ಪ್ರಧಾನಿ ನಿವಾಸದ ಮುಂದೆ ಭಾರೀ ಹೈಡ್ರಾಮಾ – ಕೈಕಾಲು ಹಿಡಿದು ರಾಹುಲ್ ಗಾಂಧಿ ಹೊತ್ತೊಯ್ದ ಪೊಲೀಸರು
– ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ಸೇರಿ ಹಲವು ನಾಯಕರು ವಶಕ್ಕೆ – ಕೆಸಿ ವೇಣುಗೋಪಾಲ್ ತೀವ್ರ ಅಸ್ವಸ್ಥ ನವದೆಹಲಿ: ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡಿಸಿ ಕಾಂಗ್ರೆಸ್ ನಾಯಕರು ಬೀದಿಗೆ ಇಳಿದಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಧರ್ಮೇಂದ್ರ ಪ್ರಧಾನ್, ನರೇಂದ್ರ ಮೋದಿ (PM Modi) ಅವರ ರಾಜೀನಾಮೆಗೂ ಆಗ್ರಹಿಸಿದ್ದಾರೆ. ಆದ್ರೆ ಪ್ರಧ

– ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ಸೇರಿ ಹಲವು ನಾಯಕರು ವಶಕ್ಕೆ – ಕೆಸಿ ವೇಣುಗೋಪಾಲ್ ತೀವ್ರ ಅಸ್ವಸ್ಥ ನವದೆಹಲಿ: ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡಿಸಿ ಕಾಂಗ್ರೆಸ್ ನಾಯಕರು ಬೀದಿಗೆ ಇಳಿದಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಧರ್ಮೇಂದ್ರ ಪ್ರಧಾನ್, ನರೇಂದ್ರ ಮೋದಿ (PM Modi) ಅವರ ರಾಜೀನಾಮೆಗೂ ಆಗ್ರಹಿಸಿದ್ದಾರೆ. ಆದ್ರೆ ಪ್ರಧಾನಿ ನಿವಾಸದ ಎದುರು ನಡೆಯುತ್ತಿದ್ದ ಪ್ರತಿಭಟನೆ ಉಗ್ರಸ್ವರೂಪ ಪಡೆಯುವ ಮುನ್ನವೇ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. BREAKING | New Delhi Congress leader Rahul Gandhi was detained by Delhi Police/RAF during a protest near Prime Minister Narendra Modi’s residence. Several Congress MPs and party workers were also detained as chaos unfolded at the protest site.#Delhi #RahulGandhi #PMModi pic.twitter.com/REfyZNqgUc — WarPolitics (@TheWarPolitics0) July 21, 2026 ಪೊಲೀಸರ ಸೂಚನೆ ಹೊರತಾಗಿಯೂ ಪ್ರತಿಭಟನೆ ಹಿಂಪಡೆಯಲು ನಿರಾಕರಿಸಿದ ಹಿನ್ನೆಲೆ ರಾಹುಲ್ ಗಾಂಧಿ ಅವರನ್ನು ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ಕರೆದೊಯ್ದಿದ್ದಾರೆ. ಈ ವೇಳೆ ಭಾರೀ ಹೈಡ್ರಾಮಾವೇ ಸೃಷ್ಟಿಯಾಗಿದೆ. ಪೊಲೀಸರು ರಾಹುಲ್ ಗಾಂಧಿ ಅವರ ಕೈ-ಕಾಲು ಹಿಡಿದು, ಕರೆದೊಯ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೇ ವೇಳೆ ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರನ್ನೂ ವಶಕ್ಕೆ ಪಡೆಯಲಾಗಿದೆ. ದೆಹಲಿಯಲ್ಲಿ ಪ್ರಧಾನಿ ಮೋದಿ ನಿವಾಸದ ಸಮೀಪ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಪ್ರಿಯಾಂಕಾ ಗಾಂಧಿ, ಖರ್ಗೆ, ವೇಣುಗೋಪಾಲ್, ಡಿಕೆಶಿ ಕೂಡ ಭಾಗಿಯಾಗಿದ್ದರು. ಯುವಜನತೆಯ ಭವಿಷ್ಯ ಹಾಳು ಮಾಡಿರುವ ಕಾರಣ ಧರ್ಮೇಂದ್ರ ಪ್ರಧಾನ್ ಮಾತ್ರವಲ್ಲ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ಕೊಡ್ಬೇಕು ಅಂತ ಆಗ್ರಹಿಸಿದರು. ಇದಕ್ಕೂ ಮುನ್ನ ಸಂಸತ್ ಭವನದ ಬಳಿ ಮಾತಾಡಿದ್ದ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಮೇಲೆ ಈ ರೀತಿ ಥಳಿಸುವುದು ಭಾರತೀಯ ಸಂಸ್ಕೃತಿಯಲ್ಲ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.