ಮಥುರಾ: ದೇಣಿಗೆ ಎಣಿಕೆಯಲ್ಲಿ ಸ್ಥಳೀಯ ಅಂಗಡಿಯವರು ಭಾಗಿ
ಮಥುರಾ: ಮಥುರಾದ ಶ್ರೀ ಕೃಷ್ಣ ದೇವಾಲಯದಲ್ಲಿ ಕಾಣಿಕೆ ಹುಂಡಿಗಳನ್ನು ತೆರೆಯುವಾಗ ಮತ್ತು ಎಣಿಸುವಾಗ ಸ್ಥಳೀಯ ಅಂಗಡಿಯವರು ಇರಲಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ‘ಎಣಿಕೆ ಪ್ರಕ್ರಿಯೆಯಲ್ಲಿ ಹೆಚ್ಚು ಪಾರದರ್ಶಕತೆ ತರಲು ಸ್ವತಂತ್ರ ವೀಕ್ಷಕರನ್ನು ಯೋಜಿಸುತ್ತಿದ್ದೇವೆ. ಇದಕ್ಕಾಗಿ ದೇವಾಲಯದ ಒಳಗೆ ಕಾರ್ಯನಿರ್ವಹಿಸುವ ಅಂಗಡಿಯವರಿಗಿಂತ ಉತ್ತಮ ಆಯ್

ಮಥುರಾ: ಮಥುರಾದ ಶ್ರೀ ಕೃಷ್ಣ ದೇವಾಲಯದಲ್ಲಿ ಕಾಣಿಕೆ ಹುಂಡಿಗಳನ್ನು ತೆರೆಯುವಾಗ ಮತ್ತು ಎಣಿಸುವಾಗ ಸ್ಥಳೀಯ ಅಂಗಡಿಯವರು ಇರಲಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ‘ಎಣಿಕೆ ಪ್ರಕ್ರಿಯೆಯಲ್ಲಿ ಹೆಚ್ಚು ಪಾರದರ್ಶಕತೆ ತರಲು ಸ್ವತಂತ್ರ ವೀಕ್ಷಕರನ್ನು ಯೋಜಿಸುತ್ತಿದ್ದೇವೆ. ಇದಕ್ಕಾಗಿ ದೇವಾಲಯದ ಒಳಗೆ ಕಾರ್ಯನಿರ್ವಹಿಸುವ ಅಂಗಡಿಯವರಿಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ’ ಎಂದು ಮಥುರಾ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನದ ಕಾರ್ಯದರ್ಶಿ ಕಪಿಲ್ ಶರ್ಮಾ ತಿಳಿಸಿದರು. ‘ದೇವಾಲಯದ ಆವರಣದೊಳಗೆ ಸುಮಾರು 20 ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಅಂಗಡಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ದೇಣಿಗೆ ಎಣಿಕೆಯು ದೇವಾಲಯದ ಕೆಂಪು ವಲಯದಲ್ಲಿ ನಡೆಯುತ್ತದೆ. ಅಲ್ಲಿಗೆ ಅವರು ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಕ್ರಮದ ಅಗತ್ಯವಿಲ್ಲ’ ಎಂದು ಹೇಳಿದರು.ಈ ಹೊಸ ವ್ಯವಸ್ಥೆಯಲ್ಲಿ, ಒಬ್ಬ ಅಥವಾ ಇಬ್ಬರು ಅಂಗಡಿಯವರು ತಿಂಗಳಿಗೊಮ್ಮೆ ನಡೆಯುವ ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.ಅಯೋಧ್ಯೆಯ ರಾಮಮಂದಿರ ಮತ್ತು ಬದರಿನಾಥ ಮಂದಿರದಲ್ಲಿ ದೇಣಿಗೆ ಕಳವು ಆರೋಪದ ಬಳಿಕ ಮಥುರಾದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.