56 ವರ್ಷದ ಯುವಕನ ಬಗ್ಗೆ ಮಾತಾಡ್ತಿಲ್ಲ – ಅಧಿವೇಶನಕ್ಕೂ ಮುನ್ನ ರಾಗಾಗೆ ಪಿಎಂ ಪರೋಕ್ಷ ಟಾಂಗ್
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ದೇಶದ ಯುವ ಸಾಧಕರನ್ನು ಶ್ಲಾಘಿಸುವ ನೆಪದಲ್ಲಿ, ತಾವು 28 ವರ್ಷದ ಯುವಕರ ಬಗ್ಗೆ ಮಾತನಾಡುತ್ತಿದ್ದೇನೆಯೇ ಹೊರತು, 56 ವರ್ಷದವರ ಬಗ್ಗೆ ಅಲ್ಲ ಎಂದು ಲೇವಡಿ ಮಾ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ದೇಶದ ಯುವ ಸಾಧಕರನ್ನು ಶ್ಲಾಘಿಸುವ ನೆಪದಲ್ಲಿ, ತಾವು 28 ವರ್ಷದ ಯುವಕರ ಬಗ್ಗೆ ಮಾತನಾಡುತ್ತಿದ್ದೇನೆಯೇ ಹೊರತು, 56 ವರ್ಷದವರ ಬಗ್ಗೆ ಅಲ್ಲ ಎಂದು ಲೇವಡಿ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುತ್ತಿರುವ ‘ಸ್ಕೈರೂಟ್’ ಸ್ಟಾರ್ಟ್ಅಪ್ ತಂಡವನ್ನು ಶ್ಲಾಘಿಸಿದರು. ಈ ಸಂಸ್ಥೆಯಲ್ಲಿ ಶ್ರಮಿಸುತ್ತಿರುವ ಇಡೀ ತಂಡದ ಸರಾಸರಿ ವಯಸ್ಸು ಕೇವಲ 28 ವರ್ಷಗಳು. ಇಂತಹ ಯುವಕರು ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿದ್ದಾರೆ. ನಾನು ದೇಶದ ಹೆಮ್ಮೆಯಾಗಿರುವ ಇಂತಹ ನೈಜ ಯುವಕರ ಬಗ್ಗೆ ಮಾತನಾಡುತ್ತಿದ್ದೇನೆ, ಯಾವುದೇ 56 ವರ್ಷದ ಯುವಕನ ಬಗ್ಗೆ ಅಲ್ಲ” ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ವಿದ್ಯುತ್ ಸಂಪರ್ಕ ಕಲ್ಪಿಸಲು 75,000 ಲಂಚಕ್ಕೆ ಬೇಡಿಕೆ; ಮಂಡ್ಯದಲ್ಲಿ ʻಲೋಕಾʼ ಬಲೆಗೆ ಬಿದ್ದ ಸೆಸ್ಕಾಂ ಎಇ ಸತ್ಯವಾದ ಚರ್ಚೆಗೆ ಕರೆ: ಸಂಸತ್ತಿನ ಕಲಾಪದ ಕುರಿತು ಮಾತನಾಡಿದ ಪ್ರಧಾನಿ, ಎಲ್ಲಿ ಸತ್ಯ ಮತ್ತು ಬಲವಾದ ತರ್ಕ ಇರುತ್ತದೆಯೋ, ಅಲ್ಲಿ ಗದ್ದಲ ಸೃಷ್ಟಿಸುವ ಅಗತ್ಯವಿರುವುದಿಲ್ಲ. ಸಂಸತ್ತಿನಲ್ಲಿ ಧ್ವನಿ ಎತ್ತುವುದಕ್ಕಿಂತ ಮಂಡಿಸುವ ವಿಚಾರಗಳು ಸತ್ಯಕ್ಕೆ ಹತ್ತಿರವಾಗಿರಬೇಕು. ಪ್ರತಿಯೊಬ್ಬ ಸಂಸದರ ಧ್ವನಿಗೂ ಇಲ್ಲಿ ಗೌರವ ಸಿಗಬೇಕು ಮತ್ತು ಅಧಿವೇಶನವು ಅರ್ಥಪೂರ್ಣ ಚರ್ಚೆಗಳಿಗೆ ಸಾಕ್ಷಿಯಾಗಬೇಕು ಎಂದು ವಿಪಕ್ಷಗಳಿಗೆ ಕಿವಿಮಾತು ಹೇಳಿದ್ದಾರೆ. ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕ ಮುನ್ನಡೆ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಸಂಘರ್ಷದ ಪರಿಸ್ಥಿತಿಯು ಭಾರತಕ್ಕೆ ದೊಡ್ಡ ಸವಾಲಾಗಿದೆ ಎಂದ ಅವರು, ಇಂಧನ ಆಮದಿನ ಮೇಲಿನ ಅವಲಂಬನೆಯ ನಡುವೆಯೂ ದೇಶದ ಆರ್ಥಿಕತೆ ಸದೃಢವಾಗಿದೆ ಎಂದರು. ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿರುವ ಭಾರತವು ಪ್ರಸ್ತುತ ಶೇಕಡಾ 7.7 ರಷ್ಟು ಆರ್ಥಿಕ ಪ್ರಗತಿ ದರವನ್ನು (GDP Growth) ಕಾಯ್ದುಕೊಂಡಿದೆ ಎಂದು ಹೆಮ್ಮೆಯಿಂದ ಉಲ್ಲೇಖಿಸಿದ್ದಾರೆ. ಪ್ರಕೃತಿಯ ಮುಂಗಾರು ಮತ್ತು ಸಂಸತ್ತಿನ ಮುಂಗಾರು ಅಧಿವೇಶನ ಎರಡೂ ದೇಶದ ಪ್ರಗತಿಗೆ ಪೂರಕವಾಗಿರಬೇಕು. ಇವೆರಡೂ ಉತ್ಪಾದಕವಾದಾಗ ದೇಶದ ಸಮಸ್ತ ಜೀವಿಗಳಿಗೂ ಒಳಿತಾಗುತ್ತದೆ. ಅಧಿವೇಶನದ ಕಲಾಪಗಳಲ್ಲಿ ಸಂಪೂರ್ಣ ನಿಷ್ಠೆಯಿಂದ ಭಾಗವಹಿಸುವಂತೆ ಎಲ್ಲಾ ಪಕ್ಷದ ಸಂಸದರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಯುವಜನರ ಬಗ್ಗೆ ಇಷ್ಟೊಂದು ವೈರಾಗ್ಯ ಹೊಂದಿದ ಪ್ರಧಾನಿ ಮತ್ತೊಬ್ಬರಿಲ್ಲ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಕಿಡಿ