ಯಶ್ – ತಾರಾ ಸುತಾರಿಯಾ ‘ಮನಮೋಹಕ’ ಕೆಮಿಸ್ಟ್ರಿ!
ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾದಿಂದ ಮತ್ತೊಂದು ರೋಮ್ಯಾಂಟಿಕ್ ವೀಡಿಯೋ ಹಾಡು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ. ‘ತಬಾಹಿ’ ಹಾಡಿನ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಈಗ ‘ಮನಮೋಹಕ’ ಎಂಬ ಮಾಂಟಾಜ್ ಶೈಲಿಯ ಡ್ಯುಯೆಟ್ ಸಾಂಗ್ ರಿಲೀಸ್ ಆಗಿದೆ. ಯಶ್ ಹಾಗೂ ತಾರಾ ಸುತಾರಿಯಾ ನಡುವಿನ ನವಿರಾದ

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾದಿಂದ ಮತ್ತೊಂದು ರೋಮ್ಯಾಂಟಿಕ್ ವೀಡಿಯೋ ಹಾಡು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ. ‘ತಬಾಹಿ’ ಹಾಡಿನ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಈಗ ‘ಮನಮೋಹಕ’ ಎಂಬ ಮಾಂಟಾಜ್ ಶೈಲಿಯ ಡ್ಯುಯೆಟ್ ಸಾಂಗ್ ರಿಲೀಸ್ ಆಗಿದೆ. ಯಶ್ ಹಾಗೂ ತಾರಾ ಸುತಾರಿಯಾ ನಡುವಿನ ನವಿರಾದ ಪ್ರೀತಿ, ರೋಮ್ಯಾನ್ಸ್ ಮತ್ತು ಆಕರ್ಷಕ ಲುಕ್ ಈ ಹಾಡಿನ ಪ್ರಮುಖ ಹೈಲೈಟ್. ಈ ರೋಮ್ಯಾಂಟಿಕ್ ಹಾಡಿನಲ್ಲಿ ಯಶ್-ತಾರಾ ಜೋಡಿಯ ಜೊತೆಗೆ, ಯಶ್ ಅವರ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಯನತಾರಾ ಹಾಗೂ ಪ್ರೇಯಸಿ ಪಾತ್ರಧಾರಿ ಕಿಯಾರಾ ಅಡ್ವಾಣಿ ಅವರ ಕೆಲವೊಂದು ಸುಂದರ ದೃಶ್ಯಗಳು ಜಾಗ ಪಡೆದುಕೊಂಡಿರುವುದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಇದನ್ನೂ ಓದಿ: ರಕುಲ್ ಪ್ರೀತ್ ಸಿಂಗ್ ಅಭಿನಯಕ್ಕೆ ಯಶ್ ಫಿದಾ – ಶೂರ್ಪನಖಿ ಪಾತ್ರಕ್ಕೆ ಮೆಚ್ಚುಗೆ ಕನ್ನಡದ ಖ್ಯಾತ ಗೀತರಚನೆಕಾರ ಪ್ರಮೋದ್ ಮರವಂತೆ ಈ ಸುಂದರ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ತನಿಷ್ಕ್ ಬಾಗ್ಚಿ, ಫಹೀನ್ ಅಬ್ದುಲ್ಲಾ ಮತ್ತು ಅರ್ಸ್ಲಾಂ ನಿಝಾಮಿ ಸೇರಿ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಈ ಹಾಡು ಒಟ್ಟಿಗೆ ಬಿಡುಗಡೆಯಾಗಿದೆ. ಈಗಾಗಲೇ ರಿಲೀಸ್ ಆಗಿರುವ ಹಾಡುಗಳು ಸಿನ ಪ್ರಿಯರ ಮನಗೆದ್ದಿದ್ದು, ಚಿತ್ರತಂಡದ ಇನ್ನೂ 3 ವಿಶೇಷ ಹಾಡುಗಳು ಕಾಯ್ದಿರಿಸಲ್ಪಟ್ಟಿವೆ. ಸಿನಿಮಾ ತೆರೆಗೆ ಬರುವ ಮುನ್ನ ಒಂದೊಂದಾಗಿ ಈ ಹಾಡುಗಳನ್ನು ರಿಲೀಸ್ ಮಾಡಲು ಚಿತ್ರತಂಡ ಯೋಜಿಸಿದೆ.