ಪದಾರ್ಪಣೆ ದಿನದಿಂದಲೇ ಟೀಕೆಗಳನ್ನು ಕೇಳಿರುವ: ರೋಹಿತ್ ಶರ್ಮಾ
ಲಂಡನ್: 'ನಾನು ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದಿನದಿಂದಲೇ ಟೀಕೆಗಳು ಸದ್ದು ಮಾಡುತ್ತಲೇ ಇವೆ. ನಾನು ಆಡುವಷ್ಟು ದಿನವೂ ಆ ಸದ್ದುಗದ್ದಲ ಇದ್ದೇ ಇರುತ್ತದೆ. ನನಗೆ ಇದರಿಂದ ಏನೂ ವ್ಯತ್ಯಾಸವಾಗುವುದಿಲ್ಲ’ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟರ್ ರೋಹಿತ್ ಶರ್ಮಾ ಹೇಳಿದರು. ಭಾನುವಾರ ಇಂಗ್ಲೆಂಡ್ ಎದುರು ಲಾರ್ಡ್ಸ್ನಲ್ಲಿ ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯ

ಲಂಡನ್: 'ನಾನು ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದಿನದಿಂದಲೇ ಟೀಕೆಗಳು ಸದ್ದು ಮಾಡುತ್ತಲೇ ಇವೆ. ನಾನು ಆಡುವಷ್ಟು ದಿನವೂ ಆ ಸದ್ದುಗದ್ದಲ ಇದ್ದೇ ಇರುತ್ತದೆ. ನನಗೆ ಇದರಿಂದ ಏನೂ ವ್ಯತ್ಯಾಸವಾಗುವುದಿಲ್ಲ’ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟರ್ ರೋಹಿತ್ ಶರ್ಮಾ ಹೇಳಿದರು. ಭಾನುವಾರ ಇಂಗ್ಲೆಂಡ್ ಎದುರು ಲಾರ್ಡ್ಸ್ನಲ್ಲಿ ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅವರು ಅಮೋಘ ಶತಕ (138 ರನ್) ಬಾರಿಸಿದರು. ಆದರೆ ಭಾರತ ತಂಡವು 27 ರನ್ಗಳಿಂದ ಸೋತಿತು. ‘ನಾನು ಆಟದಂಕಣದಲ್ಲಿ ಏನು ಮಾಡುತ್ತೇನೆ ಎಂಬುದಷ್ಟೇ ಗಣನೆಗೆ ಬರುತ್ತದೆ. ಆದ್ದರಿಂದ ತಂಡಕ್ಕೆ ಉಪಯುಕ್ತವಾದುದನ್ನು ನೀಡಲು ಪ್ರಯತ್ನಿಸುತ್ತೇನೆ. ಆ ಕೆಲಸಸ ಮೇಲೆ ನನ್ನ ಸಂಪೂರ್ಣ ಗಮನ ಇದೆ. ಟೀಕೆಗಳ ಸದ್ದು ಇರದೇ ಹೋದರೆ ಮಜಾ ಇರುವುದಿಲ್ಲ. ನನ್ನ ಕೆಲಸ ಮೈದಾನದೊಳಗೆ. ಅವರ ಕೆಲಸ ಹೊರಗೆ ಎಂಬ ಭಾವನೆ ನನ್ನದು’ ಎಂದು ಬಿಸಿಸಿಐ ಡಾಟ್ ಟಿವಿಗೆ ನೀಡಿದ ಸಂದರ್ಶನದಲ್ಲಿ ರೋಹಿತ್ ಹೇಳಿದರು. 39 ವರ್ಷದ ರೋಹಿತ್ ಅವರಿಗೆ ಲಾರ್ಡ್ಸ್ ಪಂದ್ಯವು ಕೊನೆಯದಾಗಲಿದೆ. ಅವರು ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ ಎಂಬ ಮಾತುಗಳು ಪಂದ್ಯಕ್ಕೂ ಮುನ್ನ ಕೇಳಿಬಂದಿದ್ದವು. ಅವರ ಫಾರ್ಮ್ ಮತ್ತು ಫಿಟ್ನೆಸ್ ಕುರಿತು ಬಹಳಷ್ಟು ಚರ್ಚೆಗಳು ನಡೆದಿದ್ದವು. ಪರ, ವಿರೋಧ ಹೇಳಿಕೆಗಳು ಕೇಳಿಬಂದಿದ್ದವು. ಆದರೆ ಅವೆಲ್ಲವಕ್ಕೂ ಅವರು ಏಕದಿನ ಕ್ರಿಕೆಟ್ನಲ್ಲಿ ತಮ್ಮ 34ನೇ ಶತಕ ದಾಖಲಿಸಿ ಉತ್ತರ ನೀಡಿದರು. ‘ನನಗೆ ಇಂಗ್ಲೆಂಡ್ನಲ್ಲಿ ಆಡುವುದೆಂದರೆ ಬಹಳ ಪ್ರೀತಿ. ಇಲ್ಲಿಯ ಮೈದಾನಗಳ ವಾತಾವರಣ ಮತ್ತು ಪಿಚ್ಗಳಲ್ಲಿ ಯಾವುದೇ ಮಾದರಿಯ ಕ್ರಿಕೆಟ್ ಆಡಲು ಅನುಕೂಲಕರವಾಗಿವೆ. ಹಲವು ಆಯಾಮಗಳಲ್ಲಿ ಅವು ಸವಾಲೊಡ್ಡುತ್ತವೆ’ ಎಂದು ಹೇಳಿದರು. ‘ಪಂದ್ಯದ ಫಲಿತಾಂಶ ಬೇಸರ ತರಿಸಿದೆ. ನಾವು ಗೆಲುವು ಸಾಧಿಸಬೇಕಿತ್ತು. ಆದರೆ ಇದನ್ನು ಮರೆತು ಮುಂದೆ ಸಾಗಬೇಕು’ ಎಂದರು. ಆತಿಥೇಯ ಇಂಗ್ಲೆಂಡ್ ತಂಡವು ಸರಣಿಯನ್ನು 2–1ರಿಂದ ಜಯಿಸಿತು.