‘ಸಿಟಿ ಲೈಟ್ಸ್’ನಲ್ಲಿ ಪ್ರೇಮಕಥೆ: ‘ಕಂದಮ್ಮ ಕಂದಮ್ಮ’ ಹಾಡು ಬಿಡುಗಡೆ
‘ದುನಿಯಾ’ ವಿಜಯ್ ನಿರ್ದೇಶಿಸಿರುವ, ವಿನಯ್ ರಾಜ್ಕುಮಾರ್ ನಟನೆಯ ‘ಸಿಟಿ ಲೈಟ್ಸ್’ ಚಿತ್ರದ ಎರಡನೇ ಹಾಡು ‘ಕಂದಮ್ಮ ಕಂದಮ್ಮ’ ಸೋಮವಾರ(ಜುಲೈ 20) ಬಿಡುಗಡೆಯಾಯಿತು.‘ಸಲಗ’, ‘ಭೀಮ’ ಮೂಲಕ ನಿರ್ದೇಶಕರಾಗಿ ಯಶಸ್ಸು ಕಂಡಿರುವ ವಿಜಯ್ ಅವರ ನಿರ್ದೇಶನದ ಮೂರನೇ ಸಿನಿಮಾ ಇದಾಗಿದೆ. ಈ ಚಿತ್ರದ ಮೂಲಕ ತಮ್ಮ ಪುತ್ರಿ ಮೋನಿಷಾ ವಿಜಯ್ಕುಮಾರ್ ಅವರನ್ನು ಚಿತ್ರರಂಗಕ್ಕೆ ವಿಜಯ್

‘ದುನಿಯಾ’ ವಿಜಯ್ ನಿರ್ದೇಶಿಸಿರುವ, ವಿನಯ್ ರಾಜ್ಕುಮಾರ್ ನಟನೆಯ ‘ಸಿಟಿ ಲೈಟ್ಸ್’ ಚಿತ್ರದ ಎರಡನೇ ಹಾಡು ‘ಕಂದಮ್ಮ ಕಂದಮ್ಮ’ ಸೋಮವಾರ(ಜುಲೈ 20) ಬಿಡುಗಡೆಯಾಯಿತು.‘ಸಲಗ’, ‘ಭೀಮ’ ಮೂಲಕ ನಿರ್ದೇಶಕರಾಗಿ ಯಶಸ್ಸು ಕಂಡಿರುವ ವಿಜಯ್ ಅವರ ನಿರ್ದೇಶನದ ಮೂರನೇ ಸಿನಿಮಾ ಇದಾಗಿದೆ. ಈ ಚಿತ್ರದ ಮೂಲಕ ತಮ್ಮ ಪುತ್ರಿ ಮೋನಿಷಾ ವಿಜಯ್ಕುಮಾರ್ ಅವರನ್ನು ಚಿತ್ರರಂಗಕ್ಕೆ ವಿಜಯ್ ಪರಿಚಯಿಸುತ್ತಿದ್ದಾರೆ. ಹಾಡು ಬಿಡುಗಡೆಗೊಳಿಸಿ ಮಾತಿಗಿಳಿದ ವಿಜಯ್, ‘ನಾನು ನಿರ್ದೇಶಿಸಿದ್ದ ಸಿನಿಮಾಗಳು ಕ್ರೈಂ ಹಾಗೂ ಕಲ್ಟ್ ಸಿನಿಮಾಗಳಾಗಿದ್ದವು. ‘ಸಿಟಿ ಲೈಟ್ಸ್’ ಚೆಂದದ ಪ್ರೇಮಕಥೆಯೊಂದನ್ನು ಹೊಂದಿದೆ. ಈ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿ ರಿಲೀಸ್ಗೆ ಸಿದ್ಧವಾಗುತ್ತಿದ್ದೇವೆ. ‘ಸಲಗ’ ಹಾಗೂ ‘ಭೀಮ’ದ ಸಂದರ್ಭದಂತೆ ಮೊದಲು ಹಾಡುಗಳನ್ನು ಬಿಡುಗಡೆಗೊಳಿಸಿ ಸಿನಿಮಾ ರಿಲೀಸ್ ಮಾಡಲಿದ್ದೇವೆ. ‘ಸಿಟಿ ಲೈಟ್ಸ್’ನ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಇನ್ನೂ ನಾಲ್ಕು ಹಾಡುಗಳು ಇವೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸಲಿದ್ದೇವೆ’ ಎಂದರು.‘‘ಸಲಗ’ ಸಿನಿಮಾದಿಂದ ಚರಣ್ ರಾಜ್ ಹಾಗೂ ನಾಗಾರ್ಜುನ ಶರ್ಮಾ ಜೋಡಿ ನನಗೆ ಯಶಸ್ಸನ್ನೇ ತಂದಿದೆ. ಈ ಸಿನಿಮಾದಲ್ಲೂ ಆ ಕಾಂಬಿನೇಷನ್ ಮುಂದುವರಿದಿದೆ. ತಂದೆ–ತಾಯಿ ಮಕ್ಕಳನ್ನು, ಪ್ರೀತಿಸುವವರು ಪರಸ್ಪರ ಕರೆದುಕೊಳ್ಳುವುದೇ ‘ಚಿನ್ನಮ್ಮ..’, ‘ಕಂದಮ್ಮ’, ‘ಬಂಗಾರಿ..’ ಎಂಬ ಪದಗಳಿಂದ. ಇದನ್ನೇ ಆಧಾರವಾಗಿಟ್ಟುಕೊಂಡು ಈ ಹಾಡನ್ನು ಸಿದ್ಧಪಡಿಸಿದ್ದೇವೆ’ ಎಂದರು ವಿಜಯ್.ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ನೀಡಿದ ವಿಜಯ್, ‘ನನ್ನೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ವೀರ ಎನ್ನುವವರು ನಿರ್ದೇಶಿಸಲಿರುವ ಸಿನಿಮಾದಲ್ಲಿ ನಾನು ನಟಿಸಲಿದ್ದೇನೆ. ‘ಸಿಟಿ ಲೈಟ್ಸ್’ ಪೂರ್ಣಗೊಳಿಸಿ ಈ ಪ್ರಾಜೆಕ್ಟ್ಗೆ ಇಳಿಯಲಿದ್ದೇನೆ’ ಎಂದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260721-51-1918074971