ಹುಣಸೂರು: ನೇಣು ಬಿಗಿದುಕೊಂಡು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಹುಣಸೂರು (ಮೈಸೂರು): ಇಲ್ಲಿನ ಮಾರುತಿ ಬಡಾವಣೆಯಲ್ಲಿ ಕುಟುಂಬವೊಂದರ ನಾಲ್ವರು ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.ಹರೀಶ್ ಅಲಿಯಾಸ್ ಸ್ಯಾಡೋ (42), ಪತ್ನಿ ನಿಶ್ಚಿತಾ (34) ಮತ್ತು ಮಕ್ಕಳಾದ ನಿಕ್ಷಾ (12), ರಕ್ಷಾ( 8) ಮೃತಪಟ್ಟವರು.ಹರೀಶ್ ನಗರದಲ್ಲಿ ಫೈನ್ಯಾನ್ಸ್ ಮತ್ತು ಲೇವಾದೇವಿ ವ್ಯವಹಾರ ನಡೆಸುತ್ತಿದ್ದರು. ಮಂಗಳವಾರ ಮಧ್ಯಾಹ್ನ ಮನೆಯ ನೆಲಮಹಡಿಯಲ್ಲಿ ಹರೀಶ್ ಅವರ ಪ

ಹುಣಸೂರು (ಮೈಸೂರು): ಇಲ್ಲಿನ ಮಾರುತಿ ಬಡಾವಣೆಯಲ್ಲಿ ಕುಟುಂಬವೊಂದರ ನಾಲ್ವರು ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.ಹರೀಶ್ ಅಲಿಯಾಸ್ ಸ್ಯಾಡೋ (42), ಪತ್ನಿ ನಿಶ್ಚಿತಾ (34) ಮತ್ತು ಮಕ್ಕಳಾದ ನಿಕ್ಷಾ (12), ರಕ್ಷಾ( 8) ಮೃತಪಟ್ಟವರು.ಹರೀಶ್ ನಗರದಲ್ಲಿ ಫೈನ್ಯಾನ್ಸ್ ಮತ್ತು ಲೇವಾದೇವಿ ವ್ಯವಹಾರ ನಡೆಸುತ್ತಿದ್ದರು. ಮಂಗಳವಾರ ಮಧ್ಯಾಹ್ನ ಮನೆಯ ನೆಲಮಹಡಿಯಲ್ಲಿ ಹರೀಶ್ ಅವರ ಪತ್ನಿ ಹಾಗೂ ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಮಕ್ಕಳ ಬಾಯಿಗೆ ಪ್ಲಾಸ್ಟರ್ ಅಂಟಿಸಲಾಗಿತ್ತು. ಮೊದಲನೇ ಮಹಡಿಯಲ್ಲಿ ಹರೀಶ್ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರವಾದ ಕಾರಣ ಪತ್ತೆಯಾಗಿಲ್ಲ. ಹುಣಸೂರು ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಮುಂದುವರೆಸಿದ್ದಾರೆ.
Read the complete story at Prajavani