ಸಂಗಾತಿ ಮೇಲೆ ಆಸಕ್ತಿ ಇಲ್ಲ ಎಂದು ವಿಚ್ಛೇದನ ಪಡೆಯಲು ಸಾಧ್ಯವಿಲ್ಲ: ಹೈಕೋರ್ಟ್
ಬೆಂಗಳೂರು: ‘ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ, ವಿವಾಹ ಎಂದರೆ ಅದೊಂದು ಸಂಸ್ಕಾರಯುತ ಪವಿತ್ರ ಧಾರ್ಮಿಕ ಬಂಧನವೇ ಹೊರತು ಕರಾರಿನ ಅನುಬಂಧವಲ್ಲ (ಕಾಂಟ್ರ್ಯಾಕ್ಟ್)’ ಎಂದು ಸ್ಪಷ್ಟ ಪಡಿಸಿರುವ ಹೈಕೋರ್ಟ್, ‘ಒಬ್ಬ ವ್ಯಕ್ತಿ ತನ್ನ ಬಾಳ ಸಂಗಾತಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ ಎಂಬ ಕಾರಣಕ್ಕೆ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ’ ಎಂದು ತೀರ್ಪು ನೀಡಿದೆ.‘ಕೌಟುಂಬಿಕ ನ್ಯಾಯ

ಬೆಂಗಳೂರು: ‘ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ, ವಿವಾಹ ಎಂದರೆ ಅದೊಂದು ಸಂಸ್ಕಾರಯುತ ಪವಿತ್ರ ಧಾರ್ಮಿಕ ಬಂಧನವೇ ಹೊರತು ಕರಾರಿನ ಅನುಬಂಧವಲ್ಲ (ಕಾಂಟ್ರ್ಯಾಕ್ಟ್)’ ಎಂದು ಸ್ಪಷ್ಟ ಪಡಿಸಿರುವ ಹೈಕೋರ್ಟ್, ‘ಒಬ್ಬ ವ್ಯಕ್ತಿ ತನ್ನ ಬಾಳ ಸಂಗಾತಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ ಎಂಬ ಕಾರಣಕ್ಕೆ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ’ ಎಂದು ತೀರ್ಪು ನೀಡಿದೆ.‘ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆ-1984ರ ಕಲಂ 19(1)ರ ಅಡಿಯಲ್ಲಿ ವಿಚ್ಛೇದನದ ಡಿಕ್ರಿ ಆದೇಶ ಹೊರಡಿಸಬೇಕು’ ಎಂಬ 49 ವರ್ಷದ ಪತಿಯೊಬ್ಬರ ಕೋರಿಕೆಯನ್ನು ಮೈಸೂರಿನ ಕೌಟುಂಬಿಕ ನ್ಯಾಯಾಲಯದ IIIನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು 2026ರ ಮಾರ್ಚ್ 6ರಂದು ತಿರಸ್ಕರಿಸಿದ್ದರು.ಈ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ; ಇತರೆ ಮೊದಲ ಮೇಲ್ಮನವಿ (ಎಂಎಫ್ಎ) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಅರ್ಜಿದಾರ ಮತ್ತು ಪ್ರತಿವಾದಿ ಪತ್ನಿ ಇಬ್ಬರದೂ ಪ್ರೇಮ ವಿವಾಹ. ಇವರಿಗೆ ಪದವಿ ಅಭ್ಯಾಸ ಮಾಡುತ್ತಿರುವ ಮಗಳಿದ್ದಾಳೆ. ಆದರೆ, ಪತಿ ಮದುವೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂದು ಹೇಳಿಕೊಂಡು ತಮ್ಮ ತಪ್ಪಿನ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.‘ಮದುವೆಯಾದ ನಂತರ ಇಬ್ಬರೂ ಜತೆಯಾಗಿ ಜೀವನ ಸಾಗಿಸಬೇಕು. ಒಬ್ಬರು ಇನ್ನೊಬ್ಬರಲ್ಲಿ ಆಸಕ್ತಿ ಹೊಂದಿಲ್ಲ ಎಂಬ ಕಾರಣಕ್ಕೆ ಮದುವೆಯಿಂದ ದೂರ ಸರಿಯಲು ಸಾಧ್ಯವಿಲ್ಲ. ಹೀಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯ ವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.ಪ್ರಕರಣ: ಅರ್ಜಿದಾರರು 2003ರ ಡಿಸೆಂಬರ್ 15ರಂದು ಮದುವೆಯಾಗಿದ್ದರು. ಇಬ್ಬರದೂ ಅಂತರ್ಜಾತಿ ವಿವಾಹ. 2019ರಲ್ಲಿ ಮೊದಲ ಸುತ್ತಿನ ವ್ಯಾಜ್ಯದ ನಂತರ ಪತಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಪತ್ನಿ ಕಲಂ 9ರ ಅಡಿಯಲ್ಲಿ ದಾಂಪತ್ಯ ಹಕ್ಕುಗಳನ್ನು ಮರು ಸ್ಥಾಪಿಸುವಂತೆ ಕೋರಿದ್ದರು. ಎರಡೂ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿಯ ವೈವಾಹಿಕ ಸಂಬಂಧ ಮರುಸ್ಥಾಪನೆಯ ಅರ್ಜಿಯನ್ನು ಮಾನ್ಯ ಮಾಡಿತ್ತು. ಪತಿಯ ವಿಚ್ಛೇದನ ಕೋರಿಕೆ ಅರ್ಜಿಯನ್ನು ವಜಾಗೊಳಿಸಿತ್ತು.ನಂತರ ಪತಿ, ಕಲಂ 13 (1ಎ) ಅಡಿಯಲ್ಲಿ ಅರ್ಜಿ ಸಲ್ಲಿಸಿ, ‘ವೈವಾಹಿಕ ಸಂಬಂಧ ಮರುಸ್ಥಾಪನೆ ಆದೇಶದ ಹೊರತಾಗಿಯೂ ಪತ್ನಿ ಸಹಬಾಳ್ವೆಯನ್ನು ಪುನರ್ ಆರಂಭಿಸಿಲ್ಲ. ವಾಸ್ತವದ ಉದ್ದೇಶಗಳನ್ನು ಗಮನದಲ್ಲಿ ಇರಿಸಿಕೊಂಡು ನಡೆಸಲಾದ ಮನವೊಲಿಕೆ ಪ್ರಯತ್ನಗಳೆಲ್ಲಾ ವಿಫಲವಾಗಿವೆ. ಈ ಮದುವೆ ಮುರಿದುಬಿದ್ದಿದೆ. ಆದ್ದರಿಂದ, ವಿಚ್ಛೇದನ ಮಂಜೂರು ಮಾಡಬೇಕು‘ ಎಂದು ಕೋರಿದ್ದರು.