ಮಾರುತಿ ಕಾರು ಬೆಲೆ ₹30 ಸಾವಿರದವರೆಗೆ ಏರಿಕೆ
ನವದೆಹಲಿ: ಕಚ್ಚಾ ವಸ್ತುಗಳ ಬೆಲೆಯಲ್ಲಿನ ಏರಿಕೆಯ ಪರಿಣಾಮವನ್ನು ಸರಿದೂಗಿಸಲು ವಿವಿಧ ಮಾದರಿಯ ವಾಹನಗಳ ಬೆಲೆಯನ್ನು ₹30 ಸಾವಿರದವರೆಗೆ ಹೆಚ್ಚು ಮಾಡುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಮಂಗಳವಾರ ತಿಳಿಸಿದೆ.ಬೆಲೆ ಹೆಚ್ಚಳವು ಆಗಸ್ಟ್ನಿಂದ ಜಾರಿಗೆ ಬರಲಿದೆ. ಬೆಲೆ ಏರಿಕೆಯ ಪ್ರಮಾಣದಲ್ಲಿ ಒಂದು ಮಾದರಿಯಿಂದ ಇನ್ನೊಂದು ಮಾದರಿಗೆ ವ್ಯತ್ಯಾಸ ಇರಲಿದೆ ಎಂದು ಕಂಪನಿಯು

ನವದೆಹಲಿ: ಕಚ್ಚಾ ವಸ್ತುಗಳ ಬೆಲೆಯಲ್ಲಿನ ಏರಿಕೆಯ ಪರಿಣಾಮವನ್ನು ಸರಿದೂಗಿಸಲು ವಿವಿಧ ಮಾದರಿಯ ವಾಹನಗಳ ಬೆಲೆಯನ್ನು ₹30 ಸಾವಿರದವರೆಗೆ ಹೆಚ್ಚು ಮಾಡುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಮಂಗಳವಾರ ತಿಳಿಸಿದೆ.ಬೆಲೆ ಹೆಚ್ಚಳವು ಆಗಸ್ಟ್ನಿಂದ ಜಾರಿಗೆ ಬರಲಿದೆ. ಬೆಲೆ ಏರಿಕೆಯ ಪ್ರಮಾಣದಲ್ಲಿ ಒಂದು ಮಾದರಿಯಿಂದ ಇನ್ನೊಂದು ಮಾದರಿಗೆ ವ್ಯತ್ಯಾಸ ಇರಲಿದೆ ಎಂದು ಕಂಪನಿಯು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಹೇಳಿದೆ.ಈಗಿನ ಪರಿಸ್ಥಿತಿಯಲ್ಲಿ ವಾಹನಗಳ ಬೆಲೆ ಹೆಚ್ಚಳ ಮಾಡಿ, ಬೆಲೆ ಏರಿಕೆಯ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಕಂಪನಿ ತಿಳಿಸಿದೆ. ಆದರೆ, ಏರಿಕೆಯ ಅತ್ಯಂತ ಕಡಿಮೆ ಪ್ರಮಾಣವನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ ಎಂದು ಅದು ಹೇಳಿದೆ.
Read the complete story at Prajavani