ಪ್ರೇಮ್ ನನಗಾಗಿ ಆರಂಭಿಸಿರುವ ‘ಪ್ರಶಸ್ತಿ’ ಅಭಿಯಾನ ಫ್ಲಾಪ್ ಸಾಂಗ್: ಹಂಸಲೇಖ
ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದು ಅಭಿಯಾನ ಆರಂಭಿಸಿದ್ದ ನಟ ನೆನಪಿರಲಿ ಪ್ರೇಮ್ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಹಂಸಲೇಖ ಅವರು ‘ಇದಕ್ಕೆ ನನ್ನ ಒಪ್ಪಿಗೆ ಇಲ್ಲ’ ಎಂದಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹಂಸಲೇಖ ಅವರು, ‘ಕನ್ನಡದಾಣೆ...ಇದಕ್ಕೆ ನನ್ನ
ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದು ಅಭಿಯಾನ ಆರಂಭಿಸಿದ್ದ ನಟ ನೆನಪಿರಲಿ ಪ್ರೇಮ್ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಹಂಸಲೇಖ ಅವರು ‘ಇದಕ್ಕೆ ನನ್ನ ಒಪ್ಪಿಗೆ ಇಲ್ಲ’ ಎಂದಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹಂಸಲೇಖ ಅವರು, ‘ಕನ್ನಡದಾಣೆ...ಇದಕ್ಕೆ ನನ್ನ ಒಪ್ಪಿಗೆಯಿಲ್ಲ. ಇದೊಂದು ಅನಗತ್ಯವಾದ ಅಭಿಮಾನದ ದುಡುಕು ; ಮತ್ತು ಪ್ರೀತಿಯ ತೊಂದರೆ...ಸೀನ್ ಗೂ : ಟ್ಯೂನ್ಗೂ ; ಲಿರಿಕ್ಸ್ಗೂ... ಹೊಂದಾಣಿಕೆಯೇ ಇಲ್ಲದ ಫ್ಲಾಪ್ ಸಾಂಗಿದು...! ದಯವಿಟ್ಟು ನಿಲ್ಲಿಸಿ. ನೆನಪಿರಲಿ, ಪ್ರೀತಿಯ ಪ್ರೇಮ್’ ಎಂದು ಬರೆದುಕೊಂಡಿದ್ದಾರೆ.'ಕನ್ನಡ ನಮ್ಮ ಹಕ್ಕಿನ ಭಾಷೆ. ಈ ಸತ್ಯವನ್ನು ಪ್ರತಿದಿನವೂ ಸಾಬೀತು ಪಡಿಸಬೇಕಾದ ಸಮಯದಲ್ಲಿದ್ದೇವೆ...ಅದಕ್ಕೆ ಬೇಕಾಗಿರುವುದು ಅಭಿಮಾನದ ಅಭಿಯಾನಗಳು...’ ಎಂದು ಮನವಿ ಮಾಡಿಕೊಂಡಿದ್ದಾರೆ. View this post on Instagram A post shared by Hamsalekha (@drhamsalekha23) ಅಭಿಯಾನ ಆರಂಭಿಸಿದ್ದ ಪ್ರೇಮ್‘ನಾದ ಬ್ರಹ್ಮ ಹಂಸಲೇಖ ಅವರಿಗೆ ಪದ್ಮ ಪುರಸ್ಕಾರ ಅಥವಾ ಜ್ಞಾನಪೀಠ ಪ್ರಶಸ್ತಿ ಸಲ್ಲಬೇಕು ಎಂಬುದರ ಕುರಿತಾಗಿ ಅಭಿಯಾನ ಶುರು ಮಾಡಲಿದ್ದೇನೆ. ಹಾಗಾಗಿ ಕನ್ನಡ ಚಿತ್ರರಂಗ, ಸಾಹಿತಿಗಳು, ಕನ್ನಡ ಚಿತ್ರ ಪ್ರೇಮಿಗಳು, ಮಾಧ್ಯಮದವರಿಗೂ, ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಭಾರತ ಕೇಂದ್ರ ಸರಕಾರಕ್ಕೆ ಮನವಿ. 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಹಾಗೂ ಸಂಗೀತ ಕೊಟ್ಟಂತಹ ಏಕೈಕ ಕನ್ನಡಿಗ ನಮ್ಮ ಕನ್ನಡ ಸಿನಿಮಾ ಹಾಗೂ ಸಾಹಿತ್ಯ ಲೋಕದ ಹೆಮ್ಮೆಗೆ ಸಲ್ಲಲೇ ಬೇಕಾದ ಗೌರವ. ಈ ಅಭಿಯಾನಕ್ಕೆ ನಿಮ್ಮ ಎಲ್ಲರ ಸಹಕಾರವಿರಲಿ’ ಎಂದು ಬರೆದುಕೊಂಡಿದ್ದರು. ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ನೀಡಬೇಕು: ಹಂಸಲೇಖ ಪರ ನೆನಪಿರಲಿ ಪ್ರೇಮ್ ಅಭಿಯಾನ