ಚೆನ್ನಮ್ಮ ದೀರ್ಘ ಸುಮಂಗಲಿಯಾಗಿ ಹೋಗಿದ್ದಾರೆ: ಕಂಬನಿ ಮಿಡಿದ ಬ್ರಹ್ಮಾಂಡ ಗುರೂಜಿ
ಬೆಂಗಳೂರು: ದೇವೇಗೌಡರ ಪತ್ನಿ ಚೆನ್ನಮ್ಮ (Chennamma) ಅವರು ದೀರ್ಘ ಸುಮಂಗಲಿಯಾಗಿ ಹೋಗಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ (Brahmanda Guruji) ಹೇಳಿದ್ದಾರೆ. ಚೆನ್ನಮ್ಮ ಅಂತಿಮ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, ದೇವೇಗೌಡರಿಗಿಂತ (H.D.Deve Gowda) ಚೆನ್ನಮ್ಮ ಅವರಿಗೆ 5 ವರ್ಷ ಕಡಿಮೆ ವಯಸ್ಸು. 9 ಅನ್ನೋದು ಗಂಡಾಂತರ. 89 ಗಂಡಾಂತ

ಬೆಂಗಳೂರು: ದೇವೇಗೌಡರ ಪತ್ನಿ ಚೆನ್ನಮ್ಮ (Chennamma) ಅವರು ದೀರ್ಘ ಸುಮಂಗಲಿಯಾಗಿ ಹೋಗಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ (Brahmanda Guruji) ಹೇಳಿದ್ದಾರೆ. ಚೆನ್ನಮ್ಮ ಅಂತಿಮ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, ದೇವೇಗೌಡರಿಗಿಂತ (H.D.Deve Gowda) ಚೆನ್ನಮ್ಮ ಅವರಿಗೆ 5 ವರ್ಷ ಕಡಿಮೆ ವಯಸ್ಸು. 9 ಅನ್ನೋದು ಗಂಡಾಂತರ. 89 ಗಂಡಾಂತರ ಇರುತ್ತದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ನನಗಾಗಿ ಅವರು ಆ್ಯಸಿಡ್ ಹಾಕಿಸಿಕೊಂಡಿದ್ರು, ನನ್ನ ದೇವತೆಯನ್ನೇ ಕಳೆದುಕೊಂಡೆ: ಬಿಕ್ಕಿ ಬಿಕ್ಕಿ ಅತ್ತ ಹೆಚ್.ಡಿ.ರೇವಣ್ಣ ಚೆನ್ನಮ್ಮ ಅವರ ಮನೆಗೆ ಮಹಾಲಕ್ಷ್ಮಿ. ದೇವೇಗೌಡರನ್ನ ಮೂರು ಬಾರಿ ಬದುಕಿಸಿದವರು ಚೆನ್ನಮ್ಮ. ಇವರ ದಾಂಪತ್ಯ ಜೀವನವನ್ನು ನೋಡಿ ಎಲ್ಲರೂ ಕಲಿಯಬೇಕು. ಚೆನ್ನಮ್ಮ ದೀರ್ಘ ಸುಮಂಗಲಿಯಾಗಿ ಹೋಗಿದ್ದಾರೆ. ಅವರ ತವರು ಮನೆಯಲ್ಲಿ ಅಂತ್ಯಸಂಸ್ಕಾರ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ರಾಜರಾಜೇಶ್ವರಿ ತಾಯಿಗೆ ವಿಶೇಷ ಭಕ್ತಿ. ಚಿಕ್ಕವರು ಸಂಸ್ಕಾರದ ಬಗ್ಗೆ ಇವರನ್ನು ನೋಡಿ ಕಲಿತುಕೊಳ್ಳಬೇಕು. ಯಾರೇ ದೊಡ್ಡವರು, ಚಿಕ್ಕವರು ಬಂದರೆ ಊಟ ಮಾಡದೇ ಕಳಿಸ್ತಾ ಇರಲಿಲ್ಲ. ಚೆನ್ನಮ್ಮ ಇದ್ದಿದ್ದರಿಂದ ಅವರ ಕುಟುಂಬ ಇದ್ದಿದ್ದು. ಜಗಳ ವ್ಯಾಮೋಹ ಬಿಟ್ಟು ಎಲ್ಲರೂ ಒಟ್ಟಾಗಿ ಇರಲಿ ಎಂದು ಗುರೂಜಿ ಆಶಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಂದ ಹೊಳೆನರಸೀಪುರಕ್ಕೆ ಚೆನ್ನಮ್ಮ ಪಾರ್ಥಿವ ಶರೀರ ಅಂತಿಮ ಯಾತ್ರೆ – ಇಲ್ಲಿದೆ ಮಾರ್ಗದ ವಿವರ ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಚಿಕಿತ್ಸೆ ಫಲಿಸದೇ ಶನಿವಾರ ಆಸ್ಪತ್ರೆಯಲ್ಲಿ ನಿಧನರಾದರು. ಚೆನ್ನಮ್ಮ ಅವರ ಅಂತ್ಯಕ್ರಿಯೆ ಸೋಮವಾರ ದೇವೇಗೌಡರ ಹುಟ್ಟೂರಿನಲ್ಲಿ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.