ರೋಹಿತ್ ನಿವೃತ್ತಿ ವಿಷಯ ಮಾತನಾಡಿಲ್ಲ: ಶುಭಮನ್ ಗಿಲ್
ಲಂಡನ್: ಸೀನಿಯರ್ ಆಟಗಾರ ರೋಹಿತ್ ಶರ್ಮಾ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ತಮ್ಮ ಜೊತೆ ಮಾತನಾಡಿಲ್ಲ ಎಂದು ಭಾರತ ತಂಡದ ನಾಯಕ ಶುಭಮನ್ ಗಿಲ್ ಹೇಳಿದ್ದಾರೆ. ರೋಹಿತ್ ಅವರು ನಿವೃತ್ತಿ ಹೇಳಲಿದ್ದಾರೆ ಎಂಬ ಊಹಾಪೋಹಗಳು ಕೆಲವು ದಿನಗಳಿಂದ ಕೇಳಿಬಂದಿವೆ.ಭಾನುವಾರ ಲಾರ್ಡ್ಸ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯಕ್ಕೆ ಮೊದಲು ಆ ಪಂದ್ಯ ರೋಹಿತ್ ಪಾಲಿಗೆ ಕೊನ

ಲಂಡನ್: ಸೀನಿಯರ್ ಆಟಗಾರ ರೋಹಿತ್ ಶರ್ಮಾ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ತಮ್ಮ ಜೊತೆ ಮಾತನಾಡಿಲ್ಲ ಎಂದು ಭಾರತ ತಂಡದ ನಾಯಕ ಶುಭಮನ್ ಗಿಲ್ ಹೇಳಿದ್ದಾರೆ. ರೋಹಿತ್ ಅವರು ನಿವೃತ್ತಿ ಹೇಳಲಿದ್ದಾರೆ ಎಂಬ ಊಹಾಪೋಹಗಳು ಕೆಲವು ದಿನಗಳಿಂದ ಕೇಳಿಬಂದಿವೆ.ಭಾನುವಾರ ಲಾರ್ಡ್ಸ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯಕ್ಕೆ ಮೊದಲು ಆ ಪಂದ್ಯ ರೋಹಿತ್ ಪಾಲಿಗೆ ಕೊನೆಯದಾಗಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇಂತಹ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಮೊದಲೆರಡು ಪಂದ್ಯಗಳಲ್ಲಿ ಕಳಾಹೀನರಾಗಿದ್ದ 39 ವರ್ಷ ವಯಸ್ಸಿನ ರೋಹಿತ್ ಆ ಪಂದ್ಯದಲ್ಲಿ ಅಮೋಘ ಶತಕ ಸಹ ಬಾರಿಸಿದ್ದರು. ‘ಜೊತೆಯಾಗಿ ಮಾತನಾಡುವ ಅವಕಾಶ ನಮಗೆ ಸಿಕ್ಕಿಲ್ಲ. ನನಗೇನೂ ಅವರು ಹೇಳಿಲ್ಲ ಮಾಧ್ಯಮಗಳಲ್ಲಷ್ಟೇ ಈ ಬಗ್ಗೆ ವದಂತಿಗಳು ಪ್ರಕಟವಾಗುತ್ತಿವೆ. ನಿವೃತ್ತಿಯಂಥ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.
Read the complete story at Prajavani