ರಾಯಭಾರ ಕಚೇರಿಗಳಲ್ಲಿ ತಾತ್ಕಾಲಿಕ ಪಾಸ್ಪೋರ್ಟ್ ಸೇವೆಗೆ ಸುಪ್ರೀಂ ಕೋರ್ಟ್ ಅನುಮತಿ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿನವದೆಹಲಿ: ಯುಎಇ, ಕುವೈತ್, ಸಿಂಗಪುರ ಹಾಗೂ ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಲ್ಲಿ ಪಾಸ್ಪೋರ್ಟ್ ಹಾಗೂ ಇತರೆ ಕಾನ್ಸುಲರ್ ಸೇವೆಗಳ ಅಡಚಣೆ ತಪ್ಪಿಸಲು, ಹಿಂದೆ ಇದ್ದ ಗುತ್ತಿಗೆದಾರರನ್ನೇ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ.ಪರ್ತ್ನ

ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿನವದೆಹಲಿ: ಯುಎಇ, ಕುವೈತ್, ಸಿಂಗಪುರ ಹಾಗೂ ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಲ್ಲಿ ಪಾಸ್ಪೋರ್ಟ್ ಹಾಗೂ ಇತರೆ ಕಾನ್ಸುಲರ್ ಸೇವೆಗಳ ಅಡಚಣೆ ತಪ್ಪಿಸಲು, ಹಿಂದೆ ಇದ್ದ ಗುತ್ತಿಗೆದಾರರನ್ನೇ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ.ಪರ್ತ್ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘದ 17ನೇ ವಾರ್ಷಿಕೋತ್ಸವಈ ಆದೇಶದೊಂದಿಗೆ ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಹಾಗೂ ದುಬೈಯ ಭಾರತೀಯ ಕಾನ್ಸುಲೇಟ್ ಜನರಲ್, ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ‘ಅಲ್ಹಿಂದ್ ಟೂರ್ಸ್ ಅಂಡ್ ಟ್ರಾವೆಲ್ಸ್’ ಸಂಸ್ಥೆಯ ಮೂಲಕ ಪಾಸ್ಪೋರ್ಟ್ ಮತ್ತು ಕಾನ್ಸುಲರ್ ಸೇವೆಗಳನ್ನು ಒದಗಿಸುವ ಅವಕಾಶ ಪಡೆದಿದೆ.ಈ ನಾಲ್ಕು ದೇಶಗಳ ಭಾರತೀಯ ರಾಯಭಾರ ಕಚೇರಿಗಳಲ್ಲಿ ಕಾನ್ಸುಲರ್, ಪಾಸ್ಪೋರ್ಟ್ ಮತ್ತು ವೀಸಾ ಸೇವೆಗಳ ಹೊರಗುತ್ತಿಗೆ ಟೆಂಡರ್ ಅನ್ನು ರದ್ದುಗೊಳಿಸಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.ಜಪಾನ್: ಟೋಕಿಯೊದಲ್ಲಿ ರಾಘವೇಂದ್ರ ಸ್ವಾಮಿಗಳ ವಿಗ್ರಹ ಪ್ರತಿಷ್ಠಾಪನೆಆದರೆ, ಲಕ್ಷಾಂತರ ಭಾರತೀಯರಿಗೆ ಪಾಸ್ಪೋರ್ಟ್ ಮತ್ತು ವೀಸಾ ಸೇವೆಗಳಲ್ಲಿ ವ್ಯತ್ಯಯ ಉಂಟಾಗದಂತೆ ತಾತ್ಕಾಲಿಕ ವ್ಯವಸ್ಥೆಗೆ ಅವಕಾಶ ನೀಡಿದೆ.ವಿದೇಶಾಂಗ ಸಚಿವಾಲಯವು ಈಗಿನ ಗುತ್ತಿಗೆದಾರರ ಕಾರ್ಯಕ್ಷಮತೆ ತೃಪ್ತಿಕರವಾಗಿದ್ದರೆ ಅವರನ್ನೇ ತಾತ್ಕಾಲಿಕವಾಗಿ ನೇಮಿಸಬಹುದು. ಇಲ್ಲವೇ, ಸೂಕ್ತವೆಂದು ಪರಿಗಣಿಸುವ ಬೇರೆ ಯಾವುದೇ ಸಂಸ್ಥೆಯನ್ನು ಮಧ್ಯಂತರ ಅವಧಿಗೆ ನೇಮಿಸಬಹುದೆಂದು ನ್ಯಾಯಾಲಯ ತಿಳಿಸಿದೆ. ಗ್ರೀನ್ ಕಾರ್ಡ್ ಅರ್ಜಿದಾರರಿಗೆ ಟ್ರಂಪ್ ಸರ್ಕಾರದಿಂದ ಕಠಿಣ ನಿಯಮ