ಆಗ ನಿಮ್ಮ ಮಾತುಗಳನ್ನು ನಂಬಲಿಲ್ಲ... ಕ್ಷಮಿಸಿ ರೋಹಿತ್; ಸಂಜು ಸ್ಯಾಮ್ಸನ್
ಮುಂಬೈ: 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಲು ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದ್ದರು.ಸೂಪರ್-8ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಫೈನಲ್ನಲ್ಲಿ ನಿರ್ಣಾಯಕ ಇನಿಂಗ್ಸ್ಗಳನ್ನು ಆಡುವ ಮೂಲಕ ಸಂಜು ತಂಡದ ಗೆಲುವಿಗೆ ಕಾರಣರಾಗಿದ್ದರು.

ಮುಂಬೈ: 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಲು ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದ್ದರು.ಸೂಪರ್-8ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಫೈನಲ್ನಲ್ಲಿ ನಿರ್ಣಾಯಕ ಇನಿಂಗ್ಸ್ಗಳನ್ನು ಆಡುವ ಮೂಲಕ ಸಂಜು ತಂಡದ ಗೆಲುವಿಗೆ ಕಾರಣರಾಗಿದ್ದರು.ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಹನ್ನೊಂದರ ಬಳಗದಲ್ಲಿ ಜಾಗ ಸಿಗದಿರುವುದಕ್ಕೆ ತೀವ್ರ ನಿರಾಶೆಯಾಗಿತ್ತು. ಆ ಸಂದರ್ಭದಲ್ಲಿ ರೋಹಿತ್ ಶರ್ಮಾ ತಮಗೆ ಧೈರ್ಯ ತುಂಬಿ, ಭರವಸೆ ನೀಡಿದ್ದರು. ಆದರೆ ಆರಂಭದಲ್ಲಿ ರೋಹಿತ್ ಅವರ ಮಾತುಗಳನ್ನು ನಂಬಿರಲಿಲ್ಲ ಎಂದಿರುವ ಸಂಜು, ಅದಕ್ಕಾಗಿ ಈಗ ಕ್ಷಮೆಯಾಚಿಸುವುದಾಗಿ ಸಂಜು ಜಿಯೊ ಸ್ಟಾರ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಯೋಚನಾ ಶೈಲಿ ಬದಲಿದ ರೋಹಿತ್...ರೋಹಿತ್ ತಮ್ಮ ಅಪಾರ ಅನುಭವದಿಂದ ನನ್ನಲ್ಲಿ ಆತ್ಮವಿಶ್ವಾಸ ತುಂಬಲು ಯತ್ನಿಸಿದ್ದರು. ಆದರೆ, ಆ ಸಮಯದಲ್ಲಿ ನಾನು ತೀವ್ರ ನಿರಾಶೆಯಲ್ಲಿದ್ದೆ. ತದನಂತರ ಅವರ ಮಾತುಗಳಿಂದ ಸ್ಫೂರ್ತಿಗೊಂಡು ನನ್ನ ಯೋಚನಾ ಶೈಲಿಯನ್ನು ಬದಲಾಯಿಸಿಕೊಂಡೆ. ಬಳಿಕ ಎಲ್ಲವೂ ಸರಿಯಾಯಿತು ಎಂದು ಸಂಜು ಸ್ಮರಿಸಿದ್ದಾರೆ.ವಿಶ್ವಕಪ್ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದೆ. ಸರಣಿಯ ಯಾವೊಂದು ಪಂದ್ಯದಲ್ಲೂ 30 ರನ್ಗಳ ಗಡಿ ದಾಟಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ತೀವ್ರ ಹತಾಶೆ ಉಂಟಾಗಿತ್ತು. ದಿನ ಕಳೆಯುವುದೇ ಕಷ್ಟವಾಗಿತ್ತು. ಇಂತಹ ಕಠಿಣ ಸನ್ನಿವೇಶವೇ ನನ್ನನ್ನು ಮಾನಸಿಕವಾಗಿ ಮತ್ತಷ್ಟು ಗಟ್ಟಿಗೊಳಿಸಿತು ಎಂದು ಸಂಜು ಸ್ಯಾಮ್ಸನ್ ವಿವರಿಸಿದ್ದಾರೆ.Sanju Samson: ಒಂದೇ ಇನಿಂಗ್ಸ್ನಿಂದ ಹೀರೊ ಪಟ್ಟಕ್ಕೆ....ಆಟ ಅಖಾಡ: ರೋಹಿತ್ ಎಂದರೆ ‘ಹಿಟ್ಮ್ಯಾನ್’ ಅಷ್ಟೇ ಅಲ್ಲ...