ಚಿಕ್ಕಮಗಳೂರು | ಬಾರದ ಮಳೆ: ಮೈದುಂಬದ ನದಿಗಳು
ಚಿಕ್ಕಮಗಳೂರು: ಗಿರಿ ಶಿಖರಗಳ ತವರಾದ ಜಿಲ್ಲೆಯಲ್ಲಿ ಪ್ರಮುಖ ಐದು ದಿನಗಳ ಉಗಮ ಸ್ಥಾನವೂ ಹೌದು. ಮಳೆ ಕೊರತೆಯಿಂದ ಈ ವರ್ಷ ಈ ನದಿಗಳಲ್ಲಿ ಕಳೆ ಇಲ್ಲದಂತಾಗಿದೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವೊಂದರಲ್ಲಿ ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಗಳು ಉಗಮವಾದರೆ, ಮೂಡಿಗೆರೆ ತಾಲ್ಲೂಕಿನ ಜಾವಳಿ ಬಳಿ ಹೇಮಾವತಿ ನದಿ ಉಗಮವಾಗುತ್ತದೆ. ಯಗಚಿ ಮತ್ತು ವೇದಾವತಿ ನದಿಗಳ ಚಂದ್ರ

ಚಿಕ್ಕಮಗಳೂರು: ಗಿರಿ ಶಿಖರಗಳ ತವರಾದ ಜಿಲ್ಲೆಯಲ್ಲಿ ಪ್ರಮುಖ ಐದು ದಿನಗಳ ಉಗಮ ಸ್ಥಾನವೂ ಹೌದು. ಮಳೆ ಕೊರತೆಯಿಂದ ಈ ವರ್ಷ ಈ ನದಿಗಳಲ್ಲಿ ಕಳೆ ಇಲ್ಲದಂತಾಗಿದೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವೊಂದರಲ್ಲಿ ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಗಳು ಉಗಮವಾದರೆ, ಮೂಡಿಗೆರೆ ತಾಲ್ಲೂಕಿನ ಜಾವಳಿ ಬಳಿ ಹೇಮಾವತಿ ನದಿ ಉಗಮವಾಗುತ್ತದೆ. ಯಗಚಿ ಮತ್ತು ವೇದಾವತಿ ನದಿಗಳ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಉಗಮವಾಗುತ್ತವೆ.ನದಿಗಳ ಉಗಮವಾಗುವ ಮೂಲ ಸ್ಥಳದಲ್ಲೇ ಮಳೆ ಕೊರತೆ ಎದುರಾಗಿರುವುದು ನದಿಗಳನ್ನು ಕಳೆಗುಂದುಂವಂತೆ ಮಾಡಿದೆ.ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಈ ವರ್ಷ ಮಳೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಗಿದೆ. ತುಂಗಾ ಮತ್ತು ಭದ್ರಾ ನದಿಗಳಿಗೆ ಈ ಪ್ರದೇಶವೇ ಪ್ರಮುಖ ಕೊಳ್ಳದ ಪ್ರದೇಶ. ಆದರೆ, ಅಲ್ಲಿ ಮಳೆಯಾಗದ ಕಾರಣ ಎರಡು ಮಂಕಾಗಿ ಹರಿಯುತ್ತಿವೆ.ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಈಗ ಬೇಸಿಗೆ ವಾತಾವರಣ ಇದೆ. ಇದರಿಂದಾಗಿ ವೇದಾವತಿ ನದಿಯಲ್ಲಿ ನೀರೇ ಇಲ್ಲವಾಗಿದೆ. ಅಯ್ಯನಕೆರೆಗೆ ವೇದಾವತಿ ನದಿಯೇ ಜಲಮೂಲ. ಕೆರೆಯಲ್ಲಿ ನೀರಿಲ್ಲವಾಗಿದೆ. ಜುಲೈ ತಿಂಗಳಲ್ಲಿ ಅತ್ಯಂತ ಹೆಚ್ಚು ಮಳೆಯಾಗುತ್ತದೆ. ಆದರೆ, ಈ ಬಾರಿ ಜುಲೈನಲ್ಲೂ ಬಿಸಿಲಿನ ವಾತಾವರಣ ಕಾಣಿಸುತ್ತಿದ್ದು, ಮಳೆ ಬರುವ ನಿರೀಕ್ಷೆ ಕೂಡ ಜನರಲ್ಲಿ ಇಲ್ಲವಾಗಿದೆ. ಹಿಂದೆಂದೂ ಕಂಡರಿಯದ ಬರಗಾಲ ಎದುರಾಗಲಿದೆ ಎಂಬ ಆತಂಕವೂ ಜನರಲ್ಲಿ ಕಾಡುತ್ತಿದೆ.ಮಂಕಾದ ತುಂಗೆಶೃಂಗೇರಿ: ಜುಲೈ ಮೂರನೇ ವಾರ ಕಳೆದರೂ ಮಳೆ ಬಾರದೆ ಬರ ಎದುರಾಗಬಹುದು ಎಂದು ಜನರು ಆತಂಕದಲ್ಲಿದ್ದಾರೆ. ಎರಡು ದಿನಗಳಿಂದ ಮಳೆಯಾಗುತ್ತಿದ್ದು, ನದಿಯ ನೀರಿನ ಪ್ರಮಾಣ ಕೊಂಚ ಏರಿಕೆಯಾಗಿದೆ. ಕಳೆದ ವರ್ಷ ಮೇ 15ರಿಂದ ಆರಂಭವಾಗಿದ್ದ ಮಳೆ, ಎರಡು ತಿಂಗಳು ನಿರಂತರವಾಗಿ ಸುರಿಯಿತು. ಜುಲೈ ಮೂರನೇ ವಾರದ ವೇಳೆಗೆ ಎರಡು ಬಾರಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿತ್ತು. ಈ ವರ್ಷ ಮಳೆ ಇಲ್ಲದೆ ತೋಟಗಾರಿಕಾ ಬೆಳೆಗಳಿಗೆ ತೊಂದರೆಯಾಗಿದೆ. ಭತ್ತದ ನಾಟಿಗೆ ಹಿನ್ನಡೆಯಾಗಿದೆ. ಕಳೆದ ವರ್ಷ ಈ ವೇಳೆಗಾಗಲೇ ಭತ್ತದ ನಾಟಿ ಕಾರ್ಯವೇ ಮುಗಿಯುವ ಹಂತಕ್ಕೆ ಬಂದಿತ್ತು. ಈ ವರ್ಷ ಮಳೆ ಇಲ್ಲದ ಸಸಿ ಮಡಿ ಸಹ ಇನ್ನೂ ಹಾಕು ಸಾಧ್ಯವಾಗಿಲ್ಲ.ಸೊರಗಿದ ಹೇಮಾವತಿಮೂಡಿಗೆರೆ: ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ ಮೈದುಂಬಿ ಹರಿಯುತ್ತಿದ್ದ ಹೇಮಾವತಿ ನದಿ, ಈ ಬಾರಿ ಕಡಿಮೆ ಮಳೆಯಿಂದಾಗಿ ಸೊರಗುತ್ತಿದೆ. ತಾಲ್ಲೂಕಿನ ಜಾವಳಿ ಗ್ರಾಮದಲ್ಲಿ ಹುಟ್ಟುವ ಹೇಮಾವತಿ ನದಿಯು, ಬಣಕಲ್ ತಲುಪುವಷ್ಟರಲ್ಲಿ ಹತ್ತಾರು ಉಪ ಹಳ್ಳಗಳನ್ನು ಸೇರಿ ವಿಶಾಲ ವ್ಯಾಪ್ತಿಯಲ್ಲಿ ಹರಿಯುತ್ತಿತ್ತು. ಆದರೆ, ಈ ಬಾರಿ ಉಪ ಹಳ್ಳಗಳು, ಹಳ್ಳಗಳಲ್ಲೂ ನೀರಿಲ್ಲದೆ ಹರಿಯುವ ಮಟ್ಟ ಮಳೆಗಾಲದಲ್ಲಿಯೇ ಅತ್ಯಂತ ಕಡಿಮೆ ಎನ್ನುವಷ್ಟರ ಮಟ್ಟಿಗೆ ಹರಿಯುತ್ತಿದೆ. ಮಳೆಗಾಲದಲ್ಲಿ ಬೆಟ್ಟದ ಮನೆ ಸೇತುವೆಯ ಬಳಿ ಹೇಮಾವತಿಯನ್ನು ನೋಡುವುದೇ ಸೊಬಗಾಗಿತ್ತು. ಆದರೆ, ಈ ಬಾರಿ ಬೆಟ್ಟದಮನೆ ಸೇತುವೆ ಬಳಿ ಬೇಸಿಗೆಯಲ್ಲಿ ಹರಿಯುವಷ್ಟರ ಪ್ರಮಾಣದಲ್ಲಿಯೇ ನೀರು ಹರಿಯುತ್ತಿದೆ.ಹೇಮಾವತಿ ನದಿಯಲ್ಲಿ ನೀರು ಕಡಿಮೆಯಾದರೆ ನದಿ ಪಾತ್ರದ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಈ ಬಾರಿ ಸಮರ್ಪಕ ಮಳೆಯಾಗದ ಕಾರಣ, ಮುಂದಿನ ವರ್ಷ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂಬುದು ಸ್ಥಳೀಯರ ಅಭಿಪ್ರಾಯ.ಹೇಮಾವತಿ ನದಿಯೊಂದಿಗೆ ತಾಲ್ಲೂಕಿನಲ್ಲಿ ಹರಿಯುವ ಚಿಕ್ಕಳ್ಳ, ದೊಡ್ಡಳ್ಳ, ಹುಳುಗಿ ಹಳ್ಳ, ಸುಮಡೇಕೆರೆ ಹಳ್ಳ, ಜಪಾವತಿ, ಸುಣ್ಣದ ಹಳ್ಳ, ಊರುಬಗೆ ಹಳ್ಳ ಸೇರಿ ಎಲ್ಲಾ ಹಳ್ಳ, ನದಿಗಳು ಸಂಪೂರ್ಣವಾಗಿ ಸೊರಗಿದ್ದು, ಮಳೆಗಾಲದಲ್ಲಿ ಬೇಸಿಗೆ ವಾತಾವರಣ ಕಾಣುವಂತಾಗಿದೆ.ಮೈದುಂಬದ ಭದ್ರೆಕಳಸ: ಮಳೆ ಕೊರತೆಯಿಂದ ಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ.ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ವರ್ಷದ ಗರಿಷ್ಠ ಪ್ರಮಾಣದ ಮಳೆ ಆಗುತ್ತದೆ. ಇದರಿಂದ ಜುಲೈ ತಿಂಗಳಲ್ಲಿ ಭದ್ರೆ ಮೈದುಂಬಿ ಹರಿಯುತ್ತಾಳೆ. ಆದರೆ, ಈ ಬಾರಿ ಜುಲೈ ತಿಂಗಳಲ್ಲಿ ಭದ್ರೆ ಮೈದುಂಬಿಲ್ಲ. ಮಲೆನಾಡಿನ ವರ್ಷವೈಭವ ಈ ಬಾರಿ ಇಲ್ಲವಾಗಿದೆ. ತುಂಬಿದ ನದಿ ನೋಡಲು ಜನರು ದಡಕ್ಕೆ ಹೋಗುತ್ತಿದ್ದ ದೃಶ್ಯವೂ ಈ ವರ್ಷ ಇಲ್ಲವಾಗಿದೆ.