ಪರ್ತ್ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘದ 17ನೇ ವಾರ್ಷಿಕೋತ್ಸವ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿಪರ್ತ್ (ಆಸ್ಟ್ರೇಲಿಯಾ): ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘದ 17ನೇ ವಾರ್ಷಿಕೋತ್ಸವ ಅಂಗವಾಗಿ ಪರ್ತ್ನ ಇಂಡಿಯನ್ ಕಮ್ಯುನಿಟಿ ಸೆಂಟರ್ನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ, ಸಂಗೀತ ಮತ್ತು ಹಾಸ್ಯ ಕಾರ್ಯಕ್ರಮಗಳು ಗಮನ ಸೆಳೆದವು.ಗ್ರೀನ್ ಕಾರ್ಡ್ ಅರ್ಜಿದಾರರಿಗೆ ಟ್ರಂಪ್ ಸರ್ಕಾರದಿಂದ ಕಠ

ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿಪರ್ತ್ (ಆಸ್ಟ್ರೇಲಿಯಾ): ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘದ 17ನೇ ವಾರ್ಷಿಕೋತ್ಸವ ಅಂಗವಾಗಿ ಪರ್ತ್ನ ಇಂಡಿಯನ್ ಕಮ್ಯುನಿಟಿ ಸೆಂಟರ್ನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ, ಸಂಗೀತ ಮತ್ತು ಹಾಸ್ಯ ಕಾರ್ಯಕ್ರಮಗಳು ಗಮನ ಸೆಳೆದವು.ಗ್ರೀನ್ ಕಾರ್ಡ್ ಅರ್ಜಿದಾರರಿಗೆ ಟ್ರಂಪ್ ಸರ್ಕಾರದಿಂದ ಕಠಿಣ ನಿಯಮಕಾರ್ಯಕ್ರಮಕ್ಕೆ ಕರ್ನಾಟಕದ ಜಾನಪದ ಕಲಾವಿದ ಡಾ. ಕಾ. ರಾಮೇಶ್ವರಪ್ಪ, ಹಾಸ್ಯ ಕಲಾವಿದ ಗೋಪಿ ಹಾಗೂ ಹಿನ್ನೆಲೆ ಗಾಯಕಿ ಸಿಂಚನ್ ದೀಕ್ಷಿತ್ ಭಾಗವಹಿಸಿದ್ದರು.ಕಾರ್ಯಕ್ರಮವು ಶ್ರೀ ಮಂಟೇಸ್ವಾಮಿ ಮಹಾಕಾವ್ಯದಲ್ಲಿ ಉಲ್ಲೇಖವಾಗಿರುವ ಖಂಡಾಯ ಮೆರವಣಿಗೆಯೊಂದಿಗೆ ಆರಂಭವಾಯಿತು. ಡಾ. ಕಾ. ರಾಮೇಶ್ವರಪ್ಪ ಅವರು ಪಂಚಲೋಹದ ಖಂಡಾಯದ ಮಹತ್ವವನ್ನು ಪರಿಚಯಿಸುತ್ತಾ, 'ನಂಬಿದವರ ಮನೆಯಾವೊಳಗೆ ತುಂಬಿ ತುಳುಕಾಡು ಬಪ್ಪಾ', 'ಮಲ್ಲಿಗೆ ಹೂವಾಗಿ ಚೆಲ್ಲೀತು ನಿನ್ನ ಪರುಸೆ', 'ತಿಂಗಳು ಮುಳುಗಿದವೋ', 'ಎಲ್ಲೋ ಜೋಗಪ್ಪ ನಿನ್ನ ಅರಮನೆ' ಸೇರಿದಂತೆ ಹಲವು ಜನಪದ ಗೀತೆಗಳನ್ನು ಹಾಡಿದರು.ರಾಷ್ಟ್ರಕವಿ ಕುವೆಂಪು ಅವರ 'ಬಾರಿಸು ಕನ್ನಡ ಡಿಂಡಿಮ' ಗೀತೆಯನ್ನು ಹಾಡಿ ಅದರ ಸಂದೇಶವನ್ನು ವಿವರಿಸಿದರು. ಕಾರ್ಯಕ್ರಮದುದ್ದಕ್ಕೂ ಸಭಿಕರು ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.ಚೀನಾದದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಜಪಾನ್ ಕನ್ನಡ ಸಂಘದಿಂದ ವಿಶೇಷ ಪಾಡ್ಕಾಸ್ಟ್ಗಾಯಕಿ ಸಿಂಚನ್ ದೀಕ್ಷಿತ್ ಅವರು ಚಿತ್ರಗೀತೆ, ಭಾವಗೀತೆ ಹಾಗೂ ಜನಪದ ಗೀತೆಗಳನ್ನು ಪ್ರಸ್ತುತಪಡಿಸಿ ರಂಜಿಸಿದರು. ಹಾಸ್ಯ ಕಲಾವಿದ ಗೋಪಿ ಅವರು ತಮ್ಮ ಹಾಸ್ಯ ನಿರೂಪಣೆಯ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.ಕಾರ್ಯಕ್ರಮದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘದ ಅಧ್ಯಕ್ಷ ಶಂಕರ್ ಅಳೇಪಡಿ ಸ್ವಾಗತಿಸಿದರು. ಕಾರ್ಯದರ್ಶಿ ಗುರುಪ್ರಸಾದ್ ಗುಪ್ತ ವಂದಿಸಿದರು. ಕಾರ್ಯಕ್ರಮದ ಸಂಯೋಜಕರಾದ ಪ್ರಸನ್ನ ಗೌಡ, ಸಂದೀಪ್ ಶಿವರುದ್ರಯ್ಯ, ಖಜಾಂಚಿ ಅನಲೆ ಶ್ರೀರಾಂ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕತಾರ್ ಶಾಲೆಗಳಲ್ಲಿ ಕನ್ನಡ ಬೋಧನೆಗೆ ಭಾರತೀಯ ರಾಯಭಾರ ಕಚೇರಿ ಬೆಂಬಲಈ ಸಂದರ್ಭದಲ್ಲಿ ಮಾತನಾಡಿದ ಡಾ. ಕಾ. ರಾಮೇಶ್ವರಪ್ಪ ಅವರು, ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘ ಹಲವು ವರ್ಷಗಳಿಂದ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದನ್ನು ಶ್ಲಾಘಿಸಿದರು. ಅಲ್ಲದೆ, ಸಂಘ ನಡೆಸುತ್ತಿರುವ 'ಕನ್ನಡ ಕಲಿ' ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಕನ್ನಡ ಕಲಿಕೆಯ ಆಸಕ್ತಿ ಬೆಳೆಸುತ್ತಿರುವ ಪ್ರಯತ್ನವನ್ನು ಪ್ರಶಂಸಿಸಿದರು.ಆಸ್ಟ್ರೇಲಿಯಾದ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ಸಂಘಗಳ ಮೂಲಕ ರಾಜ್ಯೋತ್ಸವ, ಹಬ್ಬಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ನಾಡು–ನುಡಿಯ ಬಾಂಧವ್ಯವನ್ನು ಜೀವಂತವಾಗಿರಿಸುತ್ತಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘವು ಕಳೆದ 16 ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದು, ಈ ಬಾರಿ 17ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿತು. ಯುಎಇ ಪ್ರವಾಸಿ ವೀಸಾದ ಹೊಸ ನಿಯಮಗಳು: 5 ವರ್ಷ ಮಾನ್ಯತೆ, ವರ್ಷಕ್ಕೆ 180 ದಿನ ವಾಸ