ಸಿಎಂ ವಿಜಯ್ಗೆ ಅಪಮಾನ, ಬೆದರಿಕೆ ಆರೋಪ – ಡಿಎಂಕೆ ಶಾಸಕ ಅರೆಸ್ಟ್
-ಒಂದೇ ತಿಂಗಳಲ್ಲಿ ಇಬ್ಬರು ಡಿಎಂಕೆ ಶಾಸಕರು ಅರೆಸ್ಟ್ ಚೆನ್ನೈ: ತಮಿಳುನಾಡು ಸಿಎಂ ಜೋಸೆಫ್ ವಿಜಯ್ (Joseph Vijay) ಅವರಿಗೆ ಮಾನಹಾನಿ, ಬೆದರಿಕೆ ಹಾಕಿದ ಆರೋಪದ ಮೇಲೆ ಡಿಎಂಕೆ ಶಾಸಕ ಜಿ.ಆರ್. ಮಾರ್ಕಂಡೇಯನ್ (G.R Markendiyan) ಅವರನ್ನ ಬಂಧಿಸಲಾಗಿದೆ. ಚುನಾವಣೆಯಲ್ಲಿ ಕೊಲತ್ತೂರು ಕ್ಷೇತ್ರದಿಂದ (Kolathur constituenc) ಸೋತ ನಂತರ, ಸಿಎಂ ವಿಜಯ್ ಅವರು ಡಿಎಂಕೆ ಅ

-ಒಂದೇ ತಿಂಗಳಲ್ಲಿ ಇಬ್ಬರು ಡಿಎಂಕೆ ಶಾಸಕರು ಅರೆಸ್ಟ್ ಚೆನ್ನೈ: ತಮಿಳುನಾಡು ಸಿಎಂ ಜೋಸೆಫ್ ವಿಜಯ್ (Joseph Vijay) ಅವರಿಗೆ ಮಾನಹಾನಿ, ಬೆದರಿಕೆ ಹಾಕಿದ ಆರೋಪದ ಮೇಲೆ ಡಿಎಂಕೆ ಶಾಸಕ ಜಿ.ಆರ್. ಮಾರ್ಕಂಡೇಯನ್ (G.R Markendiyan) ಅವರನ್ನ ಬಂಧಿಸಲಾಗಿದೆ. ಚುನಾವಣೆಯಲ್ಲಿ ಕೊಲತ್ತೂರು ಕ್ಷೇತ್ರದಿಂದ (Kolathur constituenc) ಸೋತ ನಂತರ, ಸಿಎಂ ವಿಜಯ್ ಅವರು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ (M K Stalin) ಅವರನ್ನು ಪರೋಕ್ಷವಾಗಿ ಟೀಕಿಸಲು `ತಂದೆಯ ಹುಡುಕಾಟ’ ಎಂಬ ಮಾತನ್ನು ಬಳಸಿದ್ದರು. ಇದಕ್ಕೆ ಜು.18ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಶಾಸಕ ಮಾರ್ಕಂಡೇಯನ್ ಅವರು ಪ್ರತಿಕ್ರಿಯಿಸಿದ್ದೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ವಿದ್ಯಾರ್ಥಿನಿ ಬಳಿ ಲಂಚಕ್ಕೆ ಕೈಯೊಡ್ಡಿದ ಪ್ರಿನ್ಸಿಪಾಲ್ ʻಲೋಕಾʼ ಬಲೆಗೆ ಭಾಷಣದ ವೇಳೆ ಮಾರ್ಕಂಡೇಯನ್ ಅವರು, ವಿಧಾನಸಭೆಯಲ್ಲಿ ಮುಖ್ಯಮಂತ್ರಿ ತಾನು ತಂದೆಯನ್ನು ಹುಡುಕುತ್ತಿರುವುದಾಗಿ ಹೇಳುತ್ತಾರೆ. ನಾಚಿಕಗೇಡಿನ ಮುಖ್ಯಮಂತ್ರಿ. ನಾವು ನಿಮ್ಮನ್ನು ವಿಧಾನಸಭೆಯಲ್ಲೇ ನೋಡಿಕೊಳ್ಳುತ್ತೇವೆ. ಆದರೆ ಅವರು ವಿಧಾನಸಭೆಯ ಬಾಗಿಲು ಮುಚ್ಚುವುದಾಗಿ ಹೇಳುತ್ತಿದ್ದಾರೆ. ಒಂದು ವೇಳೆ ಅವರು ಬಾಗಿಲು ಮುಚ್ಚಿದರೆ, ಅವರ ಮೂಳೆಗಳನ್ನು ಪುಡಿಪುಡಿ ಮಾಡಲಾಗುವುದು. ಇಷ್ಟರ ಮೇಲೆಯೂ ಅವರು ವಿಧಾನಸಭೆಯನ್ನು ಲಾಕ್ ಮಾಡಿ ನೋಡಲಿ ಎಂದಿದ್ದರು. ಮಾರ್ಕಂಡೇಯನ್ ಅವರ ಭಾಷಣ ಬೆನ್ನಲ್ಲೇ ಟಿವಿಕೆ ಪಕ್ಷದ ಪದಾಧಿಕಾರಿಯೊಬ್ಬರು ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ಡಿಎಂಕೆ ಶಾಸಕ ಜಿ.ಆರ್.ಮಾರ್ಕಂಡೇಯನ್ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಅರೆಸ್ಟ್ ಬಳಿಕ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಸದ್ಯ ತೂತುಕುಡಿ ಎಸ್ಪಿ ಕಚೇರಿಯಲ್ಲಿ ಬಂಧಿತ ಶಾಸಕರ ವಿಚಾರಣೆ ನಡೆಸುತ್ತಿದೆ. ಇದೇ ತಿಂಗಳ ಆರಂಭದಲ್ಲಿ, ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ತಿರುಚೆಂದೂರು ಡಿಎಂಕೆ ಶಾಸಕ ಅನಿತಾ ರಾಧಾಕೃಷ್ಣನ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಅದೇ ದಿನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.ಇದನ್ನೂ ಓದಿ: ಜಮಖಂಡಿಯಲ್ಲಿ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