ಏಕರೂಪ ನಾಗರಿಕ ಸಂಹಿತೆ: ಮಧ್ಯಪ್ರದೇಶ ವಿಧಾನಸಭೆ ಅಂಗೀಕಾರ
ಭೋಪಾಲ್: ಕಾಂಗ್ರೆಸ್ ಶಾಸಕರ ಪ್ರತಿಭಟನೆ ನಡುವೆಯೂ ಮಧ್ಯಪ್ರದೇಶ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಗೆ ಮಂಗಳವಾರ ಧ್ವನಿಮತದ ಅಂಗೀಕಾರ ನೀಡಿದೆ.ವಿಧಾನಸಭೆಯಲ್ಲಿ ಮಸೂದೆಯನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಮೋಹನ್ ಯಾದವ್ ಮಾತನಾಡಿದರು. ‘ವಿಧಾನಸಭೆಯಲ್ಲಿ ಈ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಓಲೈಕೆ ರಾಜಕಾರಣ ಮತ್ತು ಆದಿವಾಸಿಗಳ ವಿರೋಧ

ಭೋಪಾಲ್: ಕಾಂಗ್ರೆಸ್ ಶಾಸಕರ ಪ್ರತಿಭಟನೆ ನಡುವೆಯೂ ಮಧ್ಯಪ್ರದೇಶ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಗೆ ಮಂಗಳವಾರ ಧ್ವನಿಮತದ ಅಂಗೀಕಾರ ನೀಡಿದೆ.ವಿಧಾನಸಭೆಯಲ್ಲಿ ಮಸೂದೆಯನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಮೋಹನ್ ಯಾದವ್ ಮಾತನಾಡಿದರು. ‘ವಿಧಾನಸಭೆಯಲ್ಲಿ ಈ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಓಲೈಕೆ ರಾಜಕಾರಣ ಮತ್ತು ಆದಿವಾಸಿಗಳ ವಿರೋಧಿಯಾದ ಕಾಂಗ್ರೆಸ್ ಈ ಐತಿಹಾಸಿಕ ನಿರ್ಣಯದಲ್ಲಿ ಪಾಲುದಾರನಾಗುವ ಅವಕಾಶ ಕಳೆದುಕೊಳ್ಳುತ್ತಿದೆ’ ಎಂದರು.ಯುಸಿಸಿ ಮಸೂದೆಯನ್ನು ಸದನದ ವರಿಷ್ಠ ಸಮಿತಿಯ ಪರಾಮರ್ಶೆಗೆ ನೀಡಬೇಕು ಎಂಬ ಶಾಸಕ ಆರಿಫ್ ಮಸೂದ್ ಅವರ ಬೇಡಿಕೆಯನ್ನು ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ನ ಉಮಂಗ್ ಸಿಂಗಾರ್ ಬೆಂಬಲಿಸಿದರು. ‘ಯುಸಿಸಿ ತರುವ ಬದಲು, ಬಿಜೆಪಿ ಸರ್ಕಾರ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಶೇ 27ರಷ್ಟು ಮೀಸಲಾತಿಯನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸುತ್ತಿರುವಾಗಲೇ ತಾಂತ್ರಿಕ ಶಿಕ್ಷಣ ಸಚಿವ ಗೌತಮ್ ತತ್ವಾಲ್ ಮಸೂದೆ ಮಂಡಿಸಿದರು. ಧ್ವನಿಮತದ ಮೂಲಕ ಮಸೂದೆ ಅಂಗೀಕಾರ ಆಗಿದೆ ಎಂದು ಸಭಾಧ್ಯಕ್ಷ ನರೇಂದ್ರ ಸಿಂಗ್ ತೋಮರ್ ಅವರು ಪ್ರಕಟಿಸಿದರು.