ಫಿಫಾ ವಿಶ್ವಕಪ್–2026: ವಿಶ್ವವಿಜೇತ ತಂಡ ಕಟ್ಟಿದ ‘ಲಾ ರೋಜಾ’
ನ್ಯೂಯಾರ್ಕ್: ಸ್ಪೇನ್ನ ಫುಟ್ಬಾಲ್ ಹೊಸ ಎತ್ತರಕ್ಕೆ ಏರಿದೆ. ಈ ತಂಡವು ಭಾನುವಾರ ಸಾಧಿಸಿದ ಫಿಫಾ ವಿಶ್ವಕಪ್ ವಿಜಯವು, ಪುರುಷರ, ಮಹಿಳೆಯರ ಮತ್ತು ಯುವ ವಿಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಈ ದೇಶ ಸಾಧಿಸುತ್ತಿರುವ ಯಶಸ್ಸಿನ ದೀರ್ಘ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ.ನಿರ್ದಿಷ್ಟ ಕಾರ್ಯತಂತ್ರ ಮತ್ತು ಪ್ರತಿಭೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ವ್ಯವಸ್

ನ್ಯೂಯಾರ್ಕ್: ಸ್ಪೇನ್ನ ಫುಟ್ಬಾಲ್ ಹೊಸ ಎತ್ತರಕ್ಕೆ ಏರಿದೆ. ಈ ತಂಡವು ಭಾನುವಾರ ಸಾಧಿಸಿದ ಫಿಫಾ ವಿಶ್ವಕಪ್ ವಿಜಯವು, ಪುರುಷರ, ಮಹಿಳೆಯರ ಮತ್ತು ಯುವ ವಿಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಈ ದೇಶ ಸಾಧಿಸುತ್ತಿರುವ ಯಶಸ್ಸಿನ ದೀರ್ಘ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ.ನಿರ್ದಿಷ್ಟ ಕಾರ್ಯತಂತ್ರ ಮತ್ತು ಪ್ರತಿಭೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ವ್ಯವಸ್ಥೆಗೆ ಸ್ಪೇನ್ ನೀಡಿರುವ ಆದ್ಯತೆಯನ್ನು ಈ ಯಶಸ್ಸು ಎತ್ತಿತೋರಿಸಿದೆ. ಪುರುಷರ ತಂಡವು ಯುರೋಪಿನ ಹಾಲಿ ಚಾಂಪಿಯನ್, ಒಲಿಂಪಿಕ್ ಸ್ವರ್ಣ ವಿಜೇತ ಮತ್ತು ನೇಷನ್ಸ್ ಲೀಗ್ನಲ್ಲಿ ಎರಡು ಬಾರಿ ಫೈನಲ್ ತಲುಪಿ, ಒಮ್ಮೆ ಪ್ರಶಸ್ತಿ ಗೆದ್ದಿದೆ. ಮಹಿಳಾ ತಂಡವು ಹಾಲಿ ವಿಶ್ವ ಕಪ್ ಚಾಂಪಿಯನ್, ಎರಡು ಬಾರಿ ಮಹಿಳಾ ನೇಷನ್ಸ್ ಲೀಗ್ ಗೆದ್ದುಕೊಂಡಿದೆ. ಜೊತೆಗೆ 2025ರ ಯುರೊ ಚಾಂಪಿಯನ್ಷಿಪ್ನಲ್ಲಿ ರನ್ನರ್ ಅಪ್.2010ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿ ತಾರಾವರ್ಚಸ್ಸಿನ ಆಂಡ್ರೆಸ್ ಇನಿಯಸ್ತಾ, ಚಾವಿ ಹೆರ್ನಾಂಡೆಝ್, ಸೆರ್ಗಿಯೊ ರಾಮೋಸ್, ಝೆರಾರ್ಡ್ ಪೀಕೆ ಅಂಥ ಘಟಾನುಘಟಿಗಳಿದ್ದರು. ಆ ಪೀಳಿಗೆಯ ನಂತರ ಆರಂಭವಾದ ತಂಡ ಕಟ್ಟುವ ಪ್ರಕ್ರಿಯೆ ಈಗ ಫಲ ನೀಡುತ್ತಿದೆ. ಲಮಿನ್ ಯಮಾಲ್, ಪಾವು ಕುಬಾರ್ಸಿ, ರಾದ್ರಿ ಮತ್ತು ಫೈನಲ್ನಲ್ಲಿ ನಿರ್ಣಾಯಕ ಗೋಲು ಹೊಡೆದ ಫೆರನ್ ಟೊರೆಸ್ ಅಂಥ ಆಟಗಾರರು ಹೊಸ ಪೀಳಿಗೆಯನ್ನು ಪ್ರತಿನಿಧಿಸುತ್ತಿದ್ದಾರೆ. ‘ಲಾ ರೋಜಾ’ವನ್ನು ಮರಳಿ ಯಶಸ್ಸಿನ ಹಾದಿಯಲ್ಲಿ ಕರೆದೊಯ್ಯುತ್ತಿದ್ದಾರೆ.‘ಈ ಪಥದಲ್ಲಿ ಹಿಂತಿರುಗಿ ನೋಡುವಾಗ ಭಾವೋದ್ವೇಗವಾಗುತ್ತದೆ’ ಎಂದು ಸ್ಪೇನ್ ತಂಡದ ಕೋಚ್ ಲೂಯಿಸ್ ದಿಲಾ ಫುಯಂತೆ ಹೇಳುತ್ತಾರೆ. ‘ನಾವು ಈ ಬಗ್ಗೆ ಆಟಗಾರರೊಂದಿಗೆ ಮಾತನಾಡಿದ್ದೇವೆ. ನಾವೆಲ್ಲವನ್ನು ಗೆದ್ದುಕೊಂಡಿದ್ದೇವೆ. ಇದು ಅದ್ಭುತ ಭಾವನೆ. ಈ ಆಟಗಾರರ ಸಾಧನೆಯು ಸ್ಪೇನ್ ಕ್ರೀಡೆಗೆ, ದೇಶದ ಯುವಜನಾಂಗಕ್ಕೆ ಮಾದರಿ’ ಎನ್ನುತ್ತಾರೆ 65 ವರ್ಷದ ಕೋಚ್.2010ರಲ್ಲಿ ಮೊದಲ ಬಾರಿ ವಿಶ್ವವಿಜೇತರಾದ ನಂತರ ಸ್ಪೇನ್ ಮೂರು ವಿಶ್ವಕಪ್ಗಳಲ್ಲಿ 16ರ ಸುತ್ತನ್ನು ದಾಟಿರಲಿಲ್ಲ. 2022ರಲ್ಲಿ ತಂಡದ ಮ್ಯಾನೇಜರ್ ಆದ ಬಳಿಕ ಪ್ರತಿಯೊಂದು ಟೂರ್ನಿಯಲ್ಲಿ ಸ್ಪೇನ್ ಪ್ರಶಸ್ತಿಗೆ ನೆಚ್ಚಿನ ತಂಡವಾಗುತ್ತಿದೆ. ಸತತ 38 ಪಂದ್ಯಗಳಲ್ಲಿ ಅಜೇಯವಾಗುಳಿದಿರುವುದು ಪುರುಷರ ಅಂತರರಾಷ್ಟ್ರೀಯ ಫುಟ್ಬಾಲ್ನಲ್ಲಿ ದಾಖಲೆಯಾಗಿದೆ.