ಗುರು ಸಂಚಾರ: ಕಟಕ ರಾಶಿಯವರ ಆಸೆ ಪೂರ್ಣಗೊಳ್ಳುವ ಕಾಲ
2026ರ ಜೂನ್ 1ರಂದು ಗುರು ಮಿಥುನ ರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸಿದ್ದಾನೆ. ಆದರೆ ಅಕ್ಟೋಬರ್ 31ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಆದರೆ ಪುನ: 2027ರ ಜನವರಿ 24ರಂದು ಕಟಕ ರಾಶಿಯನ್ನು ಪ್ರವೇಶಿಸಿ, ಜೂನ್ 26ರವರೆಗೆ ಅದೇ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಮೇಷ, ಕಟಕ, ತುಲಾ ಹಾಗೂ ಮಕರ ರಾಶಿಗಳಲ್ಲಿ ಜನಿಸಿದವರಿಗೆ ವಿಶೇಷವಾದ ಫಲಗಳು ದೊರೆಯುತ್ತವೆ

2026ರ ಜೂನ್ 1ರಂದು ಗುರು ಮಿಥುನ ರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸಿದ್ದಾನೆ. ಆದರೆ ಅಕ್ಟೋಬರ್ 31ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಆದರೆ ಪುನ: 2027ರ ಜನವರಿ 24ರಂದು ಕಟಕ ರಾಶಿಯನ್ನು ಪ್ರವೇಶಿಸಿ, ಜೂನ್ 26ರವರೆಗೆ ಅದೇ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಮೇಷ, ಕಟಕ, ತುಲಾ ಹಾಗೂ ಮಕರ ರಾಶಿಗಳಲ್ಲಿ ಜನಿಸಿದವರಿಗೆ ವಿಶೇಷವಾದ ಫಲಗಳು ದೊರೆಯುತ್ತವೆ.ಕಟಕ ರಾಶಿಯಲ್ಲಿ ಜನಿಸಿರುವವರು ಚುರುಕುತನದಿಂದ ತಮ್ಮ ಕೆಲಸವನ್ನು ಸಾಧಿಸುತ್ತಾರೆ. ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಆದರೆ ದುಡುಕುತನದ ಮಾತಿನಿಂದ ಬೇರೆಯವರಲ್ಲಿ ಬೇಸರವನ್ನು ಉಂಟುಮಾಡುತ್ತಾರೆ.ಕಟಕ ರಾಶಿ: ವಿಶ್ವಾವಸು ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಕಟಕ ರಾಶಿಯಲ್ಲಿ ರವಿ ಸಂಚಾರ; ಯಾವ ರಾಶಿಯವರಿಗೆ ಶುಭ, ಅಶುಭ ಫಲ?ಗೃಹ ನಿರ್ಮಾಣದಲ್ಲಿ ಕಟಕ ರಾಶಿಯವರು ಪಾಲಿಸಬೇಕಾದ ಅಂಶಗಳಿವುಚಂದ್ರ ಗ್ರಹ ಕಾರಕತ್ವ: ಕಟಕ ರಾಶಿಯ ಅಧಿಪತಿ ಗುಣಗಳು, ಶಕ್ತಿ ಬಗ್ಗೆ ತಿಳಿದುಕೊಳ್ಳಿಇವರು ತೆಗೆದುಕೊಳ್ಳುವ ನಿರ್ಣಯಗಳನ್ನು ಎಲ್ಲರೂ ಒಪ್ಪಲೇಬೇಕೆಂಬ ಧೋರಣೆ ಇರುತ್ತದೆ. ಇವರ ನೀತಿಗಳು ಎಲ್ಲರೂ ಒಪ್ಪುವ ರೀತಿಯಲ್ಲಿಯೇ ಇರುತ್ತದೆ. ಇವರ ಆಸೆಗಳು ದೇವರ ಅನುಗ್ರಹದಿಂದ ನೆರವೇರುತ್ತದೆ. ಪೂರ್ವ ಯೋಜನೆ ಇಲ್ಲದೆ ಯಾವುದೇ ಕೆಲಸ ಆರಂಭಿಸುವುದಿಲ್ಲ. ಗುರು ಹಿರಿಯರ ಆದೇಶ ಮಾರ್ಗದರ್ಶನ ಪಾಲಿಸುವರು. ಇದರಿಂದಾಗಿ ಸೋಲಿನ ಭಯವಿರುವುದಿಲ್ಲ. ವಿದ್ಯಾಭ್ಯಾಸದಲ್ಲಿ ನಿಧಾನಗತಿಯ ಪ್ರಗತಿ ಇರುತ್ತದೆ. ಆರೋಗ್ಯದಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆ ಕಂಡುಬರುತ್ತದೆ. ಉನ್ನತ ವಿದ್ಯಾಭ್ಯಾಸ ಮತ್ತು ಉನ್ನತ ಅಧಿಕಾರ ಲಭಿಸುತ್ತದೆ. ಕೌಟುಂಬಿಕ ಕಲಹಗಳಿಗೆ ಶಾಶ್ವತ ಪರಿಹಾರ ಪಡೆಯುವಿರಿ. ವ್ಯಾಪಾರ ವ್ಯವಹಾರದ ಪೂರ್ಣ ಜವಾಬ್ದಾರಿಯ ಹೊಣೆ ದೊರೆಯಲಿದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರಿಳಿತ ಇರಲಿದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಈ ರಾಶಿಯವರ ಪ್ರಾಬಲ್ಯತೆ ಇರುತ್ತದೆ. ಅನ್ಯರ ಬಗ್ಗೆ ಇರುವ ಬೇಸರ ಅಥವಾ ಅಪನಂಬಿಕೆಯನ್ನು ತೋರ್ಪಡಿಸುವುದಿಲ್ಲ. ಮಾಡದ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ.ಉದ್ಯೋಗಕ್ಷೇತ್ರದಲ್ಲಿ ಎದುರಾಗುವ ಬದಲಾವಣೆಗಳಿಗೆ ಹೊಂದಿಕೊಂಡು ಬಾಳುವರು. ಅವಶ್ಯಕತೆ ಉಂಟಾದಲ್ಲಿ ಉಪವೃತ್ತಿಯೊಂದನ್ನು ಅವಲಂಭಿಸುವಿರಿ. ವಿರೋಧಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಮಕ್ಕಳ ಜೀವನದಲ್ಲಿನ ಕಷ್ಟ ನಷ್ಟಗಳನ್ನು ಪರಿಹರಿಸುವಿರಿ. ಸಮಾಜಸೇವೆಯಲ್ಲಿ ತೊಡಗಿದವರಿಗೆ ಗೌರವಯುತ ಸ್ಥಾನಮಾನ ಲಭಿಸುತ್ತದೆ. ಕಲಾವಿದರಿಗೆ ನಿರೀಕ್ಷಿತ ಅವಕಾಶಗಳು ದೊರೆಯುತ್ತವೆ. ಇವರ ಬಗ್ಗೆ ಇದ್ದ ತಪ್ಪು ವದಂತಿಗಳು ಮರೆಯಾಗುತ್ತವೆ.ವಾಹನಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಕೈಕಾಲುಗಳಿಗೆ ಪೆಟ್ಟಾಗುವ ಸಾಧ್ಯತೆಗಳಿವೆ.