ಕಾವೇರಿ ನೀರು ಸರಬರಾಜು ಕಾಮಗಾರಿ: ಬೆಂಗಳೂರಿನ ಹಲವೆಡೆ ನಾಳೆ ನೀರು ಪೂರೈಕೆ ವ್ಯತ್ಯಯ
ಬೆಂಗಳೂರು: ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ ಒಂದನೇ ಘಟ್ಟದ ವಿವಿಧೆಡೆ ಜುಲೈ 22ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 1,200 ಮಿ.ಮೀ. ವ್ಯಾಸದ ಕೊಳವೆ ಮಾರ್ಗದಲ್ಲಿರುವ 200 ಮಿ.ಮೀ. ಏರ್ ವಾಲ್ವ್ ಮತ್ತು ಸ್ಲ್ಯೂಯಿಸ್ ವಾಲ್ವ್ ಸೋರಿಕೆಯನ್ನು ತಡೆಗಟ್ಟುವ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಅಂದ

ಬೆಂಗಳೂರು: ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ ಒಂದನೇ ಘಟ್ಟದ ವಿವಿಧೆಡೆ ಜುಲೈ 22ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 1,200 ಮಿ.ಮೀ. ವ್ಯಾಸದ ಕೊಳವೆ ಮಾರ್ಗದಲ್ಲಿರುವ 200 ಮಿ.ಮೀ. ಏರ್ ವಾಲ್ವ್ ಮತ್ತು ಸ್ಲ್ಯೂಯಿಸ್ ವಾಲ್ವ್ ಸೋರಿಕೆಯನ್ನು ತಡೆಗಟ್ಟುವ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಅಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಾಗುವುದು. ಹೀಗಾಗಿ ಸಾರ್ವಜನಿಕರು ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳಬೇಕು ಎಂದು ಜಲ ಮಂಡಳಿ ಪ್ರಕಟಣೆ ತಿಳಿಸಿದೆ.ಪ್ರಮುಖ ಸ್ಥಳಗಳು: ಮಹಾಲಕ್ಷ್ಮಿ ಲೇಔಟ್, ಜೆ.ಸಿ.ನಗರ, ಮುನೇಶ್ವರ ಬ್ಲಾಕ್, ರಾಜಾಜಿನಗರ 2ರಿಂದ 5ನೇ ಬ್ಲಾಕ್ವರೆಗೆ, ರಾಜಾಜಿನಗ, ನಂದಿನಿ ಲೇಔಟ್, ನರಸಿಂಹ ಲೇಔಟ್, ಕೆಎಚ್ಬಿ ಕಾಲೊನಿ, ಮಾರಪ್ಪನ ಪಾಳ್ಯ, ವಾಣಿ ವಿಲಾಸ ಗಾರ್ಡನ್, ಕುರುಬರಹಳ್ಳಿ, ಬಸವೇಶ್ವರ ನಗರ, ಎನ್ಜಿಇಎಫ್ ಲೇಔಟ್, ವಿಧಾನಸೌಧ ಲೇಔಟ್, ಜಾಲಹಳ್ಳಿ,ಎಚ್ಎಂಟಿ ಬಡಾವಣೆ, ಆರ್ಪಿಸಿ ಲೇಔಟ್, ವಿಜಯನಗರ, ಮಾಗಡಿ ರೋಡ್ 1ರಿಂದ 12ನೇ ಕ್ರಾಸ್ವರೆಗೆ, ನಾಯಂಡಹಳ್ಳಿ, ಗೋವಿಂದರಾಜ ನಗರ, ಕೋಣನಕುಂಟೆ ಕ್ರಾಸ್, ಮೈಕೋ ಲೇಔಟ್, ಕೋರಮಂಗಲ, ಜಯನಗರ ಸುತ್ತಮುತ್ತಲಿನ ಪ್ರದೇಶಗಳು.