ಭಾರತದಿಂದ ಆಸಿಯಾನ್, ಆಫ್ರಿಕಾಗೆ ರಫ್ತು ಹೆಚ್ಚಳ
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಮತ್ತು ಆಫ್ರಿಕಾದ ದೇಶಗಳಿಗೆ ದೇಶದ ಸರಕು ಮತ್ತು ಸೇವೆಗಳ ರಫ್ತು ಪ್ರಮಾಣದಲ್ಲಿ ಶೇ 16ರಷ್ಟು ಏರಿಕೆಯಾಗಿದೆ.ಇದು ಹಣಕಾಸಿನ ಮೌಲ್ಯದಲ್ಲಿ ₹8.56 ಲಕ್ಷ ಕೋಟಿಯಷ್ಟಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿ–ಅಂಶಗಳು ತಿಳಿಸಿದೆ. ಈ ಎರಡೂ ಪ್ರದೇಶಗಳು

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಮತ್ತು ಆಫ್ರಿಕಾದ ದೇಶಗಳಿಗೆ ದೇಶದ ಸರಕು ಮತ್ತು ಸೇವೆಗಳ ರಫ್ತು ಪ್ರಮಾಣದಲ್ಲಿ ಶೇ 16ರಷ್ಟು ಏರಿಕೆಯಾಗಿದೆ.ಇದು ಹಣಕಾಸಿನ ಮೌಲ್ಯದಲ್ಲಿ ₹8.56 ಲಕ್ಷ ಕೋಟಿಯಷ್ಟಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿ–ಅಂಶಗಳು ತಿಳಿಸಿದೆ. ಈ ಎರಡೂ ಪ್ರದೇಶಗಳು ದೇಶದ ಸರಕು ಮತ್ತು ಸೇವೆಗಳ ರಫ್ತಿಗೆ ಅತಿದೊಡ್ಡ ಮಾರುಕಟ್ಟೆಗಳಾಗಿ ಹೊರಹೊಮ್ಮಿವೆ.ಕಳೆದ ವರ್ಷದ ಇದೇ ಅವಧಿಯಲ್ಲಿ ಆಸಿಯಾನ್ ಪ್ರದೇಶಕ್ಕೆ ₹60,659 ಕೋಟಿ ಮೌಲ್ಯದ ಸರಕು ಮತ್ತು ಸೇವೆಗಳು ರಫ್ತಾಗಿದ್ದವು. ಅದು ಈ ಬಾರಿ ₹1 ಲಕ್ಷ ಕೋಟಿ ದಾಟಿದ್ದು, ಶೇ 67ರಷ್ಟು ಹೆಚ್ಚಳವಾಗಿದೆ. ಆಫ್ರಿಕಾ ಪ್ರದೇಶದ ರಫ್ತಿನಲ್ಲಿ ಶೇ 53ರಷ್ಟು ಏರಿಕೆಯಾಗಿದ್ದು, ₹92,434 ಕೋಟಿಯಾಗಿದೆ.ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊಗೆ ದೇಶದ ರಫ್ತು ಶೇ 2.6ರಷ್ಟು ಏರಿಕೆಯಾಗಿದ್ದು, ₹1.85 ಲಕ್ಷ ಕೋಟಿಯಾಗಿದೆ. ಯುರೋಪ್ಗೆ ₹1.63 ಲಕ್ಷ ಕೋಟಿ, ಈಶಾನ್ಯ ಏಷ್ಯಾಕ್ಕೆ ₹79,916 ಕೋಟಿ, ದಕ್ಷಿಣ ಏಷ್ಯಾಕ್ಕೆ ₹58,734 ಕೋಟಿಯಾಗಿದೆ. ರಷ್ಯಾ, ಅರ್ಮೆನಿಯ, ಬೆಲಾರುಸ್ ಮತ್ತು ಕಜಕ್ಸ್ತಾನ್ಗೆ ರಫ್ತು ಶೇ 7.7ರಷ್ಟು ಹೆಚ್ಚಳವಾಗಿದ್ದು, ₹10,591 ಕೋಟಿಯಾಗಿದೆ ಎಂದು ತಿಳಿಸಿದೆ.ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ದೇಶದಿಂದ ಒಟ್ಟು ₹15.66 ಲಕ್ಷ ಕೋಟಿ ಮೌಲ್ಯದ ಸರಕು ಮತ್ತು ಸೇವೆಗಳು ರಫ್ತಾಗಿದ್ದವು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 14ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.