ಮೂಲ ಸೌಲಭ್ಯಕ್ಕೆ ಆಗ್ರಹ; ಅಫಜಲಪುರ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ
ಅಫಜಲಪುರ (ಕಲಬುರಗಿ ಜಿಲ್ಲೆ): ಪಟ್ಟಣದ ವಾರ್ಡ್ ನಂಬರ್ 17ರಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಹಲವಾರು ಬಾರಿ ದೂರು ನೀಡಿದರೂ ಪರಿಹರಿಸುತ್ತಿಲ್ಲ ಎಂದು ಅಸಮಾಧಾನಗೊಂಡ ನಾಗರಿಕರು ಸೋಮವಾರ ಪುರಸಭೆಗೆ ಬೀಗ ಜಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.ಒಂದು ವರ್ಷದಿಂದ ವಾರ್ಡನಲ್ಲಿರುವ ಚರಂಡಿಗಳು ತುಂಬಿಕೊಂಡು, ಕೊಳಚೆ ನೀರು ರಸ್ತೆ ಮೇಲೆ ನೀರು ಹರಿಯುತ್ತಿದೆ. ಸರಿಯಾಗಿ ಕಸ ವಿ
ಅಫಜಲಪುರ (ಕಲಬುರಗಿ ಜಿಲ್ಲೆ): ಪಟ್ಟಣದ ವಾರ್ಡ್ ನಂಬರ್ 17ರಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಹಲವಾರು ಬಾರಿ ದೂರು ನೀಡಿದರೂ ಪರಿಹರಿಸುತ್ತಿಲ್ಲ ಎಂದು ಅಸಮಾಧಾನಗೊಂಡ ನಾಗರಿಕರು ಸೋಮವಾರ ಪುರಸಭೆಗೆ ಬೀಗ ಜಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.ಒಂದು ವರ್ಷದಿಂದ ವಾರ್ಡನಲ್ಲಿರುವ ಚರಂಡಿಗಳು ತುಂಬಿಕೊಂಡು, ಕೊಳಚೆ ನೀರು ರಸ್ತೆ ಮೇಲೆ ನೀರು ಹರಿಯುತ್ತಿದೆ. ಸರಿಯಾಗಿ ಕಸ ವಿಲೇವಾರಿಯೂ ಮಾಡುತ್ತಿಲ್ಲ. ಕುಡಿಯುವ ನೀರನ್ನೂ ಸರಿಯಾಗಿ ಪೂರೈಸುತ್ತಿಲ್ಲ ಎಂದು ಪಟ್ಟಣದ ವಾರ್ಡ್ 17ರ ನಿವಾಸಿಗಳು ದೂರಿದರು.ವಾರ್ಡನಲ್ಲಿ ಚರಂಡಿಗಳು ತುಂಬಿಕೊಂಡಿವೆ. ಮಳೆ ಬಂದಾಗ ಚರಂಡಿಯಲ್ಲಿ ನೀರು ರಸ್ತೆ ಮೇಲೆ ಹರಿಯುತ್ತದೆ. ಅದು ಕುಡಿಯುವ ನೀರು ಪೂರೈಕೆ ಆಗುವ ನಲ್ಲಿಗಳ ತಗ್ಗುಗಳಿಗೆ ಹೋಗಿ ಸೇರುತ್ತದೆ. ಅದೇ ನೀರು ಜನರು ಕುಡಿಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ವಾರ್ಡನ ನಾಗರಿಕರಾದ ಸಿದ್ದು ರಾಣಿ, ಸಿದ್ದು ಮ್ಯಾಕೇರಿ, ಸಿದ್ದು ಬಿರಾದಾರ, ಶ್ರೀಕಾಂತ ಶಿವಣಗಿ, ಶಾಂತು ಅಂಜುಟಗಿ, ಬಸು ಭೈರಾಮಡಗಿ, ನಾಗರಾಜ್ ಪಾಟೀಲ, ಅಂಬರೀಶ್ ಹಡಪದ,ಸಂತೋಷ್ ಅತನೂರ ಇತರರು ಇದ್ದರು.
Read the complete story at Prajavani