ಮಾರ್ವೆಲ್ ಸ್ಟುಡಿಯೋಸ್ನ 'ಅವೆಂಜರ್ಸ್: ಡೂಮ್ಸ್ಡೇ' ಟ್ರೈಲರ್ ಬಿಡುಗಡೆ
ನವದೆಹಲಿ: ಡಿಸೆಂಬರ್ 18ರಂದು ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ‘ಅವೆಂಜರ್ಸ್: ಡೂಮ್ಸ್ಡೇ’ ಚಿತ್ರದ ಟ್ರೈಲರ್ ಅನ್ನು ಮಾರ್ವೆಲ್ ಸ್ಟುಡಿಯೋಸ್ ಸೋಮವಾರ ಬಿಡುಗಡೆ ಮಾಡಿದೆ.ರಾಬರ್ಟ್ ಡೌನಿ ಜೂನಿಯರ್ ಜೊತೆಗೆ ಸ್ಟೀವ್ ರೋಜರ್ಸ್, ಇಯಾನ್ ಮೆಕೆಲೆನ್, ಕ್ರಿಸ್ ಇವಾನ್ಸ್ ಮತ್ತು ಕ್ರಿಸ್ ಹೆಮ್ಸ್ವರ್ತ್ ಸೇರಿದಂತೆ ಹಲವು ಖ್ಯಾತನಾಮರು ಚಿತ್ರದಲ್ಲಿ ನಟಿಸಿದ್ದಾರೆ. ‘ಅವೆಂಜರ್ಸ್

ನವದೆಹಲಿ: ಡಿಸೆಂಬರ್ 18ರಂದು ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ‘ಅವೆಂಜರ್ಸ್: ಡೂಮ್ಸ್ಡೇ’ ಚಿತ್ರದ ಟ್ರೈಲರ್ ಅನ್ನು ಮಾರ್ವೆಲ್ ಸ್ಟುಡಿಯೋಸ್ ಸೋಮವಾರ ಬಿಡುಗಡೆ ಮಾಡಿದೆ.ರಾಬರ್ಟ್ ಡೌನಿ ಜೂನಿಯರ್ ಜೊತೆಗೆ ಸ್ಟೀವ್ ರೋಜರ್ಸ್, ಇಯಾನ್ ಮೆಕೆಲೆನ್, ಕ್ರಿಸ್ ಇವಾನ್ಸ್ ಮತ್ತು ಕ್ರಿಸ್ ಹೆಮ್ಸ್ವರ್ತ್ ಸೇರಿದಂತೆ ಹಲವು ಖ್ಯಾತನಾಮರು ಚಿತ್ರದಲ್ಲಿ ನಟಿಸಿದ್ದಾರೆ. ‘ಅವೆಂಜರ್ಸ್: ಇನ್ಫಿನಿಟಿ ವಾರ್’ ಮತ್ತು ‘ಅವೆಂಜರ್ಸ್: ಎಂಡ್ಗೇಮ್’ ಖ್ಯಾತಿಯ ಆಂಥೋನಿ ಮತ್ತು ಜೋ ರುಸ್ಸೊ ಈ ಚಿತ್ರ ನಿರ್ದೇಶಿಸಿದ್ದಾರೆ. ಡೌನಿ ಜೂನಿಯರ್ ಅವರು ಡಾಕ್ಟರ್ ಡೂಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಅವೆಂಜರ್ಸ್: ಡೂಮ್ಸ್ಡೇ'ನಲ್ಲಿ ವಿಭಿನ್ನ ಸ್ಥಳಗಳಿಂದ ಬಂದ ಹೀರೊಗಳು ಮಾರಕ ಘರ್ಷಣೆಯ ಹಾದಿಯಲ್ಲಿರುತ್ತಾರೆ. ಇದುವರೆಗೂ ಕಾಣದ ಭಿನ್ನವಾದ ಬೆದರಿಕೆಯನ್ನು ಎದುರಿಸುವ ದೃಶ್ಯ ಟ್ರೈಲರ್ನಲ್ಲಿದೆ.ಈ ಸಿನಿಮಾ ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕೆವಿನ್ ಫೀಜ್, ಲೂಯಿಸ್ ಡಿ'ಎಸ್ಪೊಸಿಟೊ ಮತ್ತು ಜೊನಾಥನ್ ಶ್ವಾರ್ಟ್ಜ್ ಚಿತ್ರ ನಿರ್ಮಾಣ ಮಾಡಿದ್ದಾರೆ.
Read the complete story at Prajavani