ರೂಪಾಯಿ ಮೌಲ್ಯ ಕುಸಿತ: ಬೆಂಗಳೂರು, ಮುಂಬೈನಲ್ಲಿ ಹೂಡಿಕೆಗೆ ಗಲ್ಫ್ NRIಗಳ ಆಸಕ್ತಿ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿದುಬೈ: ಭಾರತೀಯ ರೂಪಾಯಿಯ ಮೌಲ್ಯ ಕುಸಿದಿರುವುದು ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ (ಎನ್ಆರ್ಐ) ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಭಾರತದ ಪ್ರಮುಖ ನಗರಗಳಲ್ಲಿನ ರಿಯಲ್ ಎಸ್ಟೇಟ್ಗೆ ಹೂಡಿಕೆ ಮಾಡುವವರ ಸಂಖ್ಯೆ ಏರಿಕೆಯಾಗಿದೆ. ವಿಶೇಷವಾಗಿ ವಿಮಾನ ನಿಲ್ದಾಣ, ಮೆಟ್ರೊ, ಐಟಿ ಕೇಂದ್ರಗಳು ಹಾಗೂ ಉತ್ತಮ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿದುಬೈ: ಭಾರತೀಯ ರೂಪಾಯಿಯ ಮೌಲ್ಯ ಕುಸಿದಿರುವುದು ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ (ಎನ್ಆರ್ಐ) ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಭಾರತದ ಪ್ರಮುಖ ನಗರಗಳಲ್ಲಿನ ರಿಯಲ್ ಎಸ್ಟೇಟ್ಗೆ ಹೂಡಿಕೆ ಮಾಡುವವರ ಸಂಖ್ಯೆ ಏರಿಕೆಯಾಗಿದೆ. ವಿಶೇಷವಾಗಿ ವಿಮಾನ ನಿಲ್ದಾಣ, ಮೆಟ್ರೊ, ಐಟಿ ಕೇಂದ್ರಗಳು ಹಾಗೂ ಉತ್ತಮ ಬಾಡಿಗೆ ಆದಾಯದ ಸಾಧ್ಯತೆ ಇರುವ ಪ್ರದೇಶಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.ಫ್ರೀಹೋಲ್ಡ್, ಲೀಸ್ಹೋಲ್ಡ್? ದುಬೈನಲ್ಲಿ ಮನೆ ಖರೀದಿಸುವ ಮುನ್ನ ಇದು ತಿಳಿದಿರಲಿಎನ್ಆರ್ಐಗಳ ಮೊದಲ ಆಯ್ಕೆಯಾಗಿ ಮುಂಬೈ ಇದ್ದು, ನಂತರದ ಸ್ಥಾನಗಳಲ್ಲಿ ಬೆಂಗಳೂರು, ಹೈದರಾಬಾದ್, ಪುಣೆ ಹಾಗೂ ದೆಹಲಿ–ಎನ್ಸಿಆರ್ ಇವೆ. ನವಿ ಮುಂಬೈ, ಪನ್ವೆಲ್ ಹಾಗೂ ಅಹಮದಾಬಾದ್ನ ಗಿಫ್ಟ್ ಸಿಟಿಯಂತಹ ಹೊಸ ಬೆಳವಣಿಗೆಯ ಪ್ರದೇಶಗಳತ್ತಲೂ ಹೂಡಿಕೆದಾರರು ಆಸಕ್ತಿ ತೋರುತ್ತಿದ್ದಾರೆ.