ಕಲ್ಲು ಗಣಿಗಾರಿಕೆ ಹಳ್ಳಕ್ಕೆ ಉರುಳಿದ ಲಾರಿ: ಇಬ್ಬರ ಸಾವು
ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ರಾಜೇಂದ್ರಪುರದ ಮಧು ಕ್ರಷರ್ನಲ್ಲಿ ಸೋಮವಾರ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸುಮಾರು ನೂರು ಅಡಿ ಹಳ್ಳಕ್ಕೆ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.ಲಾರಿ ಚಾಲಕ, ಮದ್ಯಪ್ರದೇಶದ ಅಕ್ಷಯ್ (32), ಕ್ಲೀನರ್ ಕೋಲ್ಕತ್ತದ ಸಹದೇವ್ (35) ಮೃತರು. ಇಬ್ಬರೂ ಸಂತೋಷ್ ಎಂಬ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದರು. ಸೋಮವಾರ

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ರಾಜೇಂದ್ರಪುರದ ಮಧು ಕ್ರಷರ್ನಲ್ಲಿ ಸೋಮವಾರ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸುಮಾರು ನೂರು ಅಡಿ ಹಳ್ಳಕ್ಕೆ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.ಲಾರಿ ಚಾಲಕ, ಮದ್ಯಪ್ರದೇಶದ ಅಕ್ಷಯ್ (32), ಕ್ಲೀನರ್ ಕೋಲ್ಕತ್ತದ ಸಹದೇವ್ (35) ಮೃತರು. ಇಬ್ಬರೂ ಸಂತೋಷ್ ಎಂಬ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದರು. ಸೋಮವಾರ ಎಂದಿನಂತೆ ಕ್ರಷರ್ನಿಂದ ಕಲ್ಲುಗಳನ್ನು ತುಂಬಿಕೊಂಡು ಹೋಗುವಾಗ ಲಾರಿ ಹಳ್ಳಕ್ಕೆ ಉರುಳಿದೆ.ಸಿಪಿಐ ಮಾಧ್ಯಾನಾಯ್ಕ್ , ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ಹೊರತೆಗೆದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read the complete story at Prajavani