ನನ್ನನ್ನು ಮದುವೆಯಾಗದಿದ್ರೆ ಕೊಂದು ಬಿಡ್ತೀನಿ – ಬೆದರಿಕೆ ಹಾಕಿ ಮರುದಿನವೇ ವಿದ್ಯಾರ್ಥಿನಿಗೆ ಗುಂಡಿಕ್ಕಿ ಹತ್ಯೆ
ಪಾಟ್ನಾ: ಬಿಹಾರದ (Bihar) ಸಮಸ್ತಿಪುರದ ಕೈಜಿಯಾ ಗ್ರಾಮದಲ್ಲಿ ಕಾಲೇಜಿಗೆ ಹೋಗುತ್ತಿದ್ದ 12ನೇ ತರಗತಿ ವಿದ್ಯಾರ್ಥಿನಿಯನ್ನು (Student) ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಮಸ್ತಿಪುರದದ ನಿವಾಸಿ ಉಮೇಶ್ ಠಾಕೂರ್ ಅವರ ಪುತ್ರಿ ಸೋನಮ್ ಕುಮಾರಿ ಹತ್ಯೆಯಾದ ಬಾಲಕಿ. ಸೋಮವಾರ ಬೆಳಿಗ್ಗೆ ಆಕೆ ಕಸ್ತೂರ್ಬಾ ವಿದ್ಯಾಲಯ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈ

ಪಾಟ್ನಾ: ಬಿಹಾರದ (Bihar) ಸಮಸ್ತಿಪುರದ ಕೈಜಿಯಾ ಗ್ರಾಮದಲ್ಲಿ ಕಾಲೇಜಿಗೆ ಹೋಗುತ್ತಿದ್ದ 12ನೇ ತರಗತಿ ವಿದ್ಯಾರ್ಥಿನಿಯನ್ನು (Student) ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಮಸ್ತಿಪುರದದ ನಿವಾಸಿ ಉಮೇಶ್ ಠಾಕೂರ್ ಅವರ ಪುತ್ರಿ ಸೋನಮ್ ಕುಮಾರಿ ಹತ್ಯೆಯಾದ ಬಾಲಕಿ. ಸೋಮವಾರ ಬೆಳಿಗ್ಗೆ ಆಕೆ ಕಸ್ತೂರ್ಬಾ ವಿದ್ಯಾಲಯ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹತ್ಯೆಯ ಹಿಂದಿನ ದಿನ ಆಕೆಗೆ ಬೆದರಿಕೆ ಹಾಕಲಾಗಿತ್ತು. ಇದನ್ನೂ ಓದಿ: ಗರ್ಲ್ ಫ್ರೆಂಡ್ ಮಾತನಾಡ್ತಿಲ್ಲ ಅಂತ ನೇಣುಬಿಗಿದುಕೊಂಡು 41 ವರ್ಷದ ವ್ಯಕ್ತಿ ಆತ್ಮಹತ್ಯೆ! ಪೊಲೀಸರು (Police) ಕೊಲೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಲ್ಕು ಗುಂಡುಗಳು ಸ್ಥಳದಲ್ಲಿ ಪತ್ತೆಯಾಗಿವೆ. ಪೊಲೀಸರು ಪರಿಶೀಲನೆ ನಡೆಸುವಾಗ ಗ್ರಾಮಸ್ಥರು ಹಾಗೂ ಬಾಲಕಿಯ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಬಾಲಕಿಯ ತಾಯಿ ಸಂಗೀತಾ ದೇವಿ ಮಾಧ್ಯಮಗಳ ಜೊತೆ ಮಾತನಾಡಿ, ಮಗಳು ಗ್ರಾಮದ ಯುವಕನೊಬ್ಬನ ಜೊತೆ ಸಂಪರ್ಕದಲ್ಲಿದ್ದಳು. ಅವನೇ ಗುಂಡಿಕ್ಕಿ ಕೊಂದಿದ್ದಾನೆ. ಅಲ್ಲದೇ ಆಕೆಯ ಕೊಲೆಗೆ ಒಂದು ದಿನದ ಮೊದಲು ಆರೋಪಿಯು ತನ್ನನ್ನು ಮದುವೆಯಾಗುವಂತೆ ಬಾಲಕಿಗೆ ಹೇಳಿ, ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾರೆ. ಎಎಸ್ಪಿ ಸಂಜಯ್ ಕುಮಾರ್ ಪಾಂಡೆ, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ಬಳಿ ಲಂಚಕ್ಕೆ ಕೈಯೊಡ್ಡಿದ ಪ್ರಿನ್ಸಿಪಾಲ್ ʻಲೋಕಾʼ ಬಲೆಗೆ