ತಜ್ಞರ ಪ್ರಕಾರ, ಈಗ ಎನ್ಆರ್ಐಗಳು ಕೇವಲ ಪ್ರತಿಷ್ಠಿತ ಪ್ರದೇಶಗಳಿಗಿಂತ ಉತ್ತಮ ಮೂಲಸೌಕರ್ಯ, ಉದ್ಯೋಗಾವಕಾಶ, ಬಾಡಿಗೆ ಆದಾಯ ಹಾಗೂ ಭವಿಷ್ಯದ ಬೆಲೆ ಏರಿಕೆಯ ಸಾಧ್ಯತೆ ಇರುವ ಸ್ಥಳಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಎಂಬಿಎ ವಿದ್ಯಾರ್ಥಿನಿಗೆ ₹1 ಲಕ್ಷ ಧನಸಹಾಯ ನೀಡಿದ ದುಬೈ ಉದ್ಯೋಗಿಮುಂಬೈಯಲ್ಲಿ ನವಿ ಮುಂಬೈ, ಪನ್ವೆಲ್, ಖಾರ್ಘರ್, ಬೆಂಗಳೂರಿನಲ್ಲಿ ವೈಟ್ಫೀಲ್ಡ್ ಮತ್ತು ಉತ್ತರ ಬೆಂಗಳೂರು, ಹೈದರಾಬಾದ್ನಲ್ಲಿ ಫೈನಾನ್ಶಿಯಲ್ ಡಿಸ್ಟ್ರಿಕ್ಟ್ ಹಾಗೂ ಪುಣೆಯಲ್ಲಿ ಪಶ್ಚಿಮ ಭಾಗದ ಐಟಿ ಕಾರಿಡಾರ್ಗಳಲ್ಲಿ ಹೂಡಿಕೆ ಮಾಡಲು ಎನ್ಆರ್ಐಗಳು ಉತ್ಸಾಹ ತೋರಿದ್ದಾರೆ.ರೂಪಾಯಿ ಮೌಲ್ಯ ಕುಸಿತದಿಂದ ಅದೇ ಪ್ರಮಾಣದ ಡಾಲರ್ ಅಥವಾ ಯುಎಇ ದಿರ್ಹಮ್ಗೆ ಹೆಚ್ಚಿನ ರೂಪಾಯಿ ದೊರೆಯುತ್ತಿರುವುದರಿಂದ ಎನ್ಆರ್ಐಗಳ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ ಎಂದು ರಿಯಲ್ ಎಸ್ಟೇಟ್ ಕ್ಷೇತ್ರದ ತಜ್ಞರು ಹೇಳಿದ್ದಾರೆ.ಮುಂಬೈಯಲ್ಲಿ ಖಾರ್ ವೆಸ್ಟ್, ವರ್ಲಿ, ಲೋವರ್ ಪರೇಲ್, ಪೊವೈ, ಬಾಂದ್ರಾ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐಷಾರಾಮಿ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಚೆಂಬೂರ್, ಬೊರಿವಲಿ ಹಾಗೂ ಮೆಟ್ರೊ ಮಾರ್ಗಗಳ ಸುತ್ತಲಿನ ಪ್ರದೇಶಗಳಲ್ಲಿಯೂ ಹೂಡಿಕೆ ಹೆಚ್ಚುತ್ತಿದೆ.ಯುಎಇ ಪ್ರವಾಸಿ ವೀಸಾದ ಹೊಸ ನಿಯಮಗಳು: 5 ವರ್ಷ ಮಾನ್ಯತೆ, ವರ್ಷಕ್ಕೆ 180 ದಿನ ವಾಸನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಅಟಲ್ ಸೇತು, ಮೆಟ್ರೊ ವಿಸ್ತರಣೆ ಹಾಗೂ ಇತರೆ ಸಂಪರ್ಕ ಯೋಜನೆಗಳಿಂದ ನವಿ ಮುಂಬೈ ಮತ್ತು ಪನ್ವೆಲ್ ದೀರ್ಘಾವಧಿಯ ಹೂಡಿಕೆಗೆ ಸೂಕ್ತ ತಾಣಗಳಾಗಿ ಪರಿಣಮಿಸಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಬೆಂಗಳೂರು, ಹೈದರಾಬಾದ್, ಪುಣೆ ಹಾಗೂ ದೆಹಲಿ–ಎನ್ಸಿಆರ್ನಲ್ಲಿಯೂ ಐಟಿ ಮತ್ತು ಉದ್ಯೋಗ ಕೇಂದ್ರಗಳ ಸುತ್ತಮುತ್ತ ಇರುವ ಪ್ರದೇಶಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಹಮದಾಬಾದ್ ಸಮೀಪದ ಗಿಫ್ಟ್ ಸಿಟಿಯತ್ತಲೂ ಎನ್ಆರ್ಐಗಳ ಆಸಕ್ತಿ ಹೆಚ್ಚುತ್ತಿದೆ.ಆಧಾರ: ಗಲ್ಫ್ ನ್ಯೂಸ್ ಯುಎಇ | 'ಜಯವನ್' ಪಾವತಿ ಕಾರ್ಡ್ಗೆ ಚಾಲನೆ: ಏನಿದರ ಲಾಭ?