ಬರಿದಾದ ವೇದಾವತಿಕಡೂರು: ತಾಲ್ಲೂಕಿನ ಜೀವನಾಡಿ ಕೆರೆಗಳಾದ ಅಯ್ಯನಕೆರೆ ಮತ್ತು ಮದಗದ ಕೆರೆಗಳಿಂದ ಹರಿದು ಬಂದು ಕಡೂರಿನ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಹರಿದು ಯಗಟಿ ಬಳಿ ಸಂಗಮಗೊಂಡು ಸಾಗುವ ವೇದಾವತಿ ನದಿ ಈ ಬಾರಿ ಬರಿದಾಗಿದೆ.ವೇದ ಮತ್ತು ಆವತಿ ನದಿಗಳ ಸಂಗಮವಾಗಿ ಹರಿಯುತ್ತತ್ತೆ. ಮದಗದ ಕೆರೆಯು ಕಡೂರು ಬೀರೂರು ಭಾಗದ ಶೇ 15 ರಿಂದ 20 ಕೃಷಿ ಪ್ರದೇಶಕ್ಕೆ ಸರಣಿ ಕೆರೆಗಳ ಮೂಲಕ ನೀರು ಹರಿಯುತ್ತದೆ.ವೇದ ನದಿಯು ಸಕರಾಯಪಟ್ಟಣದ ಅಯ್ಯನಕೆರೆ ಮೂಲಕ ಹಾದು ಎಗಟಿ ಬಳಿ ಅವತಿ ನದಿಯೊಂದಿಗೆ ಸಂಗಮಗೊಂಡು ವೇದಾವತಿಯಾಗಿ ಹಿರಿಯೂರಿನ ವಾಣಿವಿಲಾಸ ಸಾಗರದವರೆಗೆ ಹರಿವನ್ನು ವಿಸ್ತರಿಸಿಕೊಂಡಿದೆ.ಆದರೆ ಈ ಎರಡು ಹಳ್ಳಗಳು ತುಂಬಿ ನಿರಂತರವಾಗಿ ಹರಿಯುವ ಚಿತ್ರಣ ಇತ್ತೀಚಿನ ವರ್ಷಗಳಲ್ಲಿ ಇಲ್ಲ. ಉತ್ತಮ ಮಳೆಯಾಗಿ ಅಯ್ಯನಕೆರೆ ಮತ್ತು ಮದಗದ ಕರೆಗಳಿಂದ ಸಮೃದ್ಧವಾಗಿ ನೀರು ಹರಿದು ಬಂದ ಸಂದರ್ಭದಲ್ಲಷ್ಟೇ ವೇದಾವತಿ ನದಿಯು ತನ್ನ ಸಂಭ್ರಮವನ್ನು ಮೈ ತುಂಬಿಕೊಳ್ಳಲು ಸಾಧ್ಯವಾಗುತ್ತದೆ.ಅದರ ಹೊರತಾಗಿ ಈ ನದಿಯು ಅಂತರ್ಜಲ ವೃದ್ಧಿಗೆ ಪೂರಕವಾಗಿದೆಯೇ ಹೊರತು ಕುಡಿಯುವ ನೀರಿನ ಬಳಕೆಗೆ ನೆರವಾಗುವ ಸಾಧ್ಯತೆಗಳು ಕಡಿಮೆ.ಪೂರಕ ಮಾಹಿತಿ: ಕೆ.ಎನ್. ರಾಘವೇಂದ್ರ, ರವಿ ಕೆಳಂಗಡಿ, ಎನ್. ಸೋಮಶೇಖರ್ಶೃಂಗೇರಿಯಲ್ಲಿ ತುಂಗಾ ನದಿ ಹರಿಯುತ್ತಿರುವುದುಮೂಡಿಗೆರೆ ತಾಲ್ಲೂಕಿನ ಜಾವಾಳಿಯಲ್ಲಿ ಉಗಮಿಸಿ ಬಣಕಲ್ ಸಮೀಪ ದುಮ್ಮಿಕ್ಕುತಿದ್ದ ಹೇಮಾವತಿ ನದಿ ನೀರಿಲ್ಲದೆ ಸಣ್ಣ ತೊರೆಯಂತೆ ಹರಿಯುತ್ತಿರುವುದುಕಡೂರು ಬಳಿ ವೇದಾವತಿ ನದಿ ಸಂಪೂರ್ಣ ಬರಿದಾಗಿರುವುದು