ರಾಜಮೌಳಿಯ ‘ವಾರಾಣಸಿ’ಯಲ್ಲಿ ‘ಮಂದಾಕಿನಿ’ಯಾದ ಪ್ರಿಯಾಂಕ ಚೋಪ್ರಾ
‘ಆರ್ಆರ್ಆರ್’ ಬಳಿಕ ನಿರ್ದೇಶಕ ಎಸ್.ಎಸ್.ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ‘ವಾರಾಣಸಿ’. ಕೆಲ ತಿಂಗಳ ಹಿಂದೆ ಅದ್ಧೂರಿಯಾಗಿ ಶೀರ್ಷಿಕೆ ಅನಾವರಣಗೊಳಿಸಿದ್ದ ಚಿತ್ರತಂಡ ಇದೀಗ ಸಿನಿಮಾದ ನಾಯಕಿಯನ್ನು ಪರಿಚಯಿಸಿದೆ.ಮಹೇಶ್ ಬಾಬು ನಟನೆಯ ಈ ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ತಾರಾಬಳಗದಲ್ಲಿದ್ದಾರೆ. ನಾಯಕಿ ಪ್ರಿಯಾಂಕ

‘ಆರ್ಆರ್ಆರ್’ ಬಳಿಕ ನಿರ್ದೇಶಕ ಎಸ್.ಎಸ್.ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ‘ವಾರಾಣಸಿ’. ಕೆಲ ತಿಂಗಳ ಹಿಂದೆ ಅದ್ಧೂರಿಯಾಗಿ ಶೀರ್ಷಿಕೆ ಅನಾವರಣಗೊಳಿಸಿದ್ದ ಚಿತ್ರತಂಡ ಇದೀಗ ಸಿನಿಮಾದ ನಾಯಕಿಯನ್ನು ಪರಿಚಯಿಸಿದೆ.ಮಹೇಶ್ ಬಾಬು ನಟನೆಯ ಈ ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ತಾರಾಬಳಗದಲ್ಲಿದ್ದಾರೆ. ನಾಯಕಿ ಪ್ರಿಯಾಂಕ ಅವರ ಪಾತ್ರವನ್ನು ರಾಜಮೌಳಿ ಅವರು ಪರಿಚಯಿಸಿದ್ದಾರೆ. ‘ಮಂದಾಕಿನಿ’ ಎಂಬ ಪಾತ್ರದಲ್ಲಿ ಪ್ರಿಯಾಂಕ ನಟಿಸಿದ್ದಾರೆ. ‘ಈಕೆ ನಕ್ಕಾಗ ಅಲ್ಲೊಂದು ಕಳೆ ಇರುತ್ತದೆ. ನಗದೇ ಇದ್ದಾಗ ಆಕೆ ಬೆಂಕಿ’ ಎಂಬ ವಾಕ್ಯದೊಂದಿಗೆ ‘ಮಂದಾಕಿನಿ’ ಪಾತ್ರದ ವ್ಯಕ್ತಿತ್ವವನ್ನು ರಾಜಮೌಳಿ ವಿವರಿಸಿದ್ದಾರೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260721-51-2003503298
Read the complete story at Prajavani