ರಾಜ್ಯದಲ್ಲಿ ಕೋವಿಡ್ ಡೇಂಜರ್ ಇಲ್ಲ – ಆತಂಕ ಬೇಡ ಎಂದ ಸಚಿವ ಯು.ಟಿ ಖಾದರ್
– ಕೋವಿಡ್ ಬಗ್ಗೆ ಎಚ್ಚರ ವಹಿಸಿ ಎಂದು ಸಲಹೆ ಬೆಂಗಳೂರು: ಆಂಧ್ರದಲ್ಲಿ ಕೋವಿಡ್ಗೆ (Covid) ನಾಲ್ಕು ಮಂದಿ ಬಲಿಯಾಗಿದ್ದಾರೆ. ಆಂಧ್ರದಲ್ಲಿ ಕೋವಿಡ್ ಕೇಸ್ ಇರುವುದರಿಂದ ಕರ್ನಾಟಕದ ಜನರಿಗೆ ಆರೋಗ್ಯ ಸಚಿವರು ಮಹತ್ವದ ಸಂದೇಶ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಡೇಂಜರ್ ಇಲ್ಲ, ಆದರೆ ಎಚ್ಚರಿಕೆ ವಹಿಸಿ ಎಂದು ಸಚಿವ ಯು.ಟಿ ಖಾದರ್ (UT Khader) ಸಲಹೆ ನೀಡಿದ್ದಾರೆ. ಆಂಧ್

– ಕೋವಿಡ್ ಬಗ್ಗೆ ಎಚ್ಚರ ವಹಿಸಿ ಎಂದು ಸಲಹೆ ಬೆಂಗಳೂರು: ಆಂಧ್ರದಲ್ಲಿ ಕೋವಿಡ್ಗೆ (Covid) ನಾಲ್ಕು ಮಂದಿ ಬಲಿಯಾಗಿದ್ದಾರೆ. ಆಂಧ್ರದಲ್ಲಿ ಕೋವಿಡ್ ಕೇಸ್ ಇರುವುದರಿಂದ ಕರ್ನಾಟಕದ ಜನರಿಗೆ ಆರೋಗ್ಯ ಸಚಿವರು ಮಹತ್ವದ ಸಂದೇಶ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಡೇಂಜರ್ ಇಲ್ಲ, ಆದರೆ ಎಚ್ಚರಿಕೆ ವಹಿಸಿ ಎಂದು ಸಚಿವ ಯು.ಟಿ ಖಾದರ್ (UT Khader) ಸಲಹೆ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿ (Andhra Pradesh) ಕೋವಿಡ್ಗೆ ನಾಲ್ಕು ಜನ ಉಸಿರು ಚೆಲ್ಲಿದ್ದಾರೆ. ಕೋವಿಡ್ ಸೋಕಿಂತರ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಡುವೆ ಪಾವಗಡ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಆದರೆ ರಾಜ್ಯದಲ್ಲೂ ಕೂಡ ಕೋವಿಡ್ ಇದೆಯಾ ಎಂಬ ಆತಂಕ ಶುರುವಾಗಿದೆ. ಆದರೆ ಆರೋಗ್ಯ ಸಚಿವ ಯು.ಟಿ ಖಾದರ್ ಕೋವಿಡ್ ಆತಂಕ ಬೇಡ ಎಂದು ರಾಜ್ಯದ ಜನರಿಗೆ ಹೇಳಿದ್ದಾರೆ. ಕೊರೋನಾ ರಾಜ್ಯದಲ್ಲಿ ಏರಿಕೆ ಇಲ್ಲ. ಆ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ. ಆದರೆ ಜನ ಎಚ್ಚರಿಕೆ ವಹಿಸಬೇಕು. ಸಾಂಕ್ರಾಮಿಕ ರೀತಿ ಆಗಿದೆ. ಆದರೆ ಕೋವಿಡ್ ಬಗ್ಗೆ ಆತಂಕ ಬೇಡ ಎಂದಿದ್ದಾರೆ. ಸದ್ಯಕ್ಕೆ ಆ ರೀತಿ ಆತಂಕ ಇಲ್ಲ, ಮುಂದೆ ಕೋವಿಡ್ ಹರಡುವ ಸಾಧ್ಯತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಸಿಜೆಪಿ ಪ್ರತಿಭಟನೆಯ ಡ್ರೋನ್ ವಿಡಿಯೋ ವೈರಲ್ — ತನಿಖೆ ಆರಂಭಿಸಿದ ದೆಹಲಿ ಪೊಲೀಸ್ ಇನ್ನೂ ರಾಜ್ಯದಿಂದ ಆಂಧ್ರಕ್ಕೆ ತೆರಳುವ ಜನರಿಗೆ ಅಥವಾ ತಿರುಪತಿಗೆ ತೆರಳುವ ಜನರಿಗೆ ಯಾವುದೇ ಅತಂಕ ಬೇಡ ಜೊತೆಗೆ ಅಂತಹವರಿಗೆ ಪ್ರತ್ಯೇಕ ಮಾರ್ಗಸೂಚಿ ಏನಿಲ್ಲ. ಆದರೆ ರೋಗ ಲಕ್ಷಣಗಳು ಇದ್ದರೆ ಟೆಸ್ಟ್ ಮಾಡಿಸಿಕೊಳ್ಳಲಿ ಯಾರು ಕೂಡ ಆತಂಕ ಪಡುವುದು ಬೇಡ. ಈ ಹಿಂದೆ ಕೊರೋನಾ ಸಂದರ್ಭದಲ್ಲಿ ಯಾವ ರೀತಿ ಮುಂಜಾಗ್ರತೆ ವಹಿಸಿದ್ದರೋ? ಅದೇ ರೀತಿಯಲ್ಲಿ ಎಚ್ಚರಿಕೆ ವಹಿಸಿದ್ರೆ ಸಾಕು, ಆತಂಕ ಬೇಡ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಲವಂತದ ದುಡಿಮೆಯಿಂದ ತಯಾರಾದ ವಸ್ತುಗಳ ಆಮದಿಗೆ ಬ್ರೇಕ್: ಭಾರತಕ್ಕೇನು ಲಾಭ? ಒಟ್ಟಾರೆ, ರಾಜ್ಯದಲ್ಲಿ ಕೋವಿಡ್ ಆತಂಕ ಇಲ್ಲ. ಜನರು ಕೂಡ ಅತಂಕ ಪಡೋದು ಬೇಡ. ಸದ್ಯಕ್ಕೆ ಎಚ್ಚರಿಕೆ ಇರಲಿ ಎಂದು ಆರೋಗ್ಯ ಸಚಿವರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಚೀನಾದ ಏಕಸ್ವಾಮ್ಯಕ್ಕೆ ಬೆಂಗಳೂರು ಸ್ಟಾರ್ಟಪ್ ಮಾಸ್ಟರ್ಸ್ಟ್ರೋಕ್ – ಬಂದಿದೆ ವರ್ಚುವಲ್ ಮ್ಯಾಗ್ನೆಟ್ EV ತಂತ್ರಜ್ಞಾನ!