ಅಮೆರಿಕ–ಭಾರತ ವ್ಯಾಪಾರ ಒಪ್ಪಂದ ವಿರೋಧಿಸಿ `ದೆಹಲಿ ಚಲೋ’ – ಕಟ್ಟೆಯೊಡೆದ ರೈತರ ಆಕ್ರೋಶ, ಶಂಭು ಗಡಿ ಸೀಲ್
– ಶಂಭು ಗಡಿಯಲ್ಲಿ ಅರೆಸೇನಾ ಸಿಬ್ಬಂದಿ ಸೇರಿ 15 ಕಂಪನಿಗಳ ಭದ್ರತಾ ಪಡೆ ನಿಯೋಜನೆ – ಅಮೆರಿಕ ಒಪ್ಪಂದ ಜಾರಿಯಾದ್ರೆ ದೇಶದ ರೈತರಿಗೆ ಭಾರೀ ನಷ್ಟದ ಆತಂಕ ಚಂಡೀಗಢ: ಭಾರತ–ಅಮೆರಿಕ ನಡುವಿನ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದ (FTA)ದ ವಿರುದ್ಧ ಪಂಜಾಬ್ನ ರೈತರು ಸರವನ್ ಸಿಂಗ್ ಪಂಧೇರ್ ಅವರ ನೇತೃತ್ವದಲ್ಲಿ ‘ದೇಶ್ ಬಚಾವೋ ಮೋರ್ಚಾ’ ಹೆಸರಿನಲ್ಲಿ ಪ್ರತಿಭಟನೆ ಆರಂಭಿಸಿದ್ದ

– ಶಂಭು ಗಡಿಯಲ್ಲಿ ಅರೆಸೇನಾ ಸಿಬ್ಬಂದಿ ಸೇರಿ 15 ಕಂಪನಿಗಳ ಭದ್ರತಾ ಪಡೆ ನಿಯೋಜನೆ – ಅಮೆರಿಕ ಒಪ್ಪಂದ ಜಾರಿಯಾದ್ರೆ ದೇಶದ ರೈತರಿಗೆ ಭಾರೀ ನಷ್ಟದ ಆತಂಕ ಚಂಡೀಗಢ: ಭಾರತ–ಅಮೆರಿಕ ನಡುವಿನ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದ (FTA)ದ ವಿರುದ್ಧ ಪಂಜಾಬ್ನ ರೈತರು ಸರವನ್ ಸಿಂಗ್ ಪಂಧೇರ್ ಅವರ ನೇತೃತ್ವದಲ್ಲಿ ‘ದೇಶ್ ಬಚಾವೋ ಮೋರ್ಚಾ’ ಹೆಸರಿನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಮಂಗಳವಾರ (ಇಂದು) ನೂರಾರು ರೈತರು ʻದೆಹಲಿ ಚಲೋʼ ಕರೆಗೆ ಸ್ಪಂದಿಸಿ ಶಂಭು ಮತ್ತು ಖನೌರಿ ಗಡಿಗಳಲ್ಲಿ ಜಮಾಯಿಸಿದರು. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಆಡಳಿತವು ಶಂಭು ಗಡಿಯನ್ನ ಸಂಪೂರ್ಣವಾಗಿ ಬಂದ್ ಮಾಡಿದ್ದು, ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಸೆಕ್ಷನ್ 163 ಜಾರಿಗೊಳಿಸಿದೆ. ಅಮೆರಿಕ ಒಪ್ಪಂದ ಜಾರಿಯಾದ್ರೆ ಭಾರೀ ನಷ್ಟದ ಆತಂಕ ದೆಹಲಿ ಚಲೋಗೆ ಮುನ್ನ ರೈತರು ‘ಕಿಸಾನ್ ಘಾಟ್’ನಲ್ಲಿ 4 ಗಂಟೆಗಳ ಬೃಹತ್ ರ್ಯಾಲಿ ನಡೆಸಿದರು. ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ರೈತರ ಅಭಿಪ್ರಾಯವನ್ನು ಸರ್ಕಾರ ಕೇಳಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಈ ಒಪ್ಪಂದ ಜಾರಿಯಾದರೆ ಅಮೆರಿಕದಿಂದ ಅಗ್ಗದ ಬೆಲೆಗೆ ಸೋಯಾಬೀನ್, ಡ್ರೈ ಫ್ರೂಟ್ಸ್, ಹಾಲು ಮತ್ತು ಹಾಲಿನ ಉತ್ಪನ್ನಗಳು ಹಾಗೂ ಧಾನ್ಯಗಳು ಭಾರತೀಯ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಬರಲಿದೆ. ಇದರಿಂದ ಸಣ್ಣ ರೈತರು, ಕೃಷಿ ಕಾರ್ಮಿಕರು ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಶಂಭು ಗಡಿಯಲ್ಲಿ ಭಾರೀ ಭದ್ರತೆ ಹರಿಯಾಣ ಪೊಲೀಸರು ಶಂಭು ಮತ್ತು ಖನೌರಿ ಗಡಿಗಳಲ್ಲಿ ಕಾಂಕ್ರೀಟ್ ಬ್ಯಾರಿಕೇಡ್ಗಳು, ಅರೆಸೇನಾ ಪಡೆ ಹಾಗೂ ಭಾರೀ ಪೊಲೀಸ್ ಭದ್ರತೆಯನ್ ನಿಯೋಜಿಸಿದ್ದಾರೆ. ಗಡಿ ಮುಚ್ಚಿರುವುದರಿಂದ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಎಚ್ಚರಿಕೆ (ಟ್ರಾಫಿಕ್ ಅಲರ್ಟ್) ಜಾರಿಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ಗಡಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ಗಳು ಮತ್ತು ಭಾರೀ ಬ್ಯಾರಿಕೇಡ್ಗಳನ್ನು ಅಳವಡಿಸಿ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಇದೇ ವೇಳೆ ದೆಹಲಿ–ಕತ್ರಾ ಎಕ್ಸ್ಪ್ರೆಸ್ವೇ ಮೇಲೂ ಟ್ರಕ್ಗಳು ಮತ್ತು ಟ್ರೇಲರ್ಗಳನ್ನ ನಿಲ್ಲಿಸಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಅರೆಸೈನಿಕ ಪಡೆಗಳು ಹಾಗೂ ಹರಿಯಾಣ ಪೊಲೀಸರ ಹೆಚ್ಚುವರಿ ತಂಡಗಳನ್ನ ನಿಯೋಜಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಸದ್ಯಕ್ಕೆ ಪಂಜಾಬ್ನಿಂದ ಹರಿಯಾಣ ಗಡಿಗೆ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ತಿಳಿದುಬಂದಿದೆ. ಶಂಭು ಗಡಿ ಬಂದ್: ಪರ್ಯಾಯ ಸಂಚಾರ ಮಾರ್ಗಗಳು ಶಂಭು ಗಡಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ದೆಹಲಿ–ಪಂಜಾಬ್ ನಡುವಿನ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ದೆಹಲಿದಿಂದ ಪಂಜಾಬ್ಗೆ: ಮಾರ್ಗ 1: ಅಂಬಾಲಾ ಕ್ಯಾಂಟ್ – ಚಂಡೀಗಢ – ಲಾಲ್ರು – ಡೇರಾ ಬಸ್ಸಿ – ಜೀರ್ಕ್ಪುರ – ಪಂಜಾಬ್ ಮಾರ್ಗ 2: ಲಾಲ್ರು ಅಥವಾ ಡೇರಾ ಬಸ್ಸಿಯಿಂದ ಇತರೆ ಪರ್ಯಾಯ ಮಾರ್ಗಗಳ ಮೂಲಕ ಪಂಜಾಬ್ ಪ್ರವೇಶಿಸಬಹುದು. ಪಂಜಾಬ್ನಿಂದ ದೆಹಲಿಗೆ: ಮಾರ್ಗ 1: ರಾಜಪುರಾ – ಲಾಲ್ರು – ಡೇರಾ ಬಸ್ಸಿ – ಜೀರ್ಕ್ಪುರ – ಅಂಬಾಲಾ ಕ್ಯಾಂಟ್ – ದೆಹಲಿ ಮಾರ್ಗ 2: ರಾಜಪುರಾ, ಲಾಲ್ರು ಅಥವಾ ಡೇರಾ ಬಸ್ಸಿಯಿಂದ ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ಅಂಬಾಲಾ ಕ್ಯಾಂಟ್ ಮೂಲಕ ದೆಹಲಿ ತಲುಪಬಹುದು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡಲು ಆಡಳಿತ ಮನವಿ ಮಾಡಿದೆ.