ಬೆಂಗಳೂರು: ಹೈಕೋರ್ಟ್ ಮುಂದೆ ಜುಲೈ 22ರಂದು ವಕೀಲರ ಧರಣಿ
ಬೆಂಗಳೂರು: ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿರುವ ನ್ಯಾಯಾಲಯಗಳಲ್ಲಿನ ನಿರಂತರ ಆಡಳಿತ ವೈಫಲ್ಯ ಹಾಗೂ ನ್ಯಾಯಾಲಯಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉದಾಸೀನತೆ ಖಂಡಿಸಿ, ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಬುಧವಾರ ಧರಣಿ ನಡೆಸಲು ತೀರ್ಮಾನಿಸಿದೆ.‘ಈ ಕುರಿತಂತೆ ಸಂಘವು ಇದೇ 13ರಂದು ನಡೆಸಿದ ತುರ್ತುಸಭೆಯಲ್ಲಿ ನಿರ್ಣಯ ಕೈಗೊಂ

ಬೆಂಗಳೂರು: ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿರುವ ನ್ಯಾಯಾಲಯಗಳಲ್ಲಿನ ನಿರಂತರ ಆಡಳಿತ ವೈಫಲ್ಯ ಹಾಗೂ ನ್ಯಾಯಾಲಯಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉದಾಸೀನತೆ ಖಂಡಿಸಿ, ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಬುಧವಾರ ಧರಣಿ ನಡೆಸಲು ತೀರ್ಮಾನಿಸಿದೆ.‘ಈ ಕುರಿತಂತೆ ಸಂಘವು ಇದೇ 13ರಂದು ನಡೆಸಿದ ತುರ್ತುಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಪ್ರತಿಭಟನೆಯಲ್ಲಿ ಎಲ್ಲಾ ವಕೀಲರು ಪಾಲ್ಗೊಳ್ಳಬೇಕು’ ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್ ಹಾಗೂ ಖಜಾಂಚಿ ಶ್ವೇತಾ ರವಿಶಂಕರ್ ಲಿಖಿತ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.ಸಂಘದ ತೀರ್ಮಾನದ ಅನುಸಾರ ಬುಧವಾರ (ಜುಲೈ 22) ಬೆಳಿಗ್ಗೆ 11:30 ಗಂಟೆಗೆ ಹೈಕೋರ್ಟ್ನ ‘ಗೋಲ್ಡನ್ ಜುಬಿಲಿ ಗೇಟ್’ ಮುಂದೆ ವಕೀಲರು ಧರಣಿ ನಡೆಸಲಿದ್ದಾರೆ.ಅಹವಾಲುಗಳು ಏನಿವೆ?ನ್ಯಾಯಾಲಯಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಹಾಗೂ ಗಂಭೀರ ಸ್ವರೂಪದ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೈಕೋರ್ಟ್ ರಿಜಿಸ್ಟ್ರಿ ಯಾವುದೇ ಕ್ರಮ ಕೈಗೊಂಡಿಲ್ಲ.ಹೈಕೋರ್ಟ್ನಲ್ಲಿ ಹೊಸ ಪ್ರಕರಣಗಳ ವಿಚಾರಣೆಗೆ ದಿನಾಂಕಗಳು ಸಿಗುತ್ತಿಲ್ಲವಾದ ಕಾರಣ ವಿಚಾರಣೆ ವಿಳಂಬವಾಗುತ್ತಿದೆ. ಇದರಿಂದ ದಾವೆದಾರರು ತೀವ್ರ ತೊಂದರೆಗೀಡಾಗಿದ್ದಾರೆ.ಬೆಂಗಳೂರು ನಗರ ಸಿವಿಲ್ ಕೋರ್ಟ್ನಲ್ಲಿ ಬರೋಬ್ಬರಿ 20 ನ್ಯಾಯಾಲಯಗಳು ನ್ಯಾಯಾಧೀಶರಿಲ್ಲದೆ ಖಾಲಿ ಬಿದ್ದಿವೆ. ಇದರಿಂದಾಗಿ ದಾವೆದಾರರಿಗೆ ಇನ್ನಿಲ್ಲದ ಅಸೌಕರ್ಯ ಉಂಟಾಗಿದೆ.ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಮತ್ತು ಮೇಯೊ ಹಾಲ್ ಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಎಎಬಿ 2026ರ ಏಪ್ರಿಲ್ನಲ್ಲಿ ಪತ್ರ ಬರೆದಿತ್ತು. ನಂತರ ಹಲವು ಬಾರಿ ಸಮಸ್ಯೆಗಳನ್ನು ಪುನರುಚ್ಚರಿಸಿದೆ. ಆದರೂ, ಈ ವಿಷಯಗಳ ಕುರಿತಂತೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ.ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೊಸ ಕಟ್ಟಡದಲ್ಲಿ (ಅನೆಕ್ಸ್) ಕೇವಲ ಒಂದೇ ಒಂದು ಲಿಫ್ಟ್ ಇರುವುದರಿಂದ, ವಕೀಲರು ಮತ್ತು ವಯಸ್ಸಾದ ಕಕ್ಷಿದಾರರು 7ನೇ ಮಹಡಿಯವರೆಗೆ ಮೆಟ್ಟಿಲು ಹತ್ತಿಯೇ ಹೋಗಬೇಕಾದ ಅನಿವಾರ್ಯತೆ ಇದೆ. ಈ ಶೋಚನೀಯ ಪರಿಸ್ಥಿತಿಯನ್ನು ಸರಿಪಡಿಸಲು ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ.