ಸಿಜೆಪಿ ಪ್ರತಿಭಟನೆಯ ಡ್ರೋನ್ ವಿಡಿಯೋ ವೈರಲ್ — ತನಿಖೆ ಆರಂಭಿಸಿದ ದೆಹಲಿ ಪೊಲೀಸ್
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನಾ ಮೆರವಣಿಗೆಯ ಡ್ರೋನ್ ವಿಡಿಯೋ (Drone Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಈ ಕುರಿತು ದೆಹಲಿ ಪೊಲೀಸರು ಕಾನೂನು ತನಿಖೆ ಆರಂಭಿಸಿದ್ದಾರೆ. ಸಿಜೆಪಿ ವಕ್ತಾರ ಸೌರವ್ ದಾಸ್ ಅವರು ಎಕ್ಸ್ ಖಾತೆಯಲ್ಲಿ ಸಂಸತ್ ಮಾರ್ಗ ಪ್ರದೇಶದಲ್ಲಿ ನೆರೆದಿದ್ದ ಪ್ರತಿಭಟನಾಕಾರರ ಮೇಲ್ಭಾಗದ (Aerial View) ಡ್

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನಾ ಮೆರವಣಿಗೆಯ ಡ್ರೋನ್ ವಿಡಿಯೋ (Drone Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಈ ಕುರಿತು ದೆಹಲಿ ಪೊಲೀಸರು ಕಾನೂನು ತನಿಖೆ ಆರಂಭಿಸಿದ್ದಾರೆ. ಸಿಜೆಪಿ ವಕ್ತಾರ ಸೌರವ್ ದಾಸ್ ಅವರು ಎಕ್ಸ್ ಖಾತೆಯಲ್ಲಿ ಸಂಸತ್ ಮಾರ್ಗ ಪ್ರದೇಶದಲ್ಲಿ ನೆರೆದಿದ್ದ ಪ್ರತಿಭಟನಾಕಾರರ ಮೇಲ್ಭಾಗದ (Aerial View) ಡ್ರೋನ್ ದೃಶ್ಯಾವಳಿಯನ್ನು ಹಂಚಿಕೊಂಡಿದ್ದರು. ಸಂಸತ್ ಭವನ, ರಾಷ್ಟ್ರಪತಿ ಭವನ ಸೇರಿದಂತೆ ಸಂಸತ್ ಮಾರ್ಗ ಸುತ್ತಮುತ್ತಲಿನ ಪ್ರದೇಶಗಳು ದೇಶದ ಅತ್ಯಂತ ಸುರಕ್ಷಿತ ರೆಡ್ ಜೋನ್ (Red Zone) ವ್ಯಾಪ್ತಿಗೆ ಬರುತ್ತವೆ. ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಇಲ್ಲಿ ಡ್ರೋನ್, ಬಲೂನ್ ಅಥವಾ ಪ್ಯಾರಾಗ್ರೈಡರ್ಗಳನ್ನು ಹಾರಿಸುವುದು ಸಂಪೂರ್ಣ ನಿಷಿದ್ಧ. ಇದನ್ನೂ ಓದಿ: ʻಕಾಕ್ರೋಚ್ʼ ಕಿಚ್ಚು – 5 ಐಪಿಎಸ್ ಅಧಿಕಾರಿಗಳು ಸೇರಿ 118ಕ್ಕೂ ಹೆಚ್ಚು ಪೊಲೀಸರಿಗೆ ಗಾಯ; 70ಕ್ಕೂ ಹೆಚ್ಚು ಮಂದಿ ವಶಕ್ಕೆ Drone shot as of 12 noon. pic.twitter.com/zBmkxh8T0X — Saurav Das (@SauravDassss) July 20, 2026 ವಿಡಿಯೋದ ಸತ್ಯಾಸತ್ಯತೆ ಹಾಗೂ ಅನುಮತಿಯಿಲ್ಲದೆ ಡ್ರೋನ್ ಹಾರಿಸಿದ ವ್ಯಕ್ತಿ/ತಂಡವನ್ನು ಗುರುತಿಸಲು ದೆಹಲಿ ಪೊಲೀಸರು ಮುಂದಾಗಿದ್ದಾರೆ. ಡ್ರೋನ್ ನಿಯಮಾವಳಿಗಳ ಉಲ್ಲಂಘನೆಯಾಗಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಡ್ರೋನ್ ನಿಯಮಗಳ ಪ್ರಕಾರ ಅನುಮತಿಯಿಲ್ಲದೆ ರೆಡ್ ಜೋನ್ನಲ್ಲಿ ಡ್ರೋನ್ ಹಾರಿಸಿದರೆ 1 ಲಕ್ಷ ರೂ.ವರೆಗೆ ದಂಡ ಹಾಗೂ ವಿಮಾನ ಕಾಯ್ದೆಯಡಿ (Aircraft Act) ಪ್ರಕರಣ ದಾಖಲಿಸಿ ಡ್ರೋನ್ ವಶಪಡಿಸಿಕೊಳ್ಳುವ ಅವಕಾಶವಿದೆ. ಇದನ್ನೂ ಓದಿ: ‘ಕಾಕ್ರೋಚ್ʼ ಪ್ರತಿಭಟನೆ ಮುಗಿಸಲು ಮನವಿ ಮಾಡಿದ್ದೇನೆ – ಜೆಪಿ ನಡ್ಡಾರಿಂದ ಮಾತುಕತೆ ಬಗ್ಗೆ ಅಧಿಕೃತ ಮಾಹಿತಿ ನೀಟ್ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ಪ್ರತಿಭಟನಾಕಾರರು ಸಂಸತ್ತಿನತ್ತ ಮೆರವಣಿಗೆ ನಡೆಸಲು ಯತ್ನಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗಿಸಿದ್ದರು.