ಸಾಂಘಿಕ ಆಟ: ತಂಡದಲ್ಲಿ ಪ್ರತಿಭಾನ್ವಿತ ಆಟಗಾರರ ಗುಂಪು ಇದ್ದರೂ, ತಂಡದ ಸಾಂಘಿಕ ಪ್ರದರ್ಶನ ಎಲ್ಲರ ಮನಗೆದ್ದಿದೆ. ತಂಡ ಯಾವುದೇ ಒಬ್ಬ ‘ಸ್ಟಾರ್ ಆಟಗಾರ’ನನ್ನು ಅವಲಂಬಿಸಿರಲಿಲ್ಲ. ರಕ್ಷಣೆ ವಿಭಾಗದಲ್ಲಿ ಪರಿಣಾಮಕಾರಿ ಎನಿಸಿತು. ಪ್ರಬಲ ಬ್ಯಾಕ್ಲೈನ್ ಜೊತೆಗೆ ಚೆಂಡನ್ನು ಬಹುಕಾಲ ತನ್ನ ಹಿಡಿತದಲ್ಲೇ ಇರುವಂತೆ ನೋಡಿಕೊಳ್ಳುವುದರಲ್ಲಿ ಆ ತಂಡದ ಯಶಸ್ಸು ಅಡಗಿತು.‘ನಾವು ವಿಶ್ವದ ಶ್ರೇಷ್ಠ ತಂಡಗಳ ಎದುರು ಆಡಿದೆವು. ಆದರೆ ವಿಶ್ವದಲ್ಲಿ ನಾವೇ ಶ್ರೇಷ್ಠ ತಂಡವೆನಿಸಿದೆವು’ ಎಂದು ಫುಯಂತೆ ಅಭಿಮಾನಪಟ್ಟರು.ಕೋಚ್ ಪಾತ್ರ: ಲೂಯಿಸ್ ಎನ್ರಿಕ್ ಅವರು ಮ್ಯಾನೇಜರ್ ಆಗಿದ್ದ ವೇಳೆ 2022ರ ವಿಶ್ವಕಪ್ನಲ್ಲಿ ಸ್ಪೇನ್ ತಂಡ 16ರ ಘಟ್ಟದಲ್ಲಿ ಮೊರಾಕ್ಕೊ ಎದುರು ಮಂಡಿಯೂರಿತ್ತು. ಈ ವೇಳೆ ಫುಯಂತೆ ಮಾರ್ಗದರ್ಶನದ ಹೊಣೆ ವಹಿಸಿಕೊಂಡಿದ್ದರು. ಆಗ ಅವರೇನೂ ವಿಶ್ವಪ್ರಸಿದ್ಧ ಕೋಚ್ ಆಗಿರಲಿಲ್ಲ. ಆದರೆ ಅವರ ಸಾಮರ್ಥ್ಯ ಸ್ಪೇನ್ ಫೆಡರೇಷನ್ಗೆ ಚೆನ್ನಾಗಿ ತಿಳಿದಿತ್ತು.ಫುಯಂತೆ ಆರಂಭದಲ್ಲಿ ಕೆಲಕಾಲ ಮೊದಲು ಸ್ಪೇನ್ನ ಯುವ ತಂಡಗಳಿಗೆ ತರಬೇತಿ ನೀಡಿದರು. ಸ್ಪೇನ್ ಫೆಡರೇಷನ್ನ ತಲೆಯಲ್ಲಿದ್ದ ನಿರ್ದಿಷ್ಟ ಯೋಚನೆ ಏನೆಂಬುದನ್ನು ಅರಿತ ಅವರು ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದರು.ಯಮಾಲ್, ಕುಬಾರ್ಸಿ, ನಿಕೊ ವಿಲಿಯಮ್ಸ್, ಪೆದ್ರಿ ಮತ್ತು ಗಾವಿ ಅವರು ಇನ್ನೂ ಕೆಲವು ವರ್ಷ ಸ್ಪೇನ್ ತಂಡಕ್ಕೆ ಆಡಬಲ್ಲರು.ಟಿಕಿ ಟಾಕಾ: ಚಿಕ್ಕ, ಚೊಕ್ಕ ಪಾಸ್ಗಳೊಂದಿಗೆ ಚೆಂಡನ್ನು ಹಿಡಿತಕ್ಕೆ ಪಡೆಯುವ ತಂತ್ರಗಾರಿಕೆ ಇದು. 2010ರ ವಿಶ್ವಕಪ್, 2008ರ ಮತ್ತು 2012 ಯುರೊ ಕಪ್ಗಳಲ್ಲಿ ಇದು ಸ್ಪೇನ್ ಯಶಸ್ಸಿಗೆ ನೆರವಾಯಿತು. ಆದರೆ ನಂತರದ ವರ್ಷಗಳಲ್ಲಿ ರಾಷ್ಟ್ರೀಯ ತಂಡ ಪರದಾಡಿ ‘ಟಿಕಿ ಟಾಕಾ’ ಶೈಲಿ ಟೀಕೆಗೆ ಒಳಗಾಯಿತು.ಹೀಗಾಗಿ ನಂತರದ ವರ್ಷಗಳಲ್ಲಿ ಈ ತಂತ್ರದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಲಾಯಿತು. ಆದರೆ ಸ್ಪೇನ್ ಎಂದೂ ಪೂರ್ಣವಾಗಿ ಈ (ಚೆಂಡನ್ನು ಹಿಡಿತಕ್ಕೆ ಪಡೆದು ಪಂದ್ಯ ನಿಯಂತ್ರಿಸುವ) ತಂತ್ರದಿಂದ ವಿಮುಖವಾಗಲಿಲ್ಲ. ಫುಯಂತೆ ಅವರು ಚೆಂಡಿನ ನಿಯಂತ್ರಣದ ಜೊತೆಗೆ ಕಾರ್ಯಕ್ಷಮತೆ, ಕೌಶಲ ಹೆಚ್ಚಿಸಲು ಒತ್ತು ನೀಡಿದರು.ಮ್ಯಾಡ್ರಿಡ್ನಲ್ಲಿ 'ಕೆಂಪು ಸಮುದ್ರ'ದ ಭೋರ್ಗರೆತಸ್ಪೇನ್ ರಾಜಧಾನಿ ಮ್ಯಾಡ್ರಿಡ್ನಲ್ಲಿ ಸೋಮವಾರ ತಡರಾತ್ರಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ನಾಯಕ ರಾದ್ರಿ, ಯುವ ತಾರೆ ಲಮಿನ್ ಯಮಾಲ್ ಸೇರಿದಂತೆ ತಂಡದ ಆಟಗಾರರನ್ನು ಸ್ವಾಗತಿಸಲು ರಾಜಧಾನಿಯ ರಸ್ತೆಗಳಲ್ಲಿ ಸುಮಾರು 18 ಲಕ್ಷ ಜನ ಸೇರಿದ್ದರು.ತಂಡದ ಕೆಂಪು ಬಣ್ಣದ ಜೆರ್ಸಿ ತೊಟ್ಟ ಅಭಿಮಾನಿಗಳು ಸಿಬೆಲೆಸ್ ಸ್ಟೋರ್ ಸುತ್ತಲಿನ ನಾಲ್ಕೂ ರಸ್ತೆಗಳಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಡೋನ್ ಕ್ಯಾಮೆರಾ ಕಣ್ಣಲ್ಲಿ ಕೆಂಪು ಸಮುದ್ರ'ದಂತೆ ಗೋಚರಿಸಿತು.2022ರ ನಂತರ ಸ್ಪೇನ್ ತಂಡಗಳ ಸಾಧನೆಪುರುಷರು:2026ರ ಫಿಫಾ ವಿಶ್ವಕಪ್ ಚಾಂಪಿಯನ್142024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ1+2024ರ ಯೂರೋಪಿಯನ್ ಚಾಂಪಿಯನ್142022-23ರ ಯುಇಎಫ್ಎ ನೇಷನ್ಸ್ ಲೀಗ್ ಚಾಂಪಿಯನ್, 2024-25ರಲ್ಲಿ ರನ್ನರ್ಸ್ ಅಪ್ಮಹಿಳೆಯರು:2023ರ ಫಿಫಾ ವಿಶ್ವಕಪ್ ಚಾಂಪಿಯನ್2022-238 , 2024-25 32025ರ ಯುರೊ ಚಾಂಪಿಯನ್ಷಿಪ್ನಲ್ಲಿ ರನ್ನರ್ಸ್ ಅಪ್142024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