ದೆಹಲಿ: ಪ್ರತಿಭಟನೆ ವೇಳೆ ಬರ್ಗರ್ ಸೇವಿಸಿದ ಸಿಜೆಪಿ ವಕ್ತಾರ ವಜಾ
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಮೇಲೆ ಪೊಲೀಸರು ಲಾಠಿಚಾರ್ಚ್ ಮಾಡುತ್ತಿರುವ ವೇಳೆ ಪಕ್ಷದ ವಕ್ತಾರ ವಿಜೇತಾ ದಹಿಯಾ ಅವರು ಬರ್ಗರ್ ತಿನ್ನುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.‘ದಹಿಯಾ ಅವರ ನಡವಳಿಕೆ ಅಸಮಂಜಸ ಹಾಗೂ ತೀವ್ರ ಅಸೂಕ್ಷ್ಮವಾಗಿತ್ತು.

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಮೇಲೆ ಪೊಲೀಸರು ಲಾಠಿಚಾರ್ಚ್ ಮಾಡುತ್ತಿರುವ ವೇಳೆ ಪಕ್ಷದ ವಕ್ತಾರ ವಿಜೇತಾ ದಹಿಯಾ ಅವರು ಬರ್ಗರ್ ತಿನ್ನುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.‘ದಹಿಯಾ ಅವರ ನಡವಳಿಕೆ ಅಸಮಂಜಸ ಹಾಗೂ ತೀವ್ರ ಅಸೂಕ್ಷ್ಮವಾಗಿತ್ತು. ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾದದ್ದು ಮತ್ತು ಸ್ವೀಕಾರಾರ್ಹವಲ್ಲ’ ಎಂದು ಸಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.ದಹಿಯಾ ಅವರು ಜಂತರ್ ಮಂತರ್ನಲ್ಲಿ ಇದ್ದ ಆಹಾರ ಮಳಿಗೆ ಬಳಿ ಇರುವುದು ದೃಶ್ಯದಲ್ಲಿತ್ತು. ನೀವು ಪ್ರತಿಭಟನಕಾರರ ನಡುವೆ ಇರುವುದು ಬಿಟ್ಟು ಇಲ್ಲೇಕೆ ಇದ್ದೀರಿ ಎಂದು ವ್ಯಕ್ತಿಯೊಬ್ಬರು ಅವರಿಗೆ ಪ್ರಶ್ನಿಸಿದ್ದರು.ಟೀಕೆಗೆ ಪ್ರತಿಕ್ರಿಯಿದ ದಹಿಯಾ, ‘ಪ್ರತಿಭಟನಾ ಸ್ಥಳದಲ್ಲಿ ನಾನು ಎರಡು ರಾತ್ರಿಗಳಿಂದ ನಿದ್ರೆ ಮಾಡದಿರುವುದನ್ನು ಯಾರೂ ಗಮನಿಸುವುದಿಲ್ಲ. ಪ್ರತಿಭಟನೆ ಮಾಡುವುದೇ ನನ್ನ ಕೆಲಸ ಎಂಬಂತೆ ಹೊಣೆಯಾಗಿಸುತ್ತಿದ್ದೀರಿ. ನೀವು ನನ್ನನ್ನು ಈ ಹುದ್ದೆಗೆ ಚುನಾಯಿಸಿಲ್ಲ’ ಎಂದಿದ್ದಾರೆ.‘ನಾನು ಬರ್ಗರ್ ತಿಂದಿದ್ದೇ ಇಂದಿನ ದೊಡ್ಡ ಸುದ್ದಿ. ಒಬ್ಬ ವ್ಯಕ್ತಿ ಏಕೆ ಬರ್ಗರ್ ತಿನ್ನುತ್ತಾನೆ? ಹಸಿವಾದ ಕಾರಣಕ್ಕೆ ತಾನೆ. ನಾನು ಕೂಡ ಹಸಿವಾದ ಕಾರಣಕ್ಕೆ ಬರ್ಗರ್ ತಿಂದಿದ್ದೇನೆ. ಏನಾದರೂ ಒಳ್ಳೆಯ ಆಹಾರ ತಿಂದರೆ ಮನಸಿಗೆ ಖುಷಿಯಾಗುತ್ತದೆ’ ಎಂದು ಬರೆದುಕೊಂಡಿರುವ ಅವರು, ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.