ಭಾರಿ ವೇತನದ ಕೆಲಸ ತೊರೆದು ಹೆತ್ತವರಿಗಾಗಿ ಕೆನಡಾದಿಂದ ಮರಳಿದ ಬೆಂಗಳೂರು ಟೆಕಿ
ಕೆನಡಾದ ಆರಾಮದಾಯಕ ಜೀವನ, ಶಿಸ್ತಿನ ಲೈಫ್ಸ್ಟೈಲ್ ಎಲ್ಲವನ್ನೂ ಬಿಟ್ಟು ವೃದ್ಧ ಪೋಷಕರ ಮುಖದಲ್ಲಿನ ನಗು ನೋಡಲು ಭಾರತಕ್ಕೆ ಮರಳುವ ಧೈರ್ಯ ಎಷ್ಟು ಜನಕ್ಕಿರುತ್ತೆ?ಬೆಂಗಳೂರಿನ ಟೆಕಿ ರಮೇಶ್ ಎನ್.ಎನ್ ಮಾಡಿದ್ದು ಅದನ್ನೇ!. ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ವಯಸ್ಸಾಗುತ್ತಿರುವ ಪೋಷಕರ ಜೊತೆಗಿನ ಪ್ರತಿಯೊಂದು ಕ್ಷಣವೂ ಅಮೂಲ್ಯವಾದದ್ದ
ಕೆನಡಾದ ಆರಾಮದಾಯಕ ಜೀವನ, ಶಿಸ್ತಿನ ಲೈಫ್ಸ್ಟೈಲ್ ಎಲ್ಲವನ್ನೂ ಬಿಟ್ಟು ವೃದ್ಧ ಪೋಷಕರ ಮುಖದಲ್ಲಿನ ನಗು ನೋಡಲು ಭಾರತಕ್ಕೆ ಮರಳುವ ಧೈರ್ಯ ಎಷ್ಟು ಜನಕ್ಕಿರುತ್ತೆ?ಬೆಂಗಳೂರಿನ ಟೆಕಿ ರಮೇಶ್ ಎನ್.ಎನ್ ಮಾಡಿದ್ದು ಅದನ್ನೇ!. ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ವಯಸ್ಸಾಗುತ್ತಿರುವ ಪೋಷಕರ ಜೊತೆಗಿನ ಪ್ರತಿಯೊಂದು ಕ್ಷಣವೂ ಅಮೂಲ್ಯವಾದದ್ದು ಎಂಬುದನ್ನು ನೆನಪಿಸುತ್ತದೆ ರಮೇಶ್ ಅವರ ಕಥೆ.ಕೆನಡಾದಲ್ಲಿ ಕಾರ್ಸೆಂಟ್ರಿಕ್ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಡೈರೆಕ್ಟರ್ ಆಗಿ ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದ ರಮೇಶ್ಗೆ, ವಿಡಿಯೊ ಕಾಲ್ನಲ್ಲಿ ಹೆತ್ತವರ ಮುಖ ನೋಡುವುದಕ್ಕಿಂತ ಅವರ ಜೊತೆಯೇ ಇರುವುದು ಹೆಚ್ಚು ಮುಖ್ಯ ಎನಿಸಿತು. ಸುಮಾರು 6 ವರ್ಷಗಳ ಹಿಂದೆ, ತಮ್ಮ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿದ್ದಾಗಲೇ ಭಾರತಕ್ಕೆ ವಾಪಸ್ ಬರಲು ತೀರ್ಮಾನಿಸಿದರು.ಗಮನ ಸೆಳೆದ ಶರ್ಮಿಳಾ ಮಾಂಡ್ರೆ ವೆಡ್ಡಿಂಗ್ ಲುಕ್ವಿದ್ಯಾರ್ಥಿಗಳ ಪ್ರತಿಭಟನೆಗೆ ನನ್ನ ಬೆಂಬಲ... ಕೇಂದ್ರದ ವಿರುದ್ಧ ನಟಿ ರಮ್ಯಾ ಕಿಡಿ ‘ಸಮಯ ಎನ್ನುವುದು ಯಾರಿಗಾಗಿಯೂ ಕಾಯುವುದಿಲ್ಲ. ಕುಟುಂಬಕ್ಕೆ ನೀಡುವ ಸಮಯವನ್ನು ನಾವು ಮುಂದೂಡುತ್ತಾ ಹೋಗಲು ಸಾಧ್ಯವಿಲ್ಲ. ಭವಿಷ್ಯ ಮತ್ತು ಆರಾಮದಾಯಕ ಜೀವನಕ್ಕಿಂತ ಹೆತ್ತವರ ಜೊತೆ ಇರುವುದೇ ನನಗೆ ಹೆಚ್ಚು ತೃಪ್ತಿ ನೀಡಿತು‘ ಎನ್ನುತ್ತಾರೆ ರಮೇಶ್.ಬೆಂಗಳೂರು: ವೃತ್ತಿಗೂ ಸಾಥ್, ಪ್ರೀತಿಗೂ ಸಾಥ್!ಕೆನಡಾದಿಂದ ಮರಳಿದ ಮೇಲೆ ರಮೇಶ್, ಕುಟುಂಬದವರೊಂದಿಗೆ ಬೆಂಗಳೂರಿನಲ್ಲಿ ನೆಲೆಯೂರಿದರು. ಕೇವಲ ಕುಟುಂಬದ ಹತ್ತಿರವಾದದ್ದು ಮಾತ್ರವಲ್ಲ, 'ಸಿಲಿಕಾನ್ ಸಿಟಿ' ಅವರ ವೃತ್ತಿಜೀವನಕ್ಕೂ ದೊಡ್ಡ ಬೂಸ್ಟ್ ನೀಡಿತು. ಬೆಂಗಳೂರಿನ ಟೆಕ್ ವಾತಾವರಣ, ಹೊಸ ಟ್ಯಾಲೆಂಟ್ ಮತ್ತು ಕೆಲಸದ ವೇಗ ಅವರಿಗೆ ವೃತ್ತಿಜೀವನದಲ್ಲಿ ಯಾವುದೇ ಹಿನ್ನಡೆಯಾಗದಂತೆ ನೋಡಿಕೊಂಡಿತು. ‘ನಮ್ಮ ರಸ್ತೆಗಳು, ಟ್ರಾಫಿಕ್ ಹಾಗೂ ವ್ಯವಸ್ಥೆಗೆ ಹೊಂದಿಕೊಳ್ಳಲು ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ, ಹೆತ್ತವರ ಮುಖದಲ್ಲಿನ ನೆಮ್ಮದಿಯ ಮುಂದೆ ಇವೆಲ್ಲವೂ ಸಣ್ಣದೆನಿಸಿದವು‘ ಎನ್ನುತ್ತಾರೆ ರಮೇಶ್.VIDEO | ‘ಈ ದೇಶದ ಯುವಕರು ಬಿಜೆಪಿಗೆ ತಕ್ಕ ಪಾಠ ಕಲಿಸ್ತಾರೆ’ರಾಜಕೀಯಕ್ಕಿಂತ ಮಾನವೀಯತೆ ದೊಡ್ಡದು: ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ ನಟ ಯುವಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆರಮೇಶ್ ಅವರು ತಮ್ಮ ಲಿಂಕ್ಡ್ಇನ್ ಖಾತೆಯಲ್ಲಿ ಹಂಚಿಕೊಂಡ ಈ ಕಥೆ ಸಾವಿರಾರು ಮನಸ್ಸುಗಳನ್ನು ಮುಟ್ಟಿದೆ.‘ನಾನೂ 2015ರಲ್ಲಿ ಅಮೆರಿಕದಿಂದ ಭಾರತಕ್ಕೆ ಮರಳಿದೆ. ಆರಂಭದ ವರ್ಷ ಕಷ್ಟವೆನಿಸಿದರೂ, ಈಗ ಕುಟುಂಬದ ಜೊತೆಗಿರುವ ಈ ಜೀವನವೇ ನೆಮ್ಮದಿ ನೀಡಿದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ‘ಗೆಲುವು ಎನ್ನುವುದು ನಾವು ವಾಸಿಸುವ ದೇಶದಿಂದ ನಿರ್ಧಾರವಾಗುವುದಿಲ್ಲ, ನಾವು ಬೆಳೆಸಿಕೊಳ್ಳುವ ಸಂಬಂಧಗಳಿಂದ ನಿರ್ಧಾರವಾಗುತ್ತದೆ‘ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.ಅದೆಷ್ಟೋ ಜನರು ಗಡಿ ದಾಟಿ ಗಳಿಸುವ ಹಣದಲ್ಲಿ ಸಂತೋಷ ಹುಡುಕುತ್ತಿರುವಾಗ, ರಮೇಶ್ ಅವರ ಈ ನಿರ್ಧಾರ ನಮಗೆಲ್ಲರಿಗೂ ಜೀವನದ ನಿಜವಾದ ಆದ್ಯತೆ ಯಾವುದು ಎಂಬುದನ್ನು ನೆನಪಿಸುತ್ತದೆ.