ಬಲ್ಡೋಟಾ ಕಾರ್ಖಾನೆಯ ವಿರುದ್ಧ ರೈತರು, ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಕೊಪ್ಪಳ: ಜಿಲ್ಲೆಯಲ್ಲಿ ರೈತ ಹುತಾತ್ಮ ದಿನಾಚರಣೆ ಹಿನ್ನೆಲೆ ಅನ್ನದಾತರು ಸಿಡಿದೆದ್ದಿದ್ದಾರೆ. ಬಲ್ಡೋಟಾ ಕಾರ್ಖಾನೆಯ (Baldota Factory) ವಿರುದ್ಧ ರೈತರು, ಪರಿಸರ ಹೋರಾಟಗಾರರು ಮತ್ತು ವಿವಿಧ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿವೆ. ಬಲ್ಡೋಟಾ ಕಾರ್ಖಾನೆ ಎದುರು ಪ್ರತಿಭಟನಾ ಸಮಾವೇಶ ನಡೆಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 63ರಲ್ಲ

ಕೊಪ್ಪಳ: ಜಿಲ್ಲೆಯಲ್ಲಿ ರೈತ ಹುತಾತ್ಮ ದಿನಾಚರಣೆ ಹಿನ್ನೆಲೆ ಅನ್ನದಾತರು ಸಿಡಿದೆದ್ದಿದ್ದಾರೆ. ಬಲ್ಡೋಟಾ ಕಾರ್ಖಾನೆಯ (Baldota Factory) ವಿರುದ್ಧ ರೈತರು, ಪರಿಸರ ಹೋರಾಟಗಾರರು ಮತ್ತು ವಿವಿಧ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿವೆ. ಬಲ್ಡೋಟಾ ಕಾರ್ಖಾನೆ ಎದುರು ಪ್ರತಿಭಟನಾ ಸಮಾವೇಶ ನಡೆಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 63ರಲ್ಲಿಯೇ ರೈತರು ಕುರ್ಚಿಗಳನ್ನು ಹಾಕಿದ ಪರಿಣಾಮ, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಬಳಿಕ ಬಲ್ಡೋಟಾ ಕೆರೆಗೆ ನುಗ್ಗಿದ ರೈತರು ಕಾಂಪೌಂಡ್ ಒಡೆದು ಒಳನುಗ್ಗಿದ್ದಾರೆ. ಇದನ್ನೂ ಓದಿ: ಎಲ್ ನಿನೋ ಎಫೆಕ್ಟ್ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ ಕಾರ್ಖಾನೆ ಮುಂಭಾಗದ ಕಬ್ಬಿಣದ ಡೋರ್ ಮುರಿದು ಪ್ರವೇಶ ದ್ವಾರವನ್ನು ಧ್ವಂಸ ಮಾಡಿದ್ದಾರೆ. ಪರಿಣಾಮ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಬಿಡದಿಯಲ್ಲೂ ಟೌನ್ಶಿಪ್ ವಿರುದ್ಧ ರೈತರು ಹೋರಾಟ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆಗೆ ಭೂಮಿ ನೀಡಲ್ಲ ಎಂದು ರೈತರ ಪಟ್ಟು ಹಿಡಿದಿದ್ದು, ಕೂಡಲೇ ಸರ್ಕಾರ ಯೋಜನೆ ಕೈಬಿಡುವಂತೆ ಆಗ್ರಹಿಸಿದ್ದಾರೆ. ಇತ್ತ, ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ 2,300 ಎಕರೆ ಭೂಸ್ವಾಧೀನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ರೈತರ ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ರೈತರು, ಸರ್ಕಾರ ವಿರುದ್ಧ ಪಿಂಡ ಪ್ರದಾನ ಮಾಡಿ, ಭೂಸ್ವಾಧೀನ ನಿರ್ಧಾರವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದರು. ಇದನ್ನೂ ಓದಿ:ಜಾಗತಿಕ ‘ಎಲ್ ನಿನೋ’ ಹವಾಮಾನ ವೈಪರೀತ್ಯ & ಬರದ ಭೀತಿ ಎದುರಿಸಲು ಸರ್ಕಾರ ಕಾರ್ಯತಂತ್ರ