ನೀವು ಟ್ರೆಕ್ಕಿಂಗ್ ಹೋಗ್ತೀರಾ? – ಈಗ 30 ದಿನ ಮೊದಲೇ ಬುಕ್ ಮಾಡಿ, ಫುಲ್ ರೀಫಂಡ್ ಕಟ್!
ಬೆಂಗಳೂರು: ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಆಸ್ವಾದಿಸಲು ಬಯಸುವ ಚಾರಣಿಗರಿಗೆ (Trekkers) ಕರ್ನಾಟಕ ಅರಣ್ಯ ಇಲಾಖೆ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ 30 ದಿನ ಮುಂಚಿತವಾಗಿಯೇ ಟ್ರೆಕ್ಕಿಂಗ್ ಸ್ಲಾಟ್ ಕಾಯ್ದಿರಿಸಲು ಅವಕಾಶ ನೀಡಿದೆ. ಆದರೆ ರದ್ದತಿ (Cancellation) ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಹೊಸ ನಿಯಮಗಳು ಏನು? ಈ ಹಿಂದೆ ಟ್ರೆಕ್ಕಿಂಗ್ಗೆ 15 ದಿನಗಳ ಮುಂಚಿತ

ಬೆಂಗಳೂರು: ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಆಸ್ವಾದಿಸಲು ಬಯಸುವ ಚಾರಣಿಗರಿಗೆ (Trekkers) ಕರ್ನಾಟಕ ಅರಣ್ಯ ಇಲಾಖೆ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ 30 ದಿನ ಮುಂಚಿತವಾಗಿಯೇ ಟ್ರೆಕ್ಕಿಂಗ್ ಸ್ಲಾಟ್ ಕಾಯ್ದಿರಿಸಲು ಅವಕಾಶ ನೀಡಿದೆ. ಆದರೆ ರದ್ದತಿ (Cancellation) ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಹೊಸ ನಿಯಮಗಳು ಏನು? ಈ ಹಿಂದೆ ಟ್ರೆಕ್ಕಿಂಗ್ಗೆ 15 ದಿನಗಳ ಮುಂಚಿತವಾಗಿ ಮಾತ್ರ ಆನ್ಲೈನ್ ಬುಕಿಂಗ್ ಮಾಡಲು ಅವಕಾಶವಿತ್ತು. ಆದರೆ ದೂರದ ಊರುಗಳಿಂದ ಬರುವವರು ಹಾಗೂ ಮುಂಚಿತವಾಗಿ ರಜೆ ಯೋಜಿಸುವ ಚಾರಣಿಗರ ಅನುಕೂಲಕ್ಕಾಗಿ ಈ ಕಾಲಾವಧಿಯನ್ನು 30 ದಿನಗಳಿಗೆ ಹೆಚ್ಚಿಸಲಾಗಿದೆ. ಮೊದಲು ಟ್ರೆಕ್ ದಿನಾಂಕಕ್ಕೂ 7 ದಿನ ಮುಂಚಿತವಾಗಿ ಟಿಕೆಟ್ ರದ್ದುಗೊಳಿಸಿದರೆ 100% ರಷ್ಟು ಹಣ ಮರುಪಾವತಿಯಾಗುತ್ತಿತ್ತು. ಆದರೆ ನೂತನ ನಿಯಮದಂತೆ 50% ಹಣ ಮಾತ್ರ ವಾಪಸ್ ನೀಡಲಾಗುತ್ತದೆ ಚಾರಣದ ದಿನಾಂಕಕ್ಕೆ 7 ದಿನಗಳಿಗಿಂತ ಕಡಿಮೆ ಅವಧಿ ಇದ್ದಾಗ ಬುಕಿಂಗ್ ರದ್ದುಗೊಳಿಸಿದರೆ ಯಾವುದೇ ಹಣ ವಾಪಸ್ ಸಿಗುವುದಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಟ್ರೆಕ್ಕಿಂಗ್ಗೆ ಹೊಸ ಗೈಡ್ಲೈನ್ಸ್ – ಚಾರಣಿಗರ ಮೊಬೈಲ್ಗೆ ಟ್ರ್ಯಾಕಿಂಗ್ ಆ್ಯಪ್ ಕಡ್ಡಾಯ: ಈಶ್ವರ್ ಖಂಡ್ರೆ ಬದಲಾವಣೆ ಯಾಕೆ? ಕೆಲವು ಖಾಸಗಿ ಏಜೆಂಟ್ಗಳು ಮತ್ತು ಹೋಮ್ಸ್ಟೇ ಮಾಲೀಕರು ಮುಂಚಿತವಾಗಿ ಜಾಲತಾಣದಲ್ಲಿ 100% ರೀಫಂಡ್ ಸೌಲಭ್ಯ ಬಳಸಿ ಬಲ್ಕ್ ಟಿಕೆಟ್ಗಳನ್ನು ಬುಕ್ ಮಾಡಿ ಇಟ್ಟುಕೊಳ್ಳುತ್ತಿದ್ದರು. ನಂತರ ಕೊನೆಯ ಕ್ಷಣದಲ್ಲಿ ದುಬಾರಿ ಬೆಲೆಗೆ ಪ್ರವಾಸಿಗರಿಗೆ ಮಾರಿ, ಮಾರಾಟವಾಗದ ಟಿಕೆಟ್ಗಳನ್ನು ರದ್ದುಗೊಳಿಸಿ ಪೂರ್ತಿ ಹಣ ವಾಪಸ್ ಪಡೆಯುತ್ತಿದ್ದರು. ಈ ಅಕ್ರಮಗಳಿಗೆ ದಂಧೆಗೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಫುಲ್ ರೀಫಂಡ್ ರದ್ದು ಮಾಡಿದೆ. ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡುವಾಗ ನೀಡಿದ ಮೂಲ ಗುರುತಿನ ಚೀಟಿಯನ್ನೇ (Original Hard Copy ID) ಟ್ರೆಕ್ಕಿಂಗ್ ಸ್ಥಳಕ್ಕೆ ತೆಗೆದುಕೊಂಡು ಹೋಗುವುದು ಕಡ್ಡಾಯ ಮಾಡಲಾಗಿದೆ. ಒಮ್ಮೆ ರದ್ದುಗೊಂಡ ಟಿಕೆಟ್ಗಳ ಸ್ಲಾಟ್ ಅನ್ನು ಮತ್ತೆ ಹೊಸ ಬುಕಿಂಗ್ಗೆ ಮುಕ್ತಗೊಳಿಸುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಎಲ್ಲಿ ಬುಕ್ಕಿಂಗ್ ಮಾಡಬೇಕು? ಕರ್ನಾಟಕ ಸರ್ಕಾರದ ಅಧಿಕೃತ ಅರಣ್ಯ ವಿಹಾರ ಜಾಲತಾಣ aranyavihaara.karnataka.gov.in ಮೂಲಕವೇ ಎಲ್ಲಾ ಚಾರಣಗಳ ಬುಕ್ಕಿಂಗ್ ಹಾಗೂ ಪಾವತಿಯನ್ನು ಮಾಡಬೇಕಾಗುತ್ತದೆ.