ವಿಜಯ ರಾಘವೇಂದ್ರ ನಾಯಕರಾಗಿರುವ ‘ಶ್ರೀಮತಿ ಸಿಂಧೂರ‘ ಶೀಘ್ರದಲ್ಲೇ ತೆರೆಗೆ
ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿರುವ ‘ಶ್ರೀಮತಿ ಸಿಂಧೂರ’ ಚಿತ್ರವು ಜುಲೈ ಮಾಸಾಂತ್ಯದಲ್ಲಿ ತೆರೆಕಾಣಲಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಅನಂತರಾಜ್ ಆರ್. ನಿರ್ದೇಶಿಸಿದ್ದಾರೆ.ಸಿನಿಮಾವು ದೈವಭಕ್ತಿ ಅಂಶಗಳನ್ನೂ ಒಳಗೊಂಡಿದೆ ಎಂದಿದೆ ಚಿತ್ರತಂಡ. ‘ಉತ್ತಮವಾದ ಕಥೆ ಚಿತ್ರದಲ್ಲಿದ್ದು, ಸಂಸಾರದಲ್ಲಿ ದೈವಭಕ್ತಿಯ ಮಹತ್ವವನ್ನು ಈ ಸಿನಿಮಾ ಸಾರುತ್ತದೆ’ ಎ

ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿರುವ ‘ಶ್ರೀಮತಿ ಸಿಂಧೂರ’ ಚಿತ್ರವು ಜುಲೈ ಮಾಸಾಂತ್ಯದಲ್ಲಿ ತೆರೆಕಾಣಲಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಅನಂತರಾಜ್ ಆರ್. ನಿರ್ದೇಶಿಸಿದ್ದಾರೆ.ಸಿನಿಮಾವು ದೈವಭಕ್ತಿ ಅಂಶಗಳನ್ನೂ ಒಳಗೊಂಡಿದೆ ಎಂದಿದೆ ಚಿತ್ರತಂಡ. ‘ಉತ್ತಮವಾದ ಕಥೆ ಚಿತ್ರದಲ್ಲಿದ್ದು, ಸಂಸಾರದಲ್ಲಿ ದೈವಭಕ್ತಿಯ ಮಹತ್ವವನ್ನು ಈ ಸಿನಿಮಾ ಸಾರುತ್ತದೆ’ ಎನ್ನುತ್ತಾರೆ ವಿಜಯ ರಾಘವೇಂದ್ರ. ಪ್ರಿಯಾ ಚಿತ್ರದ ನಾಯಕಿಯಾಗಿ ನಟಿಸಿದ್ದು, ಇದು ಇವರ ಚೊಚ್ಚಲ ಸಿನಿಮಾ. ರೇಷ್ಮಾ ವಿ.ಗೌಡ, ಪ್ರಸನ್ನ ಬಾಗೀನ, ಗಣೇಶ್ ರಾವ್ ಕೇಸರ್ಕರ್, ಮಾನಸ ಸುಧೀರ್, ಮನೋಜ್, ರಿತೇಶ್, ಸ್ನೇಹಜಾಧವ್, ಮೈಸೂರು ರಮಾನಂದ್, ರೋಹಿತ್, ಅನುಪಮ, ನವನೀತ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಬೀದರ್ನ ಮಾರುತಿ ಸಿನಿಮಾದಲ್ಲಿ ಹನುಮಂತನಾಗಿ ಕಾಣಿಸಿಕೊಂಡಿದ್ದಾರೆ.ಪಿ.ಕೆ.ಎಚ್.ದಾಸ್ ಛಾಯಾಚಿತ್ರಗ್ರಹಣ, ಫೈವ್ಸ್ಟಾರ್ ಗಣೇಶ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಡಿ.ಎನ್.ನಾಗೀರೆಡ್ಡಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.vಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260721-51-1206693098