಚಿತ್ರವಾದ ಸೊಹೈಲ್ ಖಾನ್ ಅವರ 2002ರ ಆಕ್ಷನ್ ರೊಮ್ಯಾಂಟಿಕ್ ಚಿತ್ರ 'ಮೈನೆ ದಿಲ್ ತುಜ್ಕೊ ದಿಯಾ'ದಲ್ಲಿಯೂ ದತ್ ಅವರೊಂದಿಗೆ ನಟಿಸಿದ್ದರು. ಇದೀಗ, ಆ ಸಮಯದಲ್ಲಿ ತಮ್ಮ ಮೈಬಣ್ಣದ ಕಾರಣದಿಂದಾಗಿ ತಾವು ಎದುರಿಸಿದ ತಾರತಮ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಬೆಳ್ಳಗೆ ಕಾಣುವಂತೆ ಮಾಡಲು ವಿಪರೀತ ಮೇಕಪ್ 'ನನ್ನ ಮೊದಲ ಚಿತ್ರ 'ಮೈನೆ ದಿಲ್ ತುಜ್ಕೊ ದಿಯಾ'ದಲ್ಲಿ, ನನ್ನ ಮೈಬಣ್ಣವನ್ನು ಎರಡು ಮೂರು ಶೇಡ್ಗಳಷ್ಟು ಬೆಳ್ಳಗೆ ಕಾಣುವಂತೆ ಮಾಡಲಾಗಿತ್ತು. ಬಹುತೇಕ ನಾನು ಬೂದು ಬಣ್ಣದವಳಂತೆ ಕಾಣುತ್ತಿದ್ದೆ. ನನ್ನ ಮುಖದ ಬಣ್ಣವನ್ನು ದೇಹದ ಬಣ್ಣಕ್ಕೆ ಹೊಂದಿಸಲು ಇಡೀ ದೇಹಕ್ಕೆ ಮೇಕಪ್ ಮಾಡಿಕೊಳ್ಳಬೇಕಿತ್ತು’ ಎಂದು ಸಮೀರಾ ಹೇಳಿಕೊಂಡಿದ್ದಾರೆ.‘ಕುಟುಂಬಗಳಲ್ಲಿಯೇ ಎಷ್ಟೋ ಮಹಿಳೆಯರು ಈ ರೀತಿಯ ಹಿಂಸೆ ಎದುರಿಸುತ್ತಿರುತ್ತಾರೆಂಬುದು ನಿಮಗೆ ತಿಳಿದಿದೆಯೇ? ಪೋಷಕರು ಅತ್ತೆ-ಮಾವಂದಿರು 'ನೀನು ಕಪ್ಪಗಿದ್ದೀಯಾ ಅಥವಾ ದಪ್ಪಗಿದ್ದೀಯಾ' ಎಂದು ಹೇಳುತ್ತಿರುತ್ತಾರೆ. ಇಂತಹ ಸೌಂದರ್ಯದ ವ್ಯಾಖ್ಯಾನವನ್ನು ನೀಡಿದ್ದಾದರೂ ಯಾರು?’ ಎಂದು ಅವರು ಪ್ರಶ್ನಿಸಿದ್ದಾರೆ.ತಮ್ಮ ಮೈಬಣ್ಣದ ವಿಷಯ ಮಾತ್ರವಲ್ಲದೇ ದ ತಮ್ಮ ಆಂತರಿಕ ಅಭದ್ರತೆಗಳ ಬಗ್ಗೆಯೂ ಸಮೀರಾ ಹೇಳಿಕೊಂಡಿದ್ದಾರೆ. ಅವುಗಳಿಂದ ಹೊರಬರಲು ತಮಗೆ ಎರಡು ದಶಕಗಳಿಗೂ ಹೆಚ್ಚು ಸಮಯ ಬೇಕಾಯಿತು ಎಂದಿದ್ದಾರೆ.‘ನಾನು ಏನನ್ನು ಪ್ರತಿನಿಧಿಸಬೇಕು, ನಾನು ಏನನ್ನು ಪ್ರಚಾರ ಮಾಡುತ್ತಿದ್ದೇನೆ ಮತ್ತು ನಾನೇನು ಎಂಬ ಗೊಂದಲವಿತ್ತು. ನನ್ನ 40ರ ವಯಸ್ಸಿನಲ್ಲಿ ನಾನು ಆ ಗೊಂದಲಗಳಿಂದ ಹೊರಬಂದೆ. ಅದಕ್ಕೆ 20 ವರ್ಷಗಳು ಬೇಕಾದವು. ಅಷ್ಟು ವರ್ಷಗಳ ಕಾಲ ನಾನು ಪ್ಯಾಡೆಡ್ ಬ್ರಾ, ಬಮ್ ಪ್ಯಾಡ್ಗಳು ಮತ್ತು ಬಣ್ಣದ ಕನ್ನಡಕ ಧರಿಸುತ್ತಿದ್ದೆ’ಎಂದು 47 ವರ್ಷದ ನಟಿ 'ಹಾಟರ್ಫ್ಲೈ'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.‘ನಾನು ಬಾಲ್ಯದಿಂದಲೂ ದಪ್ಪಗಿದ್ದೆ. ತೂಕ ಇಳಿಸಿಕೊಂಡಾಗ ನಿನ್ನ ಹಿಂಭಾಗ ಚಪ್ಪಟೆಯಾಗಿದೆ ಎಂದು ಹೀಗಳೆಯಲಾಗುತ್ತಿತ್ತು. ಇಂದು, ಆ ರೀತಿ ಯಾರಾದರೂ ಹೇಳಿದರೆ ನಗು ಬರುತ್ತದೆ. ನಾನು ಅಷ್ಟೊಂದು ಬೆಳ್ಳಗಿಲ್ಲ, ಆಕರ್ಷಕ ಕಣ್ಣುಗಳಿಲ್ಲ ಮತ್ತು ಎತ್ತರದ ಕಾರಣಕ್ಕೆ ನನ್ನ ಅಸ್ತಿತ್ವದ ಬಗ್ಗೆ 30ರ ವಯಸ್ಸಿನವರೆಗೂ ತಕೆಕೆಡಿಸಿಕೊಳ್ಳುತ್ತಿದೆ. ನನ್ನ ಜೊತೆ ನಟಿಸುತ್ತಿದ್ದ ನಾಯಕ ಎತ್ತರವಾಗಿಲ್ಲದ ಕಾರಣ ನಾನು ಬಾಗಿಕೊಂಡು ನಡೆಯುತ್ತಿದ್ದೆ. ಆದರೆ, ಈಗ 'ಅದು ನನ್ನ ಸಮಸ್ಯೆಯಲ್ಲ ಬ್ರೋ! ನೀವೇ ಹೀಲ್ಸ್ ಧರಿಸಿ!' ಎಂದು ಹೇಳುತ್ತೇನೆ. ಆ ಸಮಯದಲ್ಲಿ, ಅದು ದೊಡ್ಡ ಸಮಸ್ಯೆಯಾಗಿತ್ತು’ ಎಂದಿದ್ದಾರೆ. ದೈಹಿಕ ಆಕಾರ ಬದಲಿಸಲು ಸರ್ಕಸ್ತಮ್ಮ ದೈಹಿಕ ಆಕಾರದ ಕಾರಣದಿಂದಾಗಿ ಮಹಿಳಾ ಸಹಾಯಕ ನಿರ್ದೇಶಕಿಯರೂ ತಮ್ಮನ್ನು ಮುಜುಗರಕ್ಕೀಡುಮಾಡುತ್ತಿದ್ದರು ಎಂದಿದ್ದಾರೆ. ಆರಂಭದಿಂದಲೇ ವಸ್ತ್ರ ವಿನ್ಯಾಸಕರು ನನ್ನ ದೇಹದ ಆಕಾರ ಬದಲಾವಣೆ ಮುಂದಾಗಬೇಕು ಎನ್ನುತ್ತಿದ್ದರು. ಹಾಗಾಗಿ, ನನ್ನ ಎಲ್ಲಾ ಉಡುಪುಗಳಲ್ಲಿ ಪ್ಯಾಡ್ಗಳನ್ನು ಹೊಂದಿರುವ 'ಬಿಲ್ಟ್ ಇನ್ ಬ್ರಾ'ಗಳನ್ನು ಅಳವಡಿಸಲಾಗುತ್ತಿತ್ತು. ನನ್ನ ಬಳಿ ಅತ್ಯುತ್ತಮ ಪ್ಯಾಡ್ಗಳ ಸಂಗ್ರಹವೇ ಇದೆ ಎಂದು ನಾನು ಹೇಳಲೇಬೇಕು! ' ಎಂದಿದ್ದಾರೆ ಸಮೀರಾ.ಪ್ಯಾಡ್ಗಳನ್ನು ಬಳಸಿ ನಿಮ್ಮ ಆಕಾರ ಬದಲಿಸಲು ನಾವು ಎಷ್ಟರಮಟ್ಟಿಗೆ ಪ್ರಯತ್ನಿಸಲು ಸಾಧ್ಯ? ದಯವಿಟ್ಟು ಇದಕ್ಕೇನಾದರೂ ಪರಿಹಾರ ಕಂಡುಕೊಳ್ಳಿ ಎಂದು ಅನೇಕ ಬಾರಿ ನನಗೆ ಹೇಳಿದ್ದರು ಎಂದೂ ನಟಿ ತಿಳಿಸಿದ್ದಾರೆ